ರಾಜ್ಯ

ಚಾಮರಾಜನಗರ: ಐದು ವರ್ಷ ಕಳೆದರೂ ಸ್ಥಾಪನೆಯಾಗದ ಕೈಗಾರಿಕಾ ಪಾರ್ಕ್

Lingaraj Badiger

ಚಾಮರಾಜನಗರ: ರಾಜ್ಯ ಸರ್ಕಾರ ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಇನ್ವೆಸ್ಟ್ ಕರ್ನಾಟಕದಲ್ಲಿ 72 ಸಾವಿರ ಕೋಟಿ ರೂ. ಹೂಡಿಕೆ ಮಾಡಲು ಉದ್ಯಮಿಗಳು ಮುಂದೆ ಬಂದಿದ್ದಾರೆ ಎಂದು ಹೇಳಿದ್ದರೂ, ಚಾಮರಾಜನಗರದ ಬದನಗುಪ್ಪೆ - ಕೆಲ್ಲಂಬಳ್ಳಿ ಕೈಗಾರಿಕಾ ಪಾರ್ಕ್ ಘೋಷಣೆಯಾಗಿ ಐದು ವರ್ಷ ಕಳೆದರೂ ಇನ್ನು ಸ್ಥಾಪನೆಯಾಗಿಲ್ಲ. ಹಿಂದೂಳಿದ ಜಿಲ್ಲೆಯ ಜನ ಮುಖಪ್ರೇಕಕ್ಷರಾಗಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 150ಎನಲ್ಲಿ 1460 ಎಕರೆ ಪ್ರದೇಶದಲ್ಲಿ ಕೈಗಾರಿಕಾ ಪಾರ್ಕ್ ಸ್ಥಾಪನೆ ಮಾಡುವುದಾಗಿ 2015ರಲ್ಲಿ ಸಿದ್ದರಾಮಯ್ಯ ಸರ್ಕಾರ ಘೋಷಣೆ ಮಾಡಿತ್ತು. ಅಲ್ಲದೆ ತಮಿಳುನಾಡಿನ ಗಡಿ ಜಿಲ್ಲೆಗಳ ಉದ್ಯಮಿಗಳು ಸೇರಿದಂತೆ ಇತರರಿಂದ ಬಂಡವಾಳ ಹೂಡಿಕೆಗೆ ಅವಕಾಶ ನೀಡವುದಾಗಿ ಭರವಸೆ ನೀಡಲಾಗಿತ್ತು. ಆದರೆ ತಾಲೂಕಿನ ಬದನಗುಪ್ಪೆ-ಕೆಲ್ಲಂಬಳ್ಳಿ ಗ್ರಾಮದಲ್ಲಿ ಅಭಿವೃದ್ಧಿಪಡಿಸಿರುವ ಈ ಕೈಗಾರಿಕಾ ಪ್ರದೇಶ ದಲ್ಲಿ ಇದುವರೆಗೂ ಒಂದೇ ಒಂದು ಕೈಗಾರಿಕೆ ಸಹ ಸ್ಥಾಪನೆಯಾಗಿಲ್ಲ.

ಪೇಪರ್ ನಲ್ಲಿ ಮಾತ್ರ ಸುಟ್ಲೆಜ್ ಟೆಕ್ಸ್ ಟೈಲ್ ಕಂಪನಿ ಈ ಕೈಗಾರಿಕಾ ಪ್ರದೇಶದಲ್ಲಿ 970 ಕೋಟಿ ರೂಪಾಯಿ ಹೂಡಿಕೆ ಮಾಡುವುದಾಗಿ ಒಪ್ಪಂದ ಮಾಡಿಕೊಂಡಿದೆ. ಆದರೆ ಇದುವರೆಗೂ ಕಾರ್ಯರೂಪಕ್ಕೆ ಬಂದಿಲ್ಲ.

ಉದ್ಯಮಿಗಳ ಪ್ರಕಾರ, ಈ ಕೈಗಾರಿಕಾ ಪ್ರದೇಶದಲ್ಲಿ ಪ್ಲಾಟ್ ಬೆಲೆ 36 ಲಕ್ಷ ನಿಗದಿಪಡಿಸಲಾಗಿದೆ. ಇದು ತುಂಬಾ ದುಬಾರಿಯಾಗುತ್ತದೆ. ಹೀಗಾಗಿ ಯಾವುದೇ ಕಂಪನಿಗಳು ಮುಂದೆ ಬರುತ್ತಿಲ್ಲ. ಮೈಸೂರಿಗೆ ಸಮೀಪದಲ್ಲಿರುವ ನಂಜನಗೂಡಿನಲ್ಲಿ 34 ಲಕ್ಷಕ್ಕೆ ಪ್ಲಾಟ್ ಸಿಗುತ್ತಿರುವ ಹಿನ್ನೆಲೆಯಲ್ಲಿ ಉದ್ಯಮಿಗಳು ಅಲ್ಲಿ ಹೂಡಿಕೆಗೆ ಹೆಚ್ಚು ಗಮನ ಕೊಡುತ್ತಿದ್ದಾರೆ ಎಂದು ಮೈಸೂರು ಉದ್ಯಮಿಗಳ ಸಂಘದ ಸುರೇಶ್ ಕುಮಾರ್ ಜೈನ್ ಅವರು ಹೇಳಿದ್ದಾರೆ.

SCROLL FOR NEXT