ರಾಜ್ಯ

ಬೀದರ್: ಕೌಟುಂಬಿಕ ಕಲಹ, ಮಹಿಳಾ ಪಿಎಸ್ಐ ಆತ್ಮಹತ್ಯೆ

Raghavendra Adiga

ಬೀದರ್: ನೇಣು ಬಿಗಿದುಕೊಂಡು ಅಬಕಾರಿ ಇಲಾಖೆಯ ಪ್ರೊಬೆಷನರಿ ಮಹಿಳಾ ಪಿಎಸ್ಐ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಸವಕಲ್ಯಾಣ ನಗರದಲ್ಲಿ ರವಿವಾರ ನಡೆದಿದೆ.

ರೇಖಾ ಕರಣಕುಮಾರ ಕೋರಿ (29) ಆತ್ಮಹತ್ಯೆಗೆ ಮಾಡಿಕೊಂಡ‌ ಮಹಿಳಾ ಪಿಎಸ್ಐ.

ಮೂಲತಃ ಆಳಂದ ತಾಲೂಕಿನ ಕಡಗಂಚಿ ಮೂಲದವರಾಗಿರುವ ರೇಖಾ ಅವರು, ಬಸವಕಲ್ಯಾಣದ ಶಿವಪೂರ ರಸ್ತೆಯಲ್ಲಿರುವ ಸಂಜುಕುಮಾರ ನಾಗರಾಳೆ ಅವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ಕಳೆದ ಎಂಟು ತಿಂಗಳಿನಿಂಡ ಬಸವಕಲ್ಯಾಣದಲ್ಲಿ ಪ್ರೊಬೆಷನರಿ ಅಬಕಾರಿ ಎಸ್ಐ ಆಗಿ ಸೇವೆ ಸಲ್ಲಿಸುತ್ತಿದ್ದ ರೇಖಾ ಗೆ ಪತಿ ಹಾಗೂ ಇಬ್ಬರು ಮಕ್ಕಳಿದ್ದಾರೆ.

ಮನೆಯಿಂದ ಪತಿ ಹೊರಹೋಗಿದ್ದ ಸಮಯ ಫ್ಯಾನಿಗೆ ನೇಣು ಬಿಗಿದುಕೊಂಡು ರೇಖಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಸ್ಪತ್ರೆಗೆ ಸಾಗಿಸುವ ದಾರಿಯ ನಡುವೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಘಟನೆಗೆ ಕೌಟುಂಬಿಕ ಕಲಹ ಕಾರಣವೆಂದು ಪೋಲೀಸರು ಶಂಕಿಸಿದ್ದಾರೆ.

ಘಟನೆ ಕುರಿತು ಬಸವಕಲ್ಯಾಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

SCROLL FOR NEXT