ರಾಜ್ಯ

ಮಹದಾಯಿ: ಐ ತೀರ್ಪಿನ ಅಧಿಸೂಚನೆ ಹೊರಡಿಸಲು ಕೇಂದ್ರಕ್ಕೆ ಸುಪ್ರೀಂ ಸೂಚನೆ

Srinivasamurthy VN

ನವದೆಹಲಿ: ಮಹದಾಯಿ ನದಿ ನೀರು ಹಂಚಿಕೆ ಕುರಿತು ಜಲವಿವಾದ ನ್ಯಾಯಮಂಡಳಿ ನೀಡಿರುವ ಐ ತೀರ್ಪು ಕುರಿತು ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.

ಜೊತೆಗೆ, ಐ ತೀರ್ಪು ಪ್ರಶ್ನಿಸಿ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ಸರ್ಕಾರಗಳು ಸಲ್ಲಿಸಿದ್ದ ಮೇಲ್ಮನವಿಗಳನ್ನು ಜುಲೈ 15ರಿಂದ ನಿರಂತರ ವಿಚಾರಣೆ ನಡೆಸುವುದಾಗಿ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠ ನಿರ್ಧರಿಸಿದೆ. ಪ್ರಕರಣದ ತೀರ್ಪಿನಲ್ಲಿ ಯಾವುದಾದರೂ ಬದಲಾವಣೆಯಿದ್ದಲ್ಲಿ ಅಧಿಸೂಚನೆಯಲ್ಲೂ ತಿದ್ದುಪಡಿ ತರಬೇಕು ಎಂದು ಸೂಚಿಸಿದೆ.

ನೀರು ಹಂಚಿಕೆ ಪ್ರಮಾಣ ಹೆಚ್ಚಳ ಹಾಗೂ ಕೇಂದ್ರ ಸರ್ಕಾರದ ಅಧಿಸೂಚನೆಗೆ ಕೋರಿ ಕರ್ನಾಟಕ ಅರ್ಜಿ‌ ಸಲ್ಲಿಸಿದ್ದರೆ, ಕರ್ನಾಟಕಕ್ಕೆ‌ ಹಂಚಿಕೆ ಮಾಡಲಾದ ನೀರಿನ ಪ್ರಮಾಣ ಅಧಿಕ ಎಂದು ದೂರಿ ಗೋವಾ ಅರ್ಜಿ ಸಲ್ಲಿಸಿದೆ. 2018ರ ಆಗಸ್ಟ್ 14ರಂದು ನ್ಯಾಯಮಂಡಳಿಯು ರಾಜ್ಯಕ್ಕೆ 13.40 ಟಿಎಂಸಿ ಅಡಿ ನೀರು ಹಂಚಿಕೆ ಮಾಡಿ ಐ ತೀರ್ಪು ನಿಡಿತ್ತು. 

ಕಳಸಾ ನಾಲೆಯಿಂದ 1.72 ಟಿಎಂಸಿ‌ ಅಡಿ ಹಾಗೂ ಬಂಡೂರಿ ನಾಲೆಯಿಂದ 2.18 ಟಿಎಂಸಿ ಅಡಿ ನೀರನ್ನು ತಿರುವು ಯೋಜನೆ ಮೂಲಕ ಬಳಸಲು ನ್ಯಾಯಮಂಡಳಿ ಹೇಳಿತ್ತು. ಕಣಿವೆ ವ್ಯಾಪ್ತಿಯ ಬಳಕೆಗೆ 1.50 ಟಿಎಂಸಿ ಅಡಿ ನೀರನ್ನು ನೀಡಿದ್ದು, 8.03 ಟಿಎಂಸಿ ಅಡಿ ನೀರನ್ನು ಜಲ ವಿದ್ಯುತ್ ಉತ್ಪಾದನೆಗೆ ಬಳಸಲು ಹಂಚಿಕೆ ಮಾಡಲಾಗಿದೆ.

SCROLL FOR NEXT