ರಾಜ್ಯ

ಪ್ರತಿಭಟನೆಯಲ್ಲಿ ಅಹಿತಕರ ಘಟನೆ ನಡೆದರೆ ಆಯೋಜಕರೇ ಹೊಣೆ: ಭಾಸ್ಕರ್ ರಾವ್

Lingaraj Badiger

ಬೆಂಗಳೂರು: ನಗರದಲ್ಲಿ‌ ಸಂಜೆ ಪೌರತ್ವ ತಿದ್ದುಪಡಿ ಕಾಯಿದೆ ಮತ್ತು ಎನ್​ಆರ್​ಸಿ  ವಿರೋಧಿಸಿ ಪ್ರತಿಭಟನೆ ನಡೆಯಲಿದ್ದು, ಯಾವುದೇ ಅಹಿತಕರ ಘಟನೆ ಸಂಭವಿಸಿದರೇ, ಆಯೋಜಕರೇ  ಹೊಣೆಗಾರರು ಎಂದು ನಗರ ಪೊಲೀಸ್ ಆಯುಕ್ತ ಎನ್ ಭಾಸ್ಕರ್ ರಾವ್ ಅವರು ಖಡಕ್ ಎಚ್ಚರಿಕೆ  ನೀಡಿದ್ದಾರೆ.

ಸಂಸದ ಅಸದುದ್ದೀನ್​ ಉವೈಸಿ ಮತ್ತು ಮಾಜಿ ಪ್ರಧಾನಿ ಎಚ್​.ಡಿ.ದೇವೆಗೌಡ ಅವರು ಈ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸ್​ ಆಯುಕ್ತ  ಭಾಸ್ಕರ್​ ರಾವ್​ ಖಡಕ್​ ಎಚ್ಚರಿಕೆ ನೀಡಿದ್ದಾರೆ.

ಸದಾ ವಿವಾದಾತ್ಮಕ ಹೇಳಿಕೆ ನೀಡುವ ಅಸದುದ್ದೀನ್​ ಒವೈಸಿ ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿರುವುದರಿಂದ ಈ ಕುರಿತು ಪ್ರತಿಕ್ರಿಯಿಸಿದ ಆಯುಕ್ತರು, “ಎಲ್ಲರಿಗೂ ವಾಕ್​  ಸ್ವಾತಂತ್ರ್ಯ ಇದೆ. ವಾಕ್​ ಸ್ವಾತಂತ್ರ್ಯದ ಜತೆ ವಾಕ್​ ಜವಾಬ್ದಾರಿಯೂ ಇರಬೇಕು.  ಪ್ರತಿಭಟನೆಯಲ್ಲಿ ಏನೇ ಸಂಭವಿಸಿದರೂ ಅದಕ್ಕೆ ಪ್ರತಿಭಟನೆಯ ಆಯೋಜಕರೇ ಹೊಣೆ” ಎಂದು  ಹೇಳಿದ್ದಾರೆ.

ಇಂದು ಸಂಜೆ ನಡೆಯಲಿರುವ ಪ್ರತಿಭಟನೆಗೆ ಎಲ್ಲಾ ರೀತಿಯ ಪೂರ್ವಭಾವಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

SCROLL FOR NEXT