ರಾಜ್ಯ

ಧಾರವಾಡ: ಕಂದಕಕ್ಕೆ ಉರುಳಿಬಿದ್ದ ಶಾಲಾ ಬಸ್ಸು, ವಿದ್ಯಾರ್ಥಿ ಸಾವು, ಹಲವರಿಗೆ ಗಾಯ 

Sumana Upadhyaya

ಧಾರವಾಡ: ಶಾಲಾ ಪ್ರವಾಸಕ್ಕೆಂದು ಹೋಗಿದ್ದ ಕದಿರಿ ಸರ್ಕಾರಿ ಬಾಲಕರ ಹೈಸ್ಕೂಲ್ ನ 45 ವಿದ್ಯಾರ್ಥಿಗಳು ಮತ್ತು 10 ಮಂದಿ ಶಿಕ್ಷಕ ಸಿಬ್ಬಂದಿ ಸಾಗುತ್ತಿದ್ದ ಖಾಸಗಿ ಬಸ್ಸು ತಿರುವು ಪ್ರದೇಶದಲ್ಲಿ ಕಂದಕಕ್ಕೆ ಉರುಳಿ ಬಿದ್ದು ಓರ್ವ ವಿದ್ಯಾರ್ಥಿ ಮೃತಪಟ್ಟು ಕೆಲವರು ಗಾಯಗೊಂಡಿದ್ದಾರೆ.


ಎತ್ತರದ ಇಳಿಜಾರು ಪ್ರದೇಶದಲ್ಲಿ 500 ಅಡಿಯಿಂದ ಬಸ್ಸು ಕೆಳಗೆ ಕಂದಕಕ್ಕೆ ಬಿದ್ದರೂ ಕೂಡ ವಿದ್ಯಾರ್ಥಿಗಳು ಪವಾಡ ರೀತಿಯಲ್ಲಿ ಪಾರಾಗಿದ್ದಾರೆ. ಮಕ್ಕಳು ಶಾಲಾ ಪ್ರವಾಸ ಮುಗಿಸಿ ಜೋಗ್ ಫಾಲ್ಸ್ ನಿಂದ ಮುರ್ಡೇಶ್ವರಕ್ಕೆ ರಾತ್ರಿ 10.30ರ ಸುಮಾರಿಗೆ ಬರುತ್ತಿದ್ದರು. 


ಶಾಲಾ ಮುಖ್ಯೋಪಾಧ್ಯಾಯ ರಾಜೇಂದ್ರನ್ ಬಸ್ಸಿನ ಕಿಟಕಿಯಿಂದ ಹೊರಗೆ ಬಂದು ಕೆಲ ವಿದ್ಯಾರ್ಥಿಗಳನ್ನು ಬಜಾಚ್ ಮಾಡಿದರು.
ನಂತರ ಪೊಲೀಸರು ಮತ್ತು ತಮ್ಮ ಸ್ನೇಹಿತರಿಗೆ ಕರೆ ಮಾಡಿ ವಿಷಯ ತಿಳಿಸಿದರು. ಆಂಧ್ರ ಪ್ರದೇಶದ ಅನಂತಪುರ ಪೊಲೀಸರು ಕರ್ನಾಟಕ ಪೊಲೀಸರಿಗೆ ಮಾಹಿತಿ ನೀಡಿ ಅವರು ಸ್ಥಳಕ್ಕೆ ಆಗಮಿಸಿ ಅಪಾಯದಲ್ಲಿದ್ದವರು ಕಾಪಾಡಿದರು ಎಂದು ಅನಂತಪುರ ಸೂಪರಿಂಟೆಂಡೆಂಟ್ ಬಿ ಸತ್ಯ ಯೇಸುಬಾಬು ತಿಳಿಸಿದ್ದಾರೆ.


ಗಂಭೀರ ಗಾಯಗೊಂಡ ಇಬ್ಬರು ವಿದ್ಯಾರ್ಥಿಗಳಲ್ಲಿ 10ನೇ ತರಗತಿಯ ಬಾಬಾ ಫಕ್ರುದ್ದೀನ್ ಎಂಬಾತ ಮೃತಪಟ್ಟಿದ್ದಾನೆ. ಮತ್ತೊಬ್ಬ ಶಿಕ್ಷಕ ಆದಿನಾರಾಯಣ ಎಂಬುವವರ ಕೈ ಮುರಿದಿದೆ. ಗಾಯಗೊಂಡವರನ್ನೆಲ್ಲಾ ಉಡುಪಿಯ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. 


ಕಳೆದ 2ನೇ ತಾರೀಕಿನಂದು ಕದಿರಿಯಿಂದ ಶಾಲಾ ಪ್ರವಾಸ ಆರಂಭಿಸಿದ್ದರು. 

SCROLL FOR NEXT