ರಾಜ್ಯ

ರಾಯಬಾಗ: ಬೇರೆಯವರ ಪಾಲಾದ ಮನೆ; ಗ್ರಾಮ ಪಂಚಾಯಿತಿಗೆ ಬೀಗ ಹಾಕಿ 2005 ರ ಪ್ರವಾಹ ಸಂತ್ರಸ್ತರ ಪ್ರತಿಭಟನೆ!

Srinivas Rao BV

ರಾಯಬಾಗ: ಅವರು ಮನೆ-ಮಠ ಕಳಕೊಂಡ ನಿಜವಾದ ಸಂತ್ರಸ್ತರು. ಸರ್ಕಾರ ಕೋಟ್ಯಾಂತರ ರೂಪಾಯಿ ವೆಚ್ಚಮಾಡಿ ಮನೆಗಳ ನಿರ್ಮಾಣಮಾಡಿ ಮನೆಗಳ ಹಕ್ಕುಪತ್ರ ನೀಡಿದೆ. ಆದರೆ ಆ ಮನೆಗಳಲ್ಲಿ ಬೇರೆಯವರು ಅಕಮ್ರವಾಗಿ ವಾಸಿಸುತ್ತಿದ್ದಾರೆ. ಈಗ ನಮ್ಮ ಮನೆ ನಮಗೆ ಕೋಡಿ ಎಂದು ಅರ್ಹ ಸಂತ್ರಸ್ತರು ಗ್ರಾಮ ಪಂಚಾಯಿತಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ‌ ಭಿರಡಿ ಗ್ರಾಮದಲ್ಲಿ.

ಹೌದು, 2005 ರಲ್ಲಿ ಭೀಕರ ಪ್ರವಾಹ ಎದುರಾಗಿತ್ತು. ಆ ಸಂದರ್ಭದಲ್ಲಿ ಪ್ರವಾಹ ಸಂತ್ರಸ್ಥರಿಗೆ ಸರಕಾರ ಗ್ರಾಮದಾಚೆ ಕೋಟ್ಯಾಂತರ ರೂಪಾಯಿ ವೆಚ್ಚಮಾಡಿ ಜಮೀನು ಖರೀದಿಸಿ ಮನೆಗಳುನ್ನು  ನಿರ್ಮಾಣ ಮಾಡಿ ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಿತ್ತು. ಆದರೆ ಅರ್ಹ‌ ಫಲಾನುಭವಿಗಳು ಅಲ್ಲಿ ಕುಡಿಯುವ ನೀರು, ರಸ್ತೆ, ವಿದ್ಯುತ್, ಚರಂಡಿ, ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯ ಇಲ್ಲದಿರುವುದರಿಂದ ಫಲಾನುಭವಿಗಳು ಹೋಗಲು ತಡ ಮಾಡಿದ ಹಿನ್ನೆಲೆ ಬೇರೆ ಜನ ಬಂದು ಮನೆಗಳನ್ನು ಅತೀಕ್ರಮ ಮಾಡಿ ವಾಸವಾಗಿದ್ದಾರೆ. 2005ರಿಂದ ಇಲ್ಲಿವರೆಗೆ ವಾಸ ಮಾಡುತ್ತ ಬಂದಿದ್ದಾರೆ. ಆದರೆ ಈಗ ಅರ್ಹ ಫಲಾನುಭವಿಗಳು ನಮಗೆ ಮನೆ ಕೊಡಿಸಿ ಅಲ್ಲಿ ಮನೆ ಕೇಳಲು ಹೋದರೆ ಹೆದರಿಸುತ್ತಿದ್ದಾರೆ ಎಂದು ಇಂದು ಭಿರಡಿ ಗ್ರಾಮ ಪಂಚಾಯತಿ ಎದುರು ಅನಿರ್ದಿಷ್ಟಾವಧಿ ಪ್ರತಿಭಟನೆ ಕೈಗೊಂಡಿದ್ದಾರೆ.

ಈ ಸಂದರ್ಭದಲ್ಲಿ ತಹಸೀಲ್ದಾರ್ ಬರುವವರೆಗೂ ನಮ್ಮ ಹೋರಾಟ ನಿಲ್ಲದು ಎಂದು ಆಗ್ರಹಿಸಿದರು. ಪ್ರತಿಭಟನೆಯು ಕಾವೆರುತ್ತಿವುದರಿಂದ ರಾಯಬಾಗ ಉಪ ತಹಸೀಲ್ದಾರ್ ಹಾಗೂ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದರು. 

ಜನರ ಹಾಗೂ ಉಪತಹಸೀಲ್ದಾರ್ ನಡುವೆ ವಾಗ್ವಾದ ನಡೆಯಿತು. ಆಗ ಮದ್ಯೆ ಪೊಲೀಸರು ಪ್ರವೇಶಿಸಿ ವಾಗ್ವಾದ ತಿಳಿಗೊಳಿಸಿದರು. ಅಲ್ಲದೇ ಮಾರ್ಚ 4 ನಂತರ ಸರ್ವೆ ಮಾಡಿ ಅರ್ಹ ಫಲಾನುಭವಿಗಳಿಗೆ ಮನೆಗಳನ್ನು ನೀಡಲಾಗುವುದು ಎಂದು ಭರವಸೆ ನೀಡಿದ್ದ ಹಿನ್ನೆಲೆ ಪ್ರತಿಭಟನೆ ಕೈ ಬಿಟ್ಟರು. ಒಟ್ಟಾರೆಯಾಗಿ ಅರ್ಹ ಸಂತ್ರಸ್ತರಿಗೆ ಸಿಗಬೇಕಿದ್ದ ಮನೆಗಳಲ್ಲಿ ಅಕ್ರಮವಾಗಿ ಬೆರೆಯವರು ವಾಸಿಸುತ್ತಿದ್ದಾರೆ. ಈಗಲಾದರೂ ತಾಲೂಕಾಡಳಿತ ಎಚ್ಚೆತ್ತು ಕೂಡಲೇ ಕ್ರಮ ಕೈಗೊಂಡು ಅರ್ಹ ಸಂತ್ರಸ್ತರಿಗೆ ಮನೆ ನೀಡಬೇಕಾಗಿದೆ.

SCROLL FOR NEXT