ದೆಹಲಿಯಲ್ಲಿ ವ್ಯಾಯಾಮ ಮಾಡುತ್ತಿರುವ ಪ್ರಧಾನಿಯವರ ಫೋಟೋ ತೆಗೆಯುತ್ತಿರುವ ಕೃಷ್ಣಮೂರ್ತಿ ಲೋಕನಾಥ್ 
ರಾಜ್ಯ

ಪ್ರಧಾನಿ ಮೋದಿ ಹೋದಲ್ಲೆಲ್ಲ ಇವರು ಹೋಗುತ್ತಾರೆ, ಫೋಟೋ ತೆಗೆಯುತ್ತಾರೆ, ಇವರು ತುಮಕೂರಿನವರು!

ಪ್ರಧಾನಿ ನರೇಂದ್ರ ಮೋದಿಯವರು ಎಲ್ಲಿಗೇ ಹೋಗಲಿ ಅವರ ಹಿಂದೆ ಪ್ರಧಾನ ಮಂತ್ರಿ ಕಾರ್ಯಾಲಯದ ಪ್ರಧಾನ ಫೋಟೋಗ್ರಾಫರ್ ಮತ್ತು ವಿಡಿಯೊಗ್ರಾಫರ್ ಇರುತ್ತಾರೆ. 

ತುಮಕೂರು: ಪ್ರಧಾನಿ ನರೇಂದ್ರ ಮೋದಿಯವರು ಎಲ್ಲಿಗೇ ಹೋಗಲಿ ಅವರ ಹಿಂದೆ ಪ್ರಧಾನ ಮಂತ್ರಿ ಕಾರ್ಯಾಲಯದ ಪ್ರಧಾನ ಫೋಟೋಗ್ರಾಫರ್ ಮತ್ತು ವಿಡಿಯೊಗ್ರಾಫರ್ ಇರುತ್ತಾರೆ. 


ಪ್ರಧಾನಿಯವರ ಚಟುವಟಿಕೆಗಳ ಫೋಟೋ ತೆಗೆಯುವುದು, ವಿಡಿಯೊ ಮಾಡುವುದು ಇವರ ಕೆಲಸ. ಪ್ರಧಾನ ಮಂತ್ರಿ ಕಾರ್ಯಾಲಯದಲ್ಲಿರುವ ಫೋಟೋಗ್ರಾಫರ್ ಪ್ರಸಾರ ಭಾರತಿ ಉದ್ಯೋಗಿ ಯಡಲಮ್ ಕೃಷ್ಣಮೂರ್ತಿ ಲೋಕನಾಥ್ ತುಮಕೂರು ಜಿಲ್ಲೆಯವರು ಎಂಬುದು ಅನೇಕರಿಗೆ ಗೊತ್ತಿಲ್ಲ.


ಈ ಕನ್ನಡಿಗ ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ವೈ ಎನ್ ಹೊಸಕೋಟೆಯ ಓಬಳಾಪುರದವರು. ಇಂದು ತುಮಕೂರಿಗೆ, ಬೆಂಗಳೂರಿಗೆ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿರುವ ಪ್ರಧಾನಿಗಳ ಜೊತೆ ಈ ಫೋಟೋಗ್ರಾಫರ್ ಕೃಷ್ಣಮೂರ್ತಿಯವರು ಸಹ ಬರುತ್ತಿದ್ದಾರೆ. 


ಕೃಷ್ಣಮೂರ್ತಿಯವರು ಪ್ರಧಾನ ಮಂತ್ರಿ ಕಾರ್ಯಾಲಯದಲ್ಲಿ ಎರಡು ದಶಕಗಳಿಂದ ಕಾರ್ಯನಿರ್ವಹಿಸುತ್ತಿದ್ದು ಹಲವು ಕಾರ್ಯಕ್ರಮಗಳಲ್ಲಿ ಫೋಟೋಗ್ರಫಿ ಮಾಡಿದ ಅನುಭವ ಹೊಂದಿದ್ದಾರೆ. ''ಕಳೆದ 6 ವರ್ಷಗಳಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಅವರ ಜೊತೆ ಓಡಾಡಿ ತೆಗೆದ ಫೋಟೋಗಳು ನಿಜಕ್ಕೂ ಅವಿಸ್ಮರಣೀಯ, ಹಲವು ಸಂದರ್ಭಗಳಲ್ಲಿ ವಿದೇಶಗಳಿಗೆ ಹೋಗುವ ಅವಕಾಶ ಸಿಕ್ಕಿತು'' ಎನ್ನುತ್ತಾರೆ.


ಕೃಷ್ಣಮೂರ್ತಿಯವರಿಗೆ ಅತ್ಯಂತ ಅವಿಸ್ಮರಣೀಯವಾದ ಪ್ರವಾಸವೆಂದರೆ ಸ್ವಿಡ್ಜರ್ಲ್ಯಾಂಡ್ ಗೆ ಹೋಗಿದ್ದಂತೆ. ಅಲ್ಲಿ 15 ಡಿಗ್ರಿ ಸೆಲ್ಸಿಯಸ್ ಗೆ ಉಷ್ಣಾಂಶ ಇಳಿದಿತ್ತು. ಆ ಚಳಿಯಲ್ಲಿ ಮೋದಿಯವರು ವಾತಾವರಣಕ್ಕೆ ಮತ್ತು ನಮ್ಮ ಜೊತೆ ಹೊಂದಿಕೊಂಡಿದ್ದರು ಎಂದು ನಡೆದ ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ ಲೋಕನಾಥ್. 


ಮೋದಿಯವರು ವಿದೇಶಗಳಿಗೆ ಹೋದ ಬಹುಪಾಲು ಪ್ರವಾಸದ ಫೋಟೋಗಳನ್ನು ಕೃಷ್ಣಮೂರ್ತಿ ಲೋಕನಾಥ್ ತೆಗೆದಿದ್ದಾರೆ. ಸುಮಾರು 40 ದೇಶಗಳಿಗೆ ಪ್ರಧಾನಿ ಜೊತೆ ಭೇಟಿ ಕೊಟ್ಟಿದ್ದಾರೆ. ಯುಪಿಎ-2 ಸರ್ಕಾರದ ಅವಧಿಯಲ್ಲಿ ಕೆಲಸದಿಂದ ವಿರಾಮ ತೆಗೆದುಕೊಂಡಿದ್ದರಂತೆ. ಪ್ರಧಾನ ಮಂತ್ರಿ ಕಾರ್ಯಾಲಯದಿಂದ ಮತ್ತೆ ಕರೆಬಂತು ಎಂದು ಹೇಳಿಕೊಳ್ಳುವ ಕೃಷ್ಣಮೂರ್ತಿಯವರು ಅಬ್ದುಲ್ ಕಲಾಂ ಅವರು ರಾಷ್ಟ್ರಪತಿಗಳಾಗಿದ್ದಾಗ ಅವರ ಫೋಟೋಗ್ರಾಫರ್ ಆಗಿದ್ದರು.


ಈ ವೃತ್ತಿಗೆ ಹೇಗೆ ಬಂದಿರಿ ಎಂದು ಕೇಳಿದಾಗ, ತಮ್ಮ ಮಾವ ಎಂ ಸಿ ಗಿರೀಶ್ ಬೆಂಗಳೂರಿನಲ್ಲಿ ಕಲರ್ ಲ್ಯಾಬ್ ಇಟ್ಟುಕೊಂಡಿದ್ದರು. ಅವರಿಂದ ಪ್ರೇರಣೆಗೊಂಡು ಫೋಟೋಗ್ರಫಿ ಕಲಿತೆ. ಪಿಯುಸಿ ಶಿಕ್ಷಣ ಮುಗಿಸಿ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸೇರಿ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ ಟಿಟ್ಯೂಟ್ ನಲ್ಲಿ 1989ರಲ್ಲಿ ಡಿಪ್ಲೊಮಾ ತೇರ್ಗಡೆ ಮಾಡಿಕೊಂಡೆ. ಇದೀಗ ನನ್ನ ತವರು ಜಿಲ್ಲೆಯಲ್ಲಿ ಪ್ರಧಾನಿಯವರ ಕಾರ್ಯಕ್ರಮದಲ್ಲಿ ಫೋಟೋ ತೆಗೆಯುವ ಅವಕಾಶ ಬಂದಿರುವುದು ತುಂಬಾ ಸಂತೋಷವಾಗುತ್ತಿದೆ ಎನ್ನುತ್ತಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT