ಕಲಬುರಗಿ: ಮದ್ಯದ ಅಮಲಲ್ಲಿ ಸ್ವಂತ ಮಕ್ಕಳಿಗೇ ವಿಷವಿಕ್ಕಿ ಕೊಂದ ಪಾಪಿ ತಂದೆ! 
ರಾಜ್ಯ

ಕಲಬುರಗಿ: ಮದ್ಯದ ಅಮಲಲ್ಲಿ ಸ್ವಂತ ಮಕ್ಕಳಿಗೇ ವಿಷವಿಕ್ಕಿ ಕೊಂದ ಪಾಪಿ ತಂದೆ!

ಮದ್ಯದ ಅಮಲಲ್ಲಿ ತಂದೆಯೊಬ್ಬತನ್ನ ಸ್ವಂತ ಮಕ್ಕಳಿಗೇ ವಿಷ ಉಣಿಸಿ ಕೊಂದಿರುವ ದಾರುಣ ಘಟನೆ ಕಲಬುರಗಿ ಜಿಲ್ಲೆ ಚಿಂಚೋಳಿಯಲ್ಲಿ ನಡೆದಿದೆ. 

ಕಲಬುರಗಿ: ಮದ್ಯದ ಅಮಲಲ್ಲಿ ತಂದೆಯೊಬ್ಬತನ್ನ ಸ್ವಂತ ಮಕ್ಕಳಿಗೇ ವಿಷ ಉಣಿಸಿ ಕೊಂದಿರುವ ದಾರುಣ ಘಟನೆ ಕಲಬುರಗಿ ಜಿಲ್ಲೆ ಚಿಂಚೋಳಿಯಲ್ಲಿ ನಡೆದಿದೆ.

ಚಿಂಚೋಳಿ ತಾಲೂಕಿನ ಭೈರಂಪಳ್ಳಿ ತಾಂಡಾದಲ್ಲಿ ನಡೆದ ಘಟನೆಯಲ್ಲಿ ರೋಹಿತ (4) ಹಾಗೂ ಪರ್ವಿನ್ (3) ಎನ್ನುವ ಇಬ್ಬರು ಮಕ್ಕಳು ಮೃತಪಟ್ಟಿದ್ದು ಈ ಮಕ್ಕಳ ತಂದೆಯಾದ ಸಂಜೀವ್ ಮಕ್ಕಳಿಗೆ ವಿಷ ಉಣಿಸಿ ಕೊಂದಿದ್ದಾನೆ.

ಮದ್ಯದ ಅಮಲಿನಲ್ಲಿದ್ದ ಸಂಜೀವ್ ಮಕ್ಕಳನ್ನು ಜಮೀನಿಗೆ ಕರೆದೊಯ್ದು ಅಲ್ಲಿ ಮಕ್ಕಳಿಗೆ ವೀಷ ಉಣಿಸಿ ಹತ್ಯೆ ಂಆಡಿದ್ದಾನೆ. ಆ ನಂತರ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಸಧ್ಯ ಪೋಲೀಸರು ಆರೋಪಿ ಸಂಜೀವ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕೌಟುಂಬಿಕ ಕಲಹದಿಂದಾಗಿ ಸಂಜೀವ್ ಈ ದುಷ್ಕೃತ್ಯ ನಡೆಸಿದ್ದಾನೆ ಎಂದು ಪೋಲೀಸರು ಶಂಕಿಸಿದ್ದಾರೆ. ಘಟನೆ ಕುರಿತಂತೆ ಮಿರಿಯಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Cockroach Janta Partyಗೆ ಬಿಗ್ ಶಾಕ್: ಜಂತರ್ ಮಂತರ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸರು, 57 ಮೆಟ್ರೋ ನಿಲ್ದಾಣಗಳು ಬಂದ್..!

ಕನ್ನಡಿಗರ ಆತ್ಮೀಯತೆ, ವಾತ್ಸಲ್ಯ, ದಯೆ ನಿಜಕ್ಕೂ ನನ್ನ....: ಬೆಂಗಳೂರು ಭೇಟಿ ಬಗ್ಗೆ ಅಭಿಜೀತ್ ದೀಪ್ಕೆ ಭಾವುಕ ಪೋಸ್ಟ್!

ಕೇಂದ್ರ ಸಚಿವ, ಬಿಜೆಪಿ ನಾಯಕನಿಂದ ಸ್ಟಿಂಗ್ ಆಪರೇಷನ್‌ಗೆ ಸಂಚು: Congress ಶಾಸಕ ಗಣಿಗ ರವಿ ಸ್ಫೋಟಕ ಆರೋಪ; Video

ಧಾರವಾಡ: ಕಾರು - ಕ್ಯಾಂಟರ್ ಮುಖಾಮುಖಿ ಡಿಕ್ಕಿ; ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವು!

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ