ರಾಜ್ಯ

ದಿಢೀರ್ ಒತ್ತುವರಿ ತೆರವು ಕಾರ್ಯಾಚರಣೆ: ಮನೆ ಮಠ ಕಳೆದುಕೊಂಡ ಜನರಿಂದ ಚೆಲ್ಲಾಪಿಲ್ಲಿಯಾದ ವಸ್ತುಗಳ ಸಂಗ್ರಹ!

Vishwanath S

ಕಾಗವಾಡ: ಒಂದು ಕಡೆ ಗಡ ಗಡ ಅನ್ನೋ ಜೆಸಿಬಿಗಳ ಶಬ್ದ ಇನ್ನೊಂದೆಡೆ ಜನ ತಮ್ಮ ವಸ್ತುಗಳನ್ನು ತೆಗೆದುಕೊಳ್ಳುವುದರಲ್ಲಿ ಬಿಜಿ ಇವೆಲ್ಲ ಕಂಡು ಬಂದಿರುವುದು ಬೆಳಗಾವಿ ಜಿಲ್ಲೆ ಕಾಗವಾಡ ತಾಲೂಕಿನ ಉಗಾರ ಪಟ್ಟಣದಲ್ಲಿ. 

ಹೌದು ಉಗಾರ ಪಟ್ಟಣದಲ್ಲಿ ಮುಂಜಾನೆ ಅಧಿಕಾರಿಗಳ ದಂಡು ಆಗಮಿಸಿ ಒತ್ತುವರಿ ತೆರವು ಕಾರ್ಯಾಚರಣೆಗೆ ಮುಂದಾಗಿದೆ. ಉಗಾರ ಪಟ್ಟಣದ ಬಸ್ ನಿಲ್ದಾಣದಿಂದ ಕಾಗವಾಡ ಕ್ರಾಸ್ ವರೆಗೆ ರಸ್ತೆ ಅಗಲಿಕರಣ ಮಾಡಲು ಮುಂದಾದರು. ರಸ್ತೆಗಳ ಮೇಲೆ‌ ಬಂದಿರುವ ಮನೆಗಳನ್ನು ಆಡಳಿತ ಸಂಪೂರ್ಣ ನೆಲಸಮಗೊಳಿಸಿತು. ಅಲ್ಲದೇ ಪೊಲೀಸ್ ಇಲಾಖೆ, ತಹಸೀಲ್ದಾರ ಪಟ್ಟಣದ ಚೀಪ್ ಆಫೀಸರ್, ಸೇರಿ ಸಂಬಂಧಿಸಿದ ಅಧಿಕಾರಿಗಳ ನೇತೃತ್ವದಲ್ಲಿ ಈ ತೆರವು ಕಾರ್ಯಾಚರಣೆ ಜೋರಾಗಿ ನಡೆಯಿತು. ಈ ಬಗ್ಗೆ ಚೀಪ್ ಆಫೀಸರ್ ಕೆ ಎಸ್ ಬಾಗೋಜಿ ಮಾತನಾಡಿ, ನಾವು ಕೋರ್ಟ ಆದೇಶದಂತೆ ಕೆಲಸ‌ ಮಾಡುತ್ತಿದ್ದೇವೆ ಎಂದಿದ್ದಾರೆ.

ಇನ್ನೂ ರಸ್ತೆ ಅಗಲಿಕರಣದ ವೇಳೆ ‌ಸಾರ್ವಜನಿಕರು ವಿರೋಧ‌ ನಡೆಸಿದರು. ವಿರೋಧದ ನಡುವೆಯೂ ಕಾರ್ಯಾಚರಣೆ ಜೋರಾಗಿತ್ತು. ಇಂದು ಏಕಾಏಕಿ ಬಂದು ಪುರಸಭೆ ಅಧಿಕಾರಿಗಳು ತೆರವು ಕಾರ್ಯ ನಡೆಸುತ್ತಿದ್ದಾರೆ ನಮ್ಮ ಮನೆಗಳಲ್ಲಿನ ವಸ್ತುಗಳನ್ನು ಸಹ ತೆಗೆದುಕೊಳ್ಳಲು ಸಮಯ ಕೊಟ್ಟಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ನಲ್ಲಿ ತಡೆಯಾಜ್ಞೆ ಇದೆ ಆದ್ರು ಸಹ ತೆರುವು ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ಸ್ಥಳಿಯರು ಆರೋಪಿಸಿದ್ದಾರೆ. ಆದರೆ ಅಧಿಕಾರಿಗಳ ಕೇಳಿದರೆ ಕೋರ್ಟ ಆದೇಶ ಇದೆ ಎಂದು ಹೇಳುತ್ತಿದ್ದಾರೆ. 

ಅಲ್ಲದೇ ಒತ್ತುವರಿ ತೆರವಿನ ವಿಚಾರದಲ್ಲಿ ಈಗ ಅಧಿಕಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ಒಡುಕು ಉಂಟಾಗಿದೆ. ಯಾವುದೇ ರೀತಿಯಲ್ಲಿ ಒತ್ತುವರಿ ಆಗುವುದನ್ನು ಹೇಳಿಲ್ಲ ಎಂದರೆಲ್ಲದ ಪುರಸಭೆ, ತಹಸೀಲ್ದಾರ ಸೇರಿದಂತೆ ಇನ್ನೀತರ ಅಧಿಕಾರಿಗಳ ಹಾಗೂ ಸಾರ್ವಜನಿಕರ ಮದ್ಯೆ ವಾಕ್ ಸಮರ ಜೋರಾಗಿದ್ದು ಎಲ್ಲಿಗೆ ಹೋಗಿ ನಿಲ್ಲುತ್ತದೆ ಕಾದು ನೋಡಬೇಕಿದೆ.

SCROLL FOR NEXT