ರಾಜ್ಯ

ನಿಮ್ಮ ಪರಿಧಿಯನ್ನು ವಿಸ್ತರಿಸಿ,ಸರ್ಕಾರ ನಿಮ್ಮೊಡನಿದೆ:ವಿಜ್ಞಾನಿ,ಸಂಶೋಧಕರಿಗೆ ಪಿಎಂ ಮೋದಿ ಅಭಯ

Raghavendra Adiga

ಬೆಂಗಳೂರು: ದೇಶದ ವಿಜ್ಞಾನಿಗಳು ಮತ್ತು ಸಂಶೋಧಕರು ತಮ್ಮ ಪರಿಧಿಯನ್ನು ವಿಸ್ತರಿಸಿಕೊಳ್ಳಬೇಕು, ಅವರೊಡನೆ ಸರ್ಕಾರವು ಎಂದೆಂದಿಗೂ ಇರಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಭರವಸೆ ನೀಡಿದರು.

"ನಿಮ್ಮ ಸಾಮರ್ಥ್ಯವು ಬಹು ದೊಡ್ಡದಾಗಿದೆ,  ನೀವು ಅನೇಕ ಕೆಲಸಗಳನ್ನು ಮಾಡಬಹುದು, ನಿಮ್ಮ ಪರಿಧಿಯನ್ನು ವಿಸ್ತರಿಸಬಹುದು, ನಿಮ್ಮ ಕಾರ್ಯಕ್ಷಮತೆಯ ನಿಯತಾಂಕಗಳನ್ನು ಬದಲಾಯಿಸಿಕೊಳ್ಳಬಹುದು ರೆಕ್ಕೆಗಳನ್ನು ಇನ್ನಷ್ಟು ವಿಸ್ತರಿಸಿ ಎತ್ತರಕ್ಕೆ ಹಾರಿರಿ, ನಿಮಗೆ ಅವಕಾಶಗಳಿದೆ, ನಾನು ನಿಮ್ಮೊಡನಿದ್ದೇನೆ"ಮೋದಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಡಿಆರ್‌ಡಿಒ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಮಂತ್ರಿಯಾಗಿ ಸರ್ಕಾರವು ದೇಶದ ವಿಜ್ಞಾನಿಗಳು ಮತ್ತು ಸಂಶೋಧಕರಿಗೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ಭರವಸೆ ನೀಡುತ್ತಿದ್ದೇನೆ ಎಂದಿದ್ದಾರೆ.

"ವಾಯು ಹಾಗೂ ಸಮುದ್ರದ ಜತೆ , ಸೈಬರ್ ಮತ್ತು ಬಾಹ್ಯಾಕಾಶವಿಶ್ವದ ಕಾರ್ಯತಂತ್ರದ ಚಲನಶೀಲತೆಯನ್ನು ವ್ಯಾಖ್ಯಾನಿಸುತ್ತದೆ ಎಂದು ನಿಮಗೆಲ್ಲರಿಗೂ ತಿಳಿದಿದೆ. ಇದರ ಜೊತೆಗೆ, ಇಂಟೆಲಿಜೆನ್ಸ್ ಮೆಷಿನ್ ಗಳುಮುಂದಿನ ದಿನಗಳಲ್ಲಿ ರಕ್ಷಣಾ ಕ್ಷೇತ್ರದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಭಾರತ ಹಿಂದುಳಿಯುವುದು ಸಾಧ್ಯವಿಲ್ಲ. ನಾಗರಿಕರ, ಗಡಿಗಳ ಹಿತಾಸಕ್ತಿಗಳನ್ನು ರಕ್ಷಿಸಲು ಲು, ಭವಿಷ್ಯದ ತಂತ್ರಗಳು ಮತ್ತು ನಾವೀನ್ಯತೆಗಳಲ್ಲಿ ಹೂಡಿಕೆ ಮಾಡುವುದು ಮುಖ್ಯವಾಗಿದೆ.

ಸುಧಾರಿತ ತಂತ್ರಜ್ಞಾನಗಳಲ್ಲಿ ಕೇಂದ್ರೀಕೃತ ಸಂಶೋಧನೆಗಳನ್ನು ಪ್ರಾರಂಭಿಸಲು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ರಚಿಸಿದ ಯುವ ವಿಜ್ಞಾನಿಗಳ ಪ್ರಯೋಗಾಲಯಗಳನ್ನು ದೇಶಕ್ಕೆ ಅರ್ಪಿಸಿದ ನಂತರ ಪ್ರಧಾನಿ ಮಾತನಾಡುತ್ತಿದ್ದರು.

ಡಿಆರ್‌ಡಿಒ ಯಂಗ್ ಸೈಂಟಿಸ್ಟ್ ಲ್ಯಾಬೊರೇಟರೀಸ್, ಡಿವೈಎಸ್‌ಎಲ್‌ಗಳು ಬೆಂಗಳೂರು, ಮುಂಬೈ, ಚೆನ್ನೈ ಕೋಲ್ಕತಾ ಮತ್ತು ಹೈದರಾಬಾದ್‌ನಲ್ಲಿವೆ.

ಪ್ರತಿ ಲ್ಯಾಬ್ ಭವಿಷ್ಯದ ರಕ್ಷಣಾ ವ್ಯವಸ್ಥೆಗಳ ಅಭಿವೃದ್ಧಿಗೆ ಪ್ರಾಮುಖ್ಯತೆಯ ಪ್ರಮುಖ ಸುಧಾರಿತ ತಂತ್ರಜ್ಞಾನದ ಮೇಲೆ ಕಾರ್ಯನಿರ್ವಹಿಸುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ. ಡಿಆರ್‌ಡಿಒ ಆಯ್ದ ಯುವ ವಿಜ್ಞಾನಿಗಳು, 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರು  ಗುರುತಿಸಲ್ಪಟ್ಟ ಸಂಶೋಧನಾ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಈ ಅವಕಾಶವನ್ನು ನೀಡಲಾಗಿದೆ. 

SCROLL FOR NEXT