ಬೆಂಗಳೂರು: ಕುವೆಂಪು ಅವರ ಮಲೆಗಳಲ್ಲಿ ಮಧುಮಗಳು ಕಾದಂಬರಿಯನ್ನು ನಾಟಕಕ್ಕೆ ತಂದು 9 ಗಂಟೆಗಳ ಕಾಲ, 100 ಯಶಸ್ವಿ ಪ್ರದರ್ಶನಗಳನ್ನು ಯಶಸ್ವಿಗೊಳಿಸಿರುವ ರಂಗಕರ್ಮಿ ಸಿ ಬಸವಲಿಂಗಯ್ಯ ಈಗ ಇಂಥಹದ್ದೇ ಒಂದು ನಾಟಕವನ್ನು ಬಸವಣ್ಣನವರ ಕುರಿತು ಯೋಜಿಸಿದ್ದಾರೆ.
800 ವರ್ಷಗಳ ಹಿಂದಿದ್ದ ಕರ್ನಾಟಕದ ವಚನ ಚಳುವಳಿಯನ್ನು ಆಯ್ಕೆ ಮಾಡಿಕೊಂಡಿರುವ ಬಸವಲಿಂಗಯ್ಯ ಅವರು ಹೇಳುವುದು ಹೀಗೆ: ಈ ಬಾರಿ ಸವಾಲುಗಳು ಹೆಚ್ಚು. ಪ್ರೇಕ್ಷಕರನ್ನು 800 ವರ್ಷದ ಹಿಂದಕ್ಕೆ ಕರೆದೊಯ್ಯಬೇಕು. ಮುಂದಿನ ನಾಟಕ ಸಂತ ಬಸವಣ್ಣನವರ ಕುರಿತು. ವಚನ ಕಲ್ಯಾಣ ನಾಟಕದಲ್ಲಿ 150 ನಟರಿರುತ್ತಾರೆ.
ಅನುಭವ ಮಂಟಪ (ಬಸವಣ್ಣನವರು 12 ನೇ ಶತಮಾನದಲ್ಲಿ ಸ್ಥಾಪಿಸಿದ ಮೊದಲ ಸಂಸತ್) ಕ್ಕೆ ವೇದಿಕೆ ನಿರ್ಮಾಣ ಮಾಡಬೇಕು ಈ ಬಾರಿ ಕಲಾಗ್ರಾಮವಷ್ಟೇ ಅಲ್ಲದೇ ಅನುಭವ ಮಂಟಪ ಪ್ರಾರಂಭವಾದ ಬೀದರ್ ಜಿಲ್ಲೆಯ ಬಸವ ಕಲ್ಯಾಣದಲ್ಲಿಯೂ ನಾಟಕ ಪ್ರದರ್ಶನ ಮಾಡಲಿದ್ದೇವೆ. ಈ ರೀತಿಯ ಪ್ರಯೋಗ ಮಾಡಲು ಉತ್ತರ ಕರ್ನಾಟಕದಿಂದ ಬೇಡಿಕೆ ಇದೆ, ಮಾರ್ಚ್-ಏಪ್ರಿಲ್ ನಲ್ಲಿ ಪ್ರದರ್ಶನ ಕಾಣಲಿದೆ" ಎಂದು ಹೇಳಿದ್ದಾರೆ
2010 ರಲ್ಲಿ ಸಿ ಬಸವಲಿಂಗಯ್ಯ ಅವರು ಕುವೆಂಪು ಅವರ ಮಲೆಗಳಲ್ಲಿ ಮಧುಮಗಳು ಕಾದಂಬರಿಯನ್ನು ನಾಟಕಕ್ಕೆ ತಂದು 100 ಕಲಾವಿದರ ತಂಡದಿಂದ 9 ಗಂಟೆಗಳ ಪ್ರದರ್ಶನದ ವ್ಯವಸ್ಥೆ ಮಾಡಿದ್ದರು. ಕವಿ ಕೆವೈ ನಾರಾಯಣ ಸ್ವಾಮಿ ಇದನ್ನು ನಾಟಕ ರೂಪಕ್ಕೆ ಅಳವಡಿಸಿದ್ದರು. ಫೆ.14 ರಂದು ಶುಕ್ರವಾರ ಈ ನಾಟಕ ಬೆಂಗಳೂರಿನ ಕಲಾಗ್ರಾಮದಲ್ಲಿ 100 ನೇ ಪ್ರದರ್ಶನ ಕಂಡಿದೆ.
ಸರ್ಕಾರದಿಂದ ಈ ಪ್ರಯತ್ನಕ್ಕೆ 30 ಲಕ್ಷ ರೂಪಾಯಿ ಅನುದಾನ ಬಂದಿದ್ದು, 20 ಲಕ್ಷ ರೂಪಾಯಿ ಟೆಕೆಟ್ ಗಳ ಮೂಲಕ ಸಂಗ್ರಹವಾಗಿದೆ. 100 ಕಲಾವಿದರನ್ನು ನಿರ್ವಹಣೆ ಮಾಡಲು, ವ್ಯವಸ್ಥೆಗಾಗಿ ಇಷ್ಟು ಹಣ ಬೇಕೆಂದು ಹೇಳುತ್ತಾರೆ ಸಿ ಬಸವಲಿಂಗಯ್ಯ