ರಾಜ್ಯ

ಸಂವಿಧಾನದ ಮೂಲಭೂತ ಅಂಶವನ್ನು ಬದಲಿಸಲು ಕೋರ್ಟ್ ಗೆ ಅನುಮತಿ ಇಲ್ಲ: ಮೀಸಲಾತಿ ಕುರಿತ ತೀರ್ಪಿಗೆ ಸಿದ್ದರಾಮಯ್ಯ 

Raghavendra Adiga

ಬೆಂಗಳೂರು: ಮೀಸಲಾತಿ ಮೂಲಭುತ ಹಕ್ಕಲ್ಲ ಎಂದಿರುವ ಸುಪ್ರೀಂ ಕೋರ್ಟ್ ಸಂವಿಧಾನದ ಆಶಯದ ವಿರುದ್ಧವಾಗಿ ತೀರ್ಪು ನೀಡಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 

ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಕಚೇರಿಗೆ ಆಗಮಿಸಿದ್ದ ಅವರು ಸಂವಿಧಾನದ ಆರ್ಟಿಕಲ್ ೧೬,/೪ಆರ್ಟಿಕಲ್ ೧೬/೪ಎ ಸೇರಿ ಅನೇಕ ವಿಭಾಗಗಳಲ್ಲಿ ಮೀಸಲಾತಿಯ ಕುರಿತು ಹೇಳಲಾಗಿದ್ದು ಇದು ಸಂವಿಧಾನದಲ್ಲೇ ಅಳವಡಿಕೆಯಾಗಿರುವ ಕಾರಣ ಕೋರ್ಟ್ ಈ ಮೀಸಲಾತಿಗಳ ವಿರುದ್ಧ ಹೇಳುವುದು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿರಲಿದೆ ಎಂದರು. 

ಯಾರಿಗೆ ಅಗತ್ಯವಿರುತ್ತದೆ ಅವರಿಗೆ ಮೀಸಲಾತಿ ಕೊಡಬೇಕೆಂದು ಸಂವಿಧಾನ ಹೇಳಿದೆ ಆದರೆ ಸುಪ್ರೀಂ ಕೋರ್ಟ್ ಉದ್ಯೋಗ ನೇಮಕಾತಿ ಹಾಗೂ ಭಡ್ತಿಗಳಲ್ಲಿ ಮೀಸಲಾತಿ ನೀಡುವುದು ಮೂಲಭೂತ ಹಕ್ಕಲ್ಲ ಎಂದಿದೆ.ಆದರೆ ಇದು ಅಂತಿಮವಲ್ಲ  ಸಾಮಾಜಿಕ ನ್ಯಾಯ, ಪ್ರಜಾಪ್ರಭುತ್ವ ಎಲ್ಲವೂ ಸಂವಿಧಾನದ ಮೂಲಭೂತ ಅಂಶಗಳು. ಇದನ್ನು ಸುಪ್ರೀಂ ಕೋರ್ಟ್ ಸಹ ಬದಲಿಸಲು ಸಾಧ್ಯವಿಲ್ಲ ಎಂದು ಅವರು ಹೇಳೀದ್ದಾರೆ.

SCROLL FOR NEXT