ರಾಜ್ಯ

ರಾಜ್ಯದಲ್ಲಿ ಖಾಲಿ ಇರುವ 30 ಸಾವಿರ ಶಾಲಾ ಶಿಕ್ಷಕರ ಭರ್ತಿಗೆ ಕ್ರಮ: ಸುರೇಶ್ ಕುಮಾರ್

Vishwanath S

ಚಾಮರಾಜನಗರ: ರಾಜ್ಯದಲ್ಲಿ ಖಾಲಿ ಇರುವ 30 ಸಾವಿರ ಶಾಲಾ ಶಿಕ್ಷಕರ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಚಾಮರಾಜನಗರದಲ್ಲಿ ತಿಳಿಸಿದ್ದಾರೆ.

ಮಾಧ್ಯಮದವರಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಾ ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಮಾಧ್ಯಮಿಕ ಹಾಗೂ ಪ್ರೌಢಶಾಲೆಗಳಲ್ಲಿ 30 ಸಾವಿರ ಶಿಕ್ಷಕರ ಕೊರತೆಯಿದ್ದು ಇದನ್ನು ಸರ್ಕಾರ ಬಹಳ ಗಂಭೀರವಾಗಿ ಪರಿಗಣಿಸಿದ್ದು ಭರ್ತಿ ಮಾಡಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು ಈಗಾಗಲೇ ಮೊದಲನೇ ಹಂತದಲ್ಲಿ 10,650 ಶಿಕ್ಷಕರುಗಳ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಿದ್ದು ಎರಡನೇ ಹಂತದಲ್ಲಿ ಮತ್ತಷ್ಟು ಶಿಕ್ಷಕರನ್ನು ನೇಮಿಸಿಕೊಳ್ಳಲಾಗುವುದು.

ಇನ್ನೂ ಮೂರು ವರ್ಷದೊಳಗೆ ಖಾಲಿ ಇರುವ 30,000 ಶಾಲಾಶಿಕ್ಷಕರ ಭರ್ತಿಗೆ ಕ್ರಮ ವಹಿಸಲಾಗುವುದು ಎಂದ ಅವರು ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಕೊರತೆಯನ್ನು ನೀಗಿಸುವ ಸಲುವಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ವರ್ಷದ ಜೂನ್ ತಿಂಗಳಿನಿಂದಲೇ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು ಅವರಿಗೆ ಮೊದಲು ತರಬೇತಿ ನೀಡಿ ಅನಂತರ ಬೋಧನೆಗೆ ಅವಕಾಶ ಕಲ್ಪಿಸಿಕೊಡಲಾಗುವುದು ಇದರಲ್ಲಿ ಪೋಷಕರಿಗೆ ಯಾವುದೇ ಗೊಂದಲ ಬೇಡ ಎಂದು ಸ್ಪಷ್ಟಪಡಿಸಿದರು.

ಸುಳ್ವಾಡಿ ಸಂತ್ರಸ್ತ ವಿಶ್ವನಾಥ್ ಗೆ ಪ್ರವಾಸಿ ಟ್ಯಾಕ್ಸಿ!


ಸುಳ್ವಾಡಿ ಸಂತ್ರಸ್ತರಾದ ಬಿದರಹಳ್ಳಿ ನಿವಾಸಿ ವಿಶ್ವನಾಥ್ ಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಸುರೇಶ್ ಕುಮಾರ್ ಅವರು ಪ್ರವಾಸೋದ್ಯಮ ಇಲಾಖೆಯ ಸಹಾಯಧನ ಸೌಲಭ್ಯದ ಪ್ರವಾಸಿ ಟ್ಯಾಕ್ಸಿಯನ್ನು ವಿತರಿಸಿದರು.

ವರದಿ: ಗುಳಿಪುರ ನಂದೀಶ

SCROLL FOR NEXT