ರಾಜ್ಯ

ರೈತರಿಂದ ಲಂಚ ಕೇಳಿದ್ರೆ ಹುಷಾರ್: ಅಧಿಕಾರಿಗಳಿಗೆ ಸಚಿವ ಜಗದೀಶ್ ಶೆಟ್ಟರ್ ವಾರ್ನಿಂಗ್!

Sumana Upadhyaya

ಬೆಂಗಳೂರು: ಪರಿಹಾರ ಧನ ನೀಡಲು ರೈತರಿಂದ ಲಂಚ ಕೇಳುವ ಅಧಿಕಾರಿಗಳಿಗೆ ಭಾರೀ ಮತ್ತು ಮಧ್ಯಮ ಕೈಗಾರಿಕಾ ಖಾತೆ ಸಚಿವ ಜಗದೀಶ್ ಶೆಟ್ಟರ್ ಎಚ್ಚರಿಕೆ ನೀಡಿದ್ದಾರೆ.


ಕೈಗಾರಿಕಾಭಿವೃದ್ಧಿಗೆ ರೈತರಿಂದ ಜಮೀನನ್ನು ಪಡೆದುಕೊಂಡ ಮೇಲೆ ಅವರಿಗೆ ಪರಿಹಾರ ನೀಡುವುದು ಸರ್ಕಾರದ ಕರ್ತವ್ಯ. ರಾಜ್ಯ ಸರ್ಕಾರ ಹಲವು ವಲಯಗಳಲ್ಲಿ ಕೈಗಾರಿಕಾಭಿವೃದ್ಧಿಗೆ ರೈತರಿಂದ 1,800 ಎಕರೆ ಜಮೀನನ್ನು ಪಡೆದುಕೊಂಡಿದೆ. ಇಂತಹ ಹೊತ್ತಿನಲ್ಲಿ ರೈತರ ಸಮಸ್ಯೆಗಳೇನು ಎಂದು ತಿಳಿದುಕೊಂಡು ಅವರ ಸಮಸ್ಯೆಗಳನ್ನು ಶೀಘ್ರವೇ ಬಗೆಹರಿಸಬೇಕು ಎಂದು ಶೆಟ್ಟರ್ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.


ಅವರು ನಿನ್ನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ಹರಲಾಳಿನ ರಕ್ಷಣಾ ಮತ್ತು ಅಂತರಿಕ್ಷ ಕೈಗಾರಿಕಾ ಲೇ ಔಟ್ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಹರಲಾಳು, ಮುದ್ದೇನಹಳ್ಳಿ ಮತ್ತು ಸುತ್ತಮುತ್ತಲಿನ ಭಾಗಗಳ ರೈತರ ಜೊತೆ ಮಾತುಕತೆ ನಡೆಸಿದರು.

SCROLL FOR NEXT