ರಾಜ್ಯ

ಬೆಂಗಳೂರು: ಯುಎಸ್ ಅಧ್ಯಕ್ಷ ಟ್ರಂಪ್ ಸ್ವಾಗತಕ್ಕೆ 15 ಅಡಿ ಉದ್ದದ ಗಾಳಿಪಟ ಸಿದ್ದ

Raghavendra Adiga

ಬೆಂಗಳೂರು: ಡೊನಾಲ್ಡ್ ಟ್ರಂಪ್ ಭಾರತದ್ ಭೇಟಿಗೆ ಇಡೀ ದೇಶವೇ ಎದುರು ನೊಡುತ್ತಿರುವ ಈ ಸಮಯದಲ್ಲಿ ಅವರನ್ನು ಸ್ವಾಗತಿಸಲು ಸಿಲಿಕಾನ್ ಸಿಟಿ ಗಾಳಿಪಟ ಕಲಾವಿದರೊಬ್ಬರು ಟ್ರಂಪ್ ಸ್ವಾಗತಕ್ಕಾಗಿ  15 ಅಡಿ ಉದ್ದದ ವಿಶೇಷ ಗಾಳಿಪಟವನ್ನು ಹಾರಿಸಿದ್ದಾರೆ.

ಕರ್ನಾಟಕದ ಅಂತರರಾಷ್ಟ್ರೀಯ ಗಾಳಿಪಟ ಕಲಾವಿದ ವಿ.ಕೆ.ರಾವ್ ಈ ವಿಶೇಷ ಗಾಳಿಪಟ ತಯಾರಿಸಿದ್ದಾರೆ.ಇದರಲ್ಲಿ ಟ್ರಂಪ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರಗಳಿದ್ದು  'ನಮಸ್ತೆ ಟ್ರಂಪ್' ಮತ್ತು 'ಭಾರತಕ್ಕೆ ಸ್ವಾಗತ' ಎಂಬ ಸಂದೇಶವಿದೆ.

"ನಾನು ಯುಎಸ್ ಅಧ್ಯಕ್ಷರನ್ನು ಸ್ವಾಗತಿಸಲು ಈ ವಿಶೇಷ ಗಾಳಿಪಟವನ್ನು ರಚಿಸಿದ್ದೇನೆ.  ಗಾಳಿಪಟವು 15 ಅಡಿ ಉದ್ದವಾಗಿದೆ" ಎಂದು ರಾವ್ಹೇಳಿದ್ದಾರೆ.

ಈ ಹಿಂದೆ ಪಂಜಾಬ್‌ನ ಅಮೃತಸರ ಮೂಲದ ಗಾಳಿಪಟ ತಯಾರಕರು ಟ್ರಂಪ್ ಅವರನ್ನು ಸ್ವಾಗತಿಸಲು ವಿಶೇಷ ಗಾಳಿಪಟಗಳನ್ನು ವಿನ್ಯಾಸಗೊಳಿಸಿದ್ದರು.

"ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡಲಿರುವ ಕಾರಣ, ಅವರನ್ನು ಸ್ವಾಗತಿಸಲು ನಾನು ಕೆಲವು ಗಾಳಿಪಟಗಳನ್ನು ಮಾಡಿದ್ದೇನೆ. ಪಿಎಂ ನರೇಂದ್ರ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ಅವರ ಚಿತ್ರಗಳೊಂದಿಗೆ ಗಾಳಿಪಟ ತಯಾರಾಗಿದೆ" ಪ<ಜಾಬಿನ  ಜಗ್ಮೋಹನ್ ಕನೋಜಿಯಾ ಹೇಳಿದ್ದಾರೆ.

ಫೆಬ್ರವರಿ 24 ಮತ್ತು 25 ರಂದು ಭಾರತಕ್ಕೆ ಭೇಟಿ ನೀಡಲಿರುವ ಟ್ರಂಪ್ ಅವರನ್ನು ಸ್ವಾಗತಿಸಲು ದೇಶಾದ್ಯಂತ ಸಿದ್ಧತೆಗಳು ನಡೆಯುತ್ತಿವೆ.ಭೇಟಿಯ ವೇಳೆ ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ರೋಡ್ ಶೋನಲ್ಲಿ ಭಾಗವಹಿಸಲಿದ್ದು, ಮೊಟೆರಾ ಕ್ರೀಡಾಂಗಣದಲ್ಲಿ ನಡೆಯಲಿರುವ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಸೋಮವಾರ ಸಂಜೆ ಅಮೆರಿಕಾ ಅಧ್ಯಕ್ಷ ಮತ್ತು ಅವರ ಕುಟುಂಬ ಆಗ್ರಾದ ತಾಜ್‌ಮಹಲ್‌ಗೆ ಭೇಟಿ ನೀಡಲಿದೆ.

SCROLL FOR NEXT