ರಾಜ್ಯ

ಮೆಟ್ರೋ: ಬೈಯಪ್ಪನಹಳ್ಳಿ ಪಾರ್ಕಿಂಗ್ ನಲ್ಲಿ ವಾಹನಗಳ ಸುರಕ್ಷತೆ  ಬಗ್ಗೆ ಪ್ರಯಾಣಿಕರಲ್ಲಿ ಆತಂಕ! 

Nagaraja AB

ಬೆಂಗಳೂರು: ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿನ ಪಾರ್ಕಿಂಗ್ ಗುತ್ತಿಗೆ ಅವಧಿ ಮುಗಿದಿದ್ದು, ಹೊಸ ಪರವಾನಗಿಯನ್ನು ಇನ್ನೂ ಯಾರಿಗೂ ನೀಡಿಲ್ಲ.ಇದರಿಂದಾಗಿ ಇಲ್ಲಿ  ವಾಹನಗಳನ್ನು ನಿಲುಗಡೆ ಮಾಡಿ ಕೆಲಸಕ್ಕೆ ತೆರಳುವ ನೂರಾರು ಮೆಟ್ರೋ ಪ್ರಯಾಣಿಕರಲ್ಲಿ ಆತಂಕ ಮನೆಮಾಡಿದೆ. 

ಗುರುವಾರದಿಂದ ಉಚಿತ ದರದಲ್ಲಿ ಪ್ರಯಾಣಿಕರ ವಾಹನಗಳ ನಿಲುಗಡೆಗೆ ಅವಕಾಶ ನೀಡಿರುವುದರಿಂದ ವಾಹನಗಳ ಸಂಖ್ಯೆಯೂ ಹೆಚ್ಚಿದೆ. 

ರಾಮಮೂರ್ತಿನಗರ ಕಡೆಯ ಪಾರ್ಕಿಂಗ್ ಗೆ ಸಂಬಂಧಿಸಿದಂತೆ ಬಿಎಂಆರ್ ಸಿಎಲ್ ಕೆಲ ನೋಟಿಸ್ ಕಳುಹಿಸಿದೆ. ಇಲ್ಲಿ ಹೊಸ ಪರವಾನಗಿ ನೀಡುವವರೆಗೂ ಉಚಿತವಾಗಿ ಪಾರ್ಕಿಂಗ್ ಮಾಡಬಹುದಾಗಿದೆ. ಪಾರ್ಕಿಂಗ್ ನಲ್ಲಾಗುವ ತೊಂದರೆಗಳು ಮಾಲೀಕರಿಗೆ ಸೇರಿದ್ದು, ಬಿಎಂಆರ್ ಸಿಎಲ್ ಜವಾಬ್ದಾರರಾಗುವುದಿಲ್ಲ ಎಂದು ನೋಟಿಸ್ ನಲ್ಲಿ ಹೇಳಲಾಗಿದೆ. 

ಸುಮಾರು 2 ಸಾವಿರ ದ್ವಿಚಕ್ರ ವಾಹನ ಹಾಗೂ 300 ನಾಲ್ಕು ಚಕ್ರಗಳ ವಾಹನಗಳನ್ನು ಇಲ್ಲಿ ಪಾರ್ಕಿಂಗ್ ಮಾಡಬಹುದಾಗಿದೆ. ಮತ್ತೊಂದೆಡೆ ಹಳೆಯ ಮದ್ರಾಸ್ ರೋಡ್ ಕಡೆಗಿರುವ ಪಾರ್ಕಿಂಗ್ ಎಂದಿನಂತೆ ಕಾರ್ಯನಿರ್ವಹಿಸುತ್ತಿದೆ. 

ಇಲ್ಲಿ ಪಾರ್ಕಿಂಗ್ ಮಾಡಲಾದ ಐ- ಎಂಡ್ ಬೈಕ್ ಟೈರ್ ಗಳಿಗೆ ಹಾನಿಯನ್ನುಂಟುಮಾಡಿರುವ ಸಾಧ್ಯತೆ ಇರುವುದಾಗಿ ಟ್ರಿನಿಟಿ ಮೆಟ್ರೋ ನಿಲ್ದಾಣದ ಕಡೆಗೆ ಹೊರಟಿದ್ದ ಸಾಪ್ಟ್ ವೇರ್ ಎಂಜಿನಿಯರ್ ಅದಿತ್ಯ ರಾಜ್ ಹೇಳಿದರು. 

ನಿನ್ನೆ ಒಂದು ಚಕ್ರದ ಪಂಚರ್ ಆಗಿತ್ತು. ಹಲವು ತೊತು ಬಿದ್ದು ಟ್ಯೂಬ್ ನಾಶವಾಗಿರುವುದಾಗಿ ಪಂಚರ್ ಅಂಗಡಿಯವರು ಹೇಳಿದ್ದಾರೆ. ಇದಕ್ಕಾಗಿ 1 ಸಾವಿರದ 100 ರೂ. ವೆಚ್ಚ ಮಾಡಿರುವುದಾಗಿ ಅವರು ತಿಳಿಸಿದ್ದಾರೆ. 

ಪ್ರಸ್ತುತ ಗುತ್ತಿಗೆ ಅವಧಿ ಮುಗಿದಿದೆ. ಕೆಲ ದಿನಗಳಲ್ಲಿ ಹೊಸ ಗುತ್ತಿಗೆದಾರರು ಕಾರ್ಯವನ್ನು ಆರಂಭಿಸಲಿದ್ದಾರೆ ಎಂದು ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿ.ಎಲ್. ಯಶವಂತ್ ಚಾವಾಣ್ ಹೇಳಿದ್ದಾರೆ.  

SCROLL FOR NEXT