ಸಂಗ್ರಹ ಚಿತ್ರ 
ರಾಜ್ಯ

ಖಜಾನೆ ಖಾಲಿಯಾದರೂ ಆವಿಷ್ಕಾರಗಳು ನಿಲ್ಲಬಾರದು; ಪ್ರಧಾನಿ ಮೋದಿ

ದೇಶದ ಸಂಪೂರ್ಣ ಬಜೆಟ್ ಖಾಲಿಯದರೂ ಸರಿ, ವೈಜ್ಞಾನಿಕ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳಿಗೆ ಪ್ರೋತ್ಸಾಹ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದರು.

ಬೆಂಗಳೂರು: ದೇಶದ ಸಂಪೂರ್ಣ ಬಜೆಟ್ ಖಾಲಿಯದರೂ ಸರಿ, ವೈಜ್ಞಾನಿಕ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳಿಗೆ ಪ್ರೋತ್ಸಾಹ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದರು.

ಬೆಂಗಳೂರಿನ ರಕ್ಷಣಾ ಸಂಶೋದನೆ ಮತ್ತು ಅಭಿವೃದ್ಧಿ ಕೇಂದ್ರಗಳಲ್ಲಿ (ಡಿಆರ್ ಡಿಒ)ದಲ್ಲಿ ಐದು ಯುವ ಪ್ರಯೋಗಾಲಯಗಳನ್ನು ಉದ್ಘಾಟಿಸಿ ಗುರುವಾರ ಅವರು ಮಾತನಾಡಿದರು. ಓರ್ವ ವಿಜ್ಞಾನಿ ತನ್ನ ಸಂಪೂರ್ಣ ಜೀವನವನ್ನು ಮುಡಿಪಾಗಿಟ್ಟು ದೇಶಕ್ಕೆ ಕೊಡುಗೆ ನೀಡುತ್ತಾನೆ. ಅಂತಹದರಲ್ಲಿ ದೇಶದ ಖಜಾನೆ ಯಾವ ಲೆಕ್ಕ. ಯುವ ಪ್ರಯೋಗಾಲಯಗಳಲ್ಲಿ ವಿಜ್ಞಾನಿಗಳು ನಿರಂತರವಾಗಿ ತಪ್ಪುಗಳನ್ನು ಮಾಡಲಿ. ಅದಕ್ಕಾಗಿ ಸಂಪೂರ್ಣ ಬೊಕ್ಕಸ ಖಾಲಿಯಾಗಲಿ. ಆದರೆ, ಪ್ರಯತ್ನ ಬಿಡಬಾರದು. ಹೊಸ ಆವಿಷ್ಕಾರಗಳಿಗೆ ನಾವು ಸದಾ ಸಿದ್ಧವಾಗಿರಬೇಕು ಎಂದರು.

ಸುಧಾರಿತ ತಂತ್ರಜ್ಞಾನದ ಕ್ಷೇತ್ರದಲ್ಲಿ 5 ಬೆಂಗಳೂರು, ಕೋಲ್ಕತಾ, ಚೆನ್ನೈ, ಹೈದರಾಬಾದ್ ಹಾಗೂ ಮುಂಬೈ ನಲ್ಲಿ ಪ್ರಯೋಗಾಲಯಗಳು. ಯುವ ವಿಜ್ಞಾನಿಗಳ ವಿಚಾರಗಳಿಗೆ ಹೊಸ ರೆಕ್ಕೆ ನೀಡುತ್ತದೆ. ಸಕಾರಾತ್ಮಕತೆ ಮತ್ತು ಉದ್ದೇಶ ವಿಜ್ಞಾನಿಗಳಿಗೆ ಪ್ರೇರಣೆಯಾಗಿದೆ. 103 ಜನರ ಜೀವನವನ್ನು ಸುರಕ್ಷಿತವಾಗಿಸುವ ಜವಾಬ್ದಾರಿ ನಿಮ್ಮ ಮೇಲಿದೆ ಎಂಬುದನ್ನು ಮರೆಯಬಾರದು ಎಂದು ಸಲಹೆ ನೀಡಿದರು. ಸರ್ಕಾರ ವಿಜ್ಞಾನಿಗಳಿಗೆ ಸಂಪೂರ್ಣ ಬೆಂಬಲ ನೀಡಲಿದೆ. ಹೊಸ ಅವಿಷ್ಕಾರಗಳಿಗೆ ಎಂದಿಗೂ ಸರ್ಕಾರದ ಸಹಯೋಗವಿರುತ್ತದೆ. ಮುಂದಿನ ವರ್ಷಗಳಲ್ಲಿ ವಾಯು, ನೀರು ಮಾತ್ರವಲ್ಲದೆ, ಬಾಹ್ಯಾಕಾಶ ಮತ್ತು ಆವಿಷ್ಕಾರಗಳು ಜಗತ್ತಿನ ತಂತ್ರಗಾರಿಕೆಯನ್ನು ನಿರ್ಧರಿಸುತ್ತದೆ. ಬುದ್ಧಿಮತ್ತೆಯ ಯಂತ್ರಗಳು ಪ್ರಮುಖ ಪಾತ್ರ ವಹಿಸಲಿದೆ. ಇಂತಹ ಪರಿಸ್ಥಿತಿಯಲ್ಲಿ ದೇಶ ಹಿಂದೆ ಉಳಿಯಲಾಗದು ಎಂದರು.

ಆವಿಷ್ಕಾರಗಳು, ಸಂಶೋಧನೆಗಳು ಅತಿ ಅಗತ್ಯ. ಜಗತ್ತಿಗೆ, ಮಾನವೀಯತೆಗೆ ಸಾಕಷ್ಟು ಕೊಡುಗೆ ನೀಡಬಹುದು. ಜಗತ್ತಿನ ಸುರಕ್ಷತೆಗೆ ನೀವು ಕೆಲಸ ಮಾಡಬೇಕು. ಮೇಕ್ ಇನ್ ಇಂಡಿಯಾ ಪರಿಕಲ್ಪನೆಯನ್ನು ಬಲಗೊಳಿಸಲು ಡಿಆರ್ ಡಿಒ ನೆರವು ಅಗತ್ಯ. ಭಾರತ ಹಿಂದಿನ ತಂತ್ರಜ್ಞಾನವನ್ನು ಅವಲಂಬಿಸಿ ಮುಂದುವರಿಯಲಾಗದು ಎಂದು ಅಬಿಪ್ರಾಯಪಟ್ಟರು. ಜಗತ್ತಿನಲ್ಲಿ ಈಗ ಸಂಪೂರ್ಣ ಸುರಕ್ಷಿತವಾಗಿರುವ ದೇಶಗಳು ಕೂಡ ಒಂದೊಮ್ಮೆ ಭಯೋತ್ಪಾದನೆಯ ವಿರುದ್ಧ ಸಮರ ಸಾರಬೇಕಾಗಬಹುದು. ಅಂತಹವರಿಗೆ ಸುರಕ್ಷತೆಯನ್ನು ಒದಗಿಸಬೇಕಿದೆ ಎಂದರು.

ಈ ದಶಕ ನವ ಭಾರತಕ್ಕೆ ಸಂಬಂಧಿಸಿದಂತೆ ಪ್ರಮುಖವಾಗಿದೆ. ಈ ದಶಕ ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾನ ಏನಿರಲಿದೆ, ಭಾರತದ ತಾಕತ್ತು ಏನಿರಲಿದೆ ಎಂಬುದನ್ನು ನಿರ್ಧರಿಸುತ್ತದೆ. ಈ ದಶಕ 21ನೇ ಶತಮಾನದಲ್ಲಿ ಜನಿಸಿದ ಇಲ್ಲವೇ ಯುವಕರಾದವರ ಯುವ ಕನಸುಗಳು, ಯುವ ಆವಿಷ್ಕಾರಿಗಳದ್ದಾಗಿದೆ. ಹೊಸ ವರ್ಷ ನನಗೆ ಕರ್ನಾಟಕದ ಈ ಪ್ರವಾಸ ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್, ಜೈ ಅನುಸಂಧಾನ್ ಮಾದರಿಯಲ್ಲಿದೆ ಎಂದರು. 21ನೇ ಶತಮಾನದ ಸವಾಲುಗಳನ್ನು ಎದುರಿಸಲು, ಹೊಸ ಯೋಜನೆಯೊಂದಿಗೆ ಕಾರ್ಯನಿರ್ವಹಿಸಲು ಡಿಆರ್ ಡಿಓಗೆ ಹೊಸ ಯೋಚನೆ ಮತ್ತು ಹೊಸ ರೂಪ ನೀಡಬೇಕು ಎಂದು ಸಲಹೆ ನೀಡಿದ್ದೆ. ಹಿರಿಯ ವಿಜ್ಞಾನಿಗಳ ಅನುಭವ ಮತ್ತು ಹೊಸಬರ ಉತ್ಸಾಹದ ಮಿಶ್ರಣದಿಂದ ಜಗತ್ತಿಗೆ ಹೊಸ ಭಾರತದ ದರ್ಶನವಾಗುತ್ತದೆ. ಹಿರಿಯ ವಿಜ್ಞಾನಿಗಳ ಶಕ್ತಿಯಿಲ್ಲದೆ ಯುವಕರು ಮೇಲೆಕ್ಕೇರಲು ಸಾಧ್ಯವಿಲ್ಲ.

ನಾನು ತುಂಬಾ ತಡವಾಗಿ ರಾಜಕೀಯಕ್ಕೆ ಬಂದೆ. ಆರಂಭದಲ್ಲಿ ನಾನು ಪಕ್ಷದ ಸಂಘಟನೆ ಮತ್ತಿತರರ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದೆ. ನನಗೆ ಮೊದಲು ದೊರೆತ ಜವಾಬ್ದಾರಿಯೆಂದರೆ, ಕಚೇರಿಯಲ್ಲಿ 90 ಜನರಿದ್ದರು. ಅವರೆಲ್ಲರೂ 23ನೇ ವಯಸ್ಕರಾಗಿದ್ದರು. ಅವರ ನೆರವಿನಿಂದ ನಾನು ಚುನಾವಣೆ ಸ್ಪರ್ಧಿಸಿ ಗೆಲುವು ಸಾಧಿಸಿದೆ ಎಂದು ಸ್ಮರಿಸಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

ಡಿ ಕೆ ಶಿವಕುಮಾರ್ ಹಿಂದೂ ಜನರ ಭಾವನೆಗಳಿಗೆ ನೋವುಂಟುಮಾಡಿದ್ದು ಕ್ಷಮೆಯಾಚಿಸಬೇಕು: ಶೋಭಾ ಕರಂದ್ಲಾಜೆ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

SCROLL FOR NEXT