ಸಾಂದರ್ಭಿಕ ಚಿತ್ರ 
ರಾಜ್ಯ

ನಾದಿನಿಗಾಗಿ ಟೆಕ್ಕಿ ಹತ್ಯೆ: ಪ್ರಮುಖ ಆರೋಪಿ ಸೇರಿ 9 ಸುಪಾರಿ ಕೊಲೆಗಾರರ ಬಂಧನ

ನಾದಿನಿಗಾಗಿ ಆಕೆಯ ಪತಿಯ ಹತ್ಯೆಗೆ ಸುಪಾರಿ ನೀಡಿದ ಆರೋಪಿ ಸೇರಿದಂತೆ 9 ಜನ ಕೊಲೆಗಡುಕರನ್ನು ಮಹಾದೇವಪುರ‌ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಬೆಂಗಳೂರು: ನಾದಿನಿಗಾಗಿ ಆಕೆಯ ಪತಿಯ ಹತ್ಯೆಗೆ ಸುಪಾರಿ ನೀಡಿದ ಆರೋಪಿ ಸೇರಿದಂತೆ 9 ಜನ ಕೊಲೆಗಡುಕರನ್ನು ಮಹಾದೇವಪುರ‌ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಪ್ರಮುಖ ಆರೋಪಿ ಸತ್ಯ(41), ಪ್ರಶಾಂತ್ ಜಿ(20), ಪ್ರೇಮ್ (31), ದಿನೇಶ್(26), ಲೋಕೇಶ್(28), ಕುಶಾಂತ್(30), ಸಂತೋಷ್(25), ರವಿ (37), ಸಯಿದಾ (25) ಬಂಧಿತ ಆರೋಪಿಗಳು.

ಫೆಬ್ರವರಿ 3ರಂದು ಟೆಕ್ಕಿ ಲಕ್ಷ್ಮಣ್ ಕುಮಾರ್(33) ಮೇಲೆ ಪ್ರಶಾಂತ್ ಹಾಗೂ ಇತರರು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದು, ಚಿಕಿತ್ಸೆ ಫಲಕಾರಿಯಾಗದೇ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಈ ಸಂಬಂಧ ಮೃತರ ಸಹೋದರ ರಾಜಕೇಖರ್ ಕೆ ಎಂಬುವವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಸುಪಾರಿ ನೀಡಿದ್ದ ಹೈದರಾಬಾದ್ ಮೂಲದ ಸತ್ಯ ಎಂಬುವವರು ಲಕ್ಷ್ಮಣ್ ಅವರ ಪತ್ನಿ ಶ್ರೀಜಾಳ ಅಕ್ಕನ ಗಂಡನಾಗಿದ್ದು, ಶ್ರೀಜಾಳ ಮದುವೆಗೆ ಮುಂಚೆಯೇ ಏಕಮುಖವಾಗಿ ಪ್ರೀತಿಸುತ್ತಿದ್ದನು. ಆಕೆಯ ಗಂಡ ಲಕ್ಷ್ಮಣ್ ನನ್ನು ಕೊಲೆ ಮಾಡಿದರೇ, ಸಹೋದರರಿಲ್ಲದ ಶ್ರೀಜಾ, ನಂತರ ತನ್ನ ಮನೆಗೆ ಬಂದು ವಾಸವಾಗುತ್ತಾಳೆ ಎಂಬ ಉದ್ದೇಶ ದಿಂದ ಆಕೆಯ ಪತಿ ಲಕ್ಷ್ಮಣ್ ನನ್ನು ಸುಪಾರಿ ನೀಡಿ‌ ಕೊಲೆ‌ ಮಾಡಿಸಿರುವುದಾಗಿ ತನಿಖೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಲಕ್ಷ್ಮಣ್ ಕುಮಾರ್ ಕೊಲೆ ಮಾಡಿದ ನಂತರ ಸುಪಾರಿ ಪಡೆದ ಪ್ರಮುಖ ಆರೋಪಿ ದಿನೇಶ್ ಗೆ  15ಲಕ್ಷರೂ ಹಾಗೂ ಹೈದರಾಬಾದ್ ನಲ್ಲಿ ಒಂದು ಮನೆ ಕೊಡಿಸುವುದಾಗಿ ಸತ್ಯ ಒಪ್ಪಂದ ಮಾಡಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರಿಂದ ಕೃತ್ಯಕ್ಕೆ ಬಳಸಿದ 2 ಚಾಕು, 3 ಕಾರುಗಳು,  ಒಂದು ದ್ವಿ ಚಕ್ರ ವಾಹನ ಹಾಗೂ ಲ್ಯಾಪ್ ಟಾಪ್, ಮೊಬೈಲ್ ಫೋನ್ ನನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಲೋಕೋಪಯೋಗಿ ಇಲಾಖೆಯಲ್ಲಿ 'ಲಂಚ'; ವಿದೇಶಿ ಷೇರು ಹೂಡಿಕೆ ಇತ್ಯಾದಿ; ಸತೀಶ್ ಜಾರಕಿಹೊಳಿ ಮನೆಯಲ್ಲಿ ಸಿಕ್ಕಿದ್ದೇನು? EDಯಿಂದ ಅಧಿಕೃತ ಹೇಳಿಕೆ

BRICS 2026: Modi-Putin ಭೇಟಿ; ಆಪ್ತ ಮಿತ್ರನಿಗೆ ಪ್ರಧಾನಿಯಿಂದ ಪವಿತ್ರ, ವಿಶೇಷ ಉಡುಗೊರೆ! Video

ಜಾಗತಿಕ ಭೌಗೋಳಿಕ-ರಾಜಕೀಯ ಅನಿಶ್ಚಿತತೆ: ರಾಜಕೀಯ ಒತ್ತಡ ಹೇರಲು ಆರ್ಥಿಕ ಅಸ್ತ್ರ ಬಳಕೆ, ಬ್ರಿಕ್ಸ್ ಪ್ರತಿಕ್ರಿಯೆ ಏನು? ಇರಾನ್ ಅಧ್ಯಕ್ಷರ ಪ್ರಶ್ನೆ!

ನಿಮ್ಮ ಹೇಳಿಕೆಯಿಂದ ಪಕ್ಷಕ್ಕೆ ಡ್ಯಾಮೇಜ್ ಆಗಬಹುದು: ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಹೇಳಿಕೆಗೆ ರಾಹುಲ್​​ ಗಾಂಧಿ ಆಕ್ಷೇಪ

BRICS 2026: ಭಾರತ ಭಿನ್ನಾಭಿಪ್ರಾಯಗಳನ್ನು ಸರಿಯಾಗಿ ನಿರ್ವಹಿಸಲಿ- ಕ್ಸೀ ಜಿನ್ಪಿಂಗ್ ಭಾರತ ಭೇಟಿಗೂ ಮುನ್ನ ಚೀನಾ