ರಾಜ್ಯ

ದೇಶದ್ರೋಹ ಪ್ರಕರಣ: ಆರ್ದ್ರಾ ಜಾಮೀನು ವಿಚಾರಣೆ ಮುಂದೂಡಿಕೆ

Raghavendra Adiga

ಬೆಂಗಳೂರು:  ನಗರದ ಟೌನ್ ಹಾಲ್ ಬಳಿ ಫ್ರೀ ಕಾಶ್ಮೀರಿ  ಭಿತ್ತಿ ಫಲಕ ಪ್ರದರ್ಶಿಸಿದ ಆರ್ದ್ರಾ ಜಾಮೀನು ಕೋರಿ ಸಲ್ಲಿಸಿದ ವಿಚಾರಣೆಯನ್ನು ನ್ಯಾಯಾಲಯ ಮಾರ್ಚ್ 2ಕ್ಕೆ ಮುಂದೂಡಿದೆ.

ಜಾಮೀನು ಕೋರಿ ಆರ್ದ್ರಾ ಸಲ್ಲಿಸಿರುವ ಅರ್ಜಿಯನ್ನು ಶನಿವಾರ 6ನೇ ಎಸಿಎಂಎಂ ಕೋರ್ಟ್ ನ್ಯಾಯಧೀಶರು ವಿಚಾರಣೆ ನಡೆಸಿದರು. 

ವಿಚಾರಣೆ ವೇಳೆ ಸರ್ಕಾರಿ ಅಭಿಯೋಜಕರು, ಇದೊಂದು ವಿಶೇಷ ಪ್ರಕರಣವಾಗಿದ್ದು,ಅಮೂಲ್ಯ ಮತ್ತು ಆರ್ದ್ರಾ ಎರಡು ಪ್ರಕರಣಗಳು ಒಂದಕ್ಕೊಂದು ಸಂಬಂಧವಿದೆ. ಹೀಗಾಗಿ‌ ತನಿಖಾ ವರದಿ ಮೇಲೆ ವಾದ ಮಂಡಿಸಲು ಕಾಲಾವಕಾಶ ಬೇಕು ಎಂದು  ಮನವಿ ಮಾಡಿದರು. 

ಆದರೆ, ಆರ್ದ್ರಾ ಪರ ವಕೀಲರು ಸರ್ಕಾರಿ ಅಭಿಯೋಜಕರ ಮನವಿಗೆ ಆಕ್ಷೇಪ ವ್ಯಕ್ತಪಡಿಸಿದರು. ಸುಪ್ರೀಂಕೋರ್ಟ್ ಆದೇಶದಂತೆ ಒಂದು ವಾರದಲ್ಲಿ ಜಾಮೀನು ಅರ್ಜಿ ಇತ್ಯರ್ಥ ಮಾಡಬೇಕು. ಆದ್ದರಿಂದ ವಾದಕ್ಕೆ ಕಾಲಾವಕಾಶ ನೀಡದಂತೆ ಅವರು ಆಕ್ಷೇಪಣೆ ಸಲ್ಲಿಸಿದರು.

ಈ ವಾದ ದಾಖಲಿಸಿಕೊಂಡ ನ್ಯಾಯಾಧೀಶರು, ಸೋಮವಾರ ವಾದ ಮಂಡಿಸಿ ಇಲ್ಲವಾದರೆ ಆದೇಶಕ್ಕೆ ನಿಗದಿ ಮಾಡುತ್ತೇವೆ ಎಂದು  ಸರ್ಕಾರಿ ವಕೀಲರಿಗೆ ಸೂಚಿಸಿದರು.

SCROLL FOR NEXT