ರಾಜ್ಯ

ಗೃಹ ಭಾಗ್ಯ: 60 ಪೌರ ಕಾರ್ಮಿಕರಿಗೆ ಫ್ಲ್ಯಾಟ್ ವಿತರಿಸಿದ ಮೇಯರ್

Manjula VN

ಬೆಂಗಳೂರು: ಬಿಬಿಎಂಪಿಯ ಪಶ್ಚಿಮ ವಲಯದ 60 ಕಾಯಂ ಪೌರಕಾರ್ಮಿಕರಿಗೆ ಪೌರಕಾರ್ಮಿಕರ ಗೃಹ ಭಾಗ್ಯ ಯೋಜನೆಯಡಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ಮಿಸಿರುವ ಮನೆಗಳ ಹಕ್ಕು ಪತ್ರವನ್ನು ಮೇಯರ್ ಎಂ.ಗೌತಮ್ ಕುಮಾರ್ ವಿತರಣೆ ಮಾಡಿದರು. 

ಸೋಮವಾರ ಮಲ್ಲೇಶ್ವರಂನ ಐಪಿಪಿ ಕೇಂದ್ರದಲ್ಲಿ ನಡೆದ ಸಮಾರಂಭದಲ್ಲಿ ಪೌರಕಾರ್ಮಿಕರಿಗೆ ಹತ್ತುಪತ್ರ ವಿತರಿಸಲಾಯಿತು. 

ಕಾರ್ಯಕ್ರಮಮದಲ್ಲಿ ಉಪ ಮೇಯರ್ ರಾಮಮೋಹನ್ ರಾಜು, ಸಾರ್ವಜನಿಕ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಜಿ. ಮಂಜುನಾಥ್ ರಾಜು, ವಲಯ ವಿಶೇಷ ಆಯುಕ್ತ ಬಸವರಾಜು, ಪಶ್ಚಿಮ ವಲಲಯ ಜಂಟಿ ಆಯುಕ್ತ ಚಿದಾಂದ್ ಮೊದಲಾದವರು ಉಪಸ್ಥಿತರಿದ್ದರು. 

ಕಾಯಂ ಪೌರಕಾರ್ಮಿಕರು 10 ರಿಂದ 15 ವರ್ಷ ಸೇವೆ ಸಲ್ಲಿಸಿರಬೇಕು. ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಲ್ಲಿ ಆದ್ಯತೆ ಮೇರೆಗೆ ಫಲಾನುಭವಿಗಳನ್ನು ಪರಿಗಣಿಸಲಾಗಿದೆ ಎಂದು ತಿಳಿದುಬಂದಿದೆ. 

SCROLL FOR NEXT