ರಾಜ್ಯ

ರಾಜ್ಯಕ್ಕೆ ಕೊನೆಗೂ 1869 ಕೋಟಿ ರೂಪಾಯಿ ಅತಿವೃಷ್ಟಿ ಪರಿಹಾರ ಬಿಡುಗಡೆ

Raghavendra Adiga

ಬೆಂಗಳೂರು: ಕಳೆದ ವರ್ಷ ರಾಜ್ಯದಲ್ಲಿ ಉಂಟಾಗಿದ್ದ ಭೀಕರ ನೆರೆ, ಪ್ರವಾಹದಿಂಡ ಆದ ಹಾನಿಗೆ ಸಂಬಂಧಿಸಿ ಕೇಂದ್ರದ ಬಿಜೆಪಿ ಸರ್ಕಾರ 1869.85  ಕೋಟಿ ರು. ಪರಿಹಾರ ಬಿಡುಗಡೆಗೊಳಿಸಿದೆ.

ಈ ಹಿಂದೆ ಕಳೆದ ಅಕ್ಟೋಬರ್ ನಲ್ಲಿ ಕೇಂದ್ರದ ರಾಷ್ಟ್ರೀಯ ನೈಸರ್ಗಿಕ ವಿಪತ್ತು ಪರಿಹಾರ ನಿಧಿಯಿಡ್ಂಅ ೧೨೦೦ ಕೋಟಿ ರು. ಪರಿಹಾರ ಬಿಡುಗಡೆಯಾಗಿತ್ತು.ಸೋಮವಾರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ನಡೆದ ಉನ್ನತಮಟ್ಟದ ಸಭೆಯಲ್ಲಿ ರಾಜ್ಯದ ನೆರೆ ಸಂತ್ರಸ್ಥರಿಗೆ ನೆರವಾಗಲು  ಮತ್ತೆ 1869.85  ಕೋಟಿ ರು ನೀಡಲು ತೀರ್ಮಾನಿಸಲಾಗಿದೆ.

ಇನ್ನು ಕರ್ನಾಟಕ ಮಾತ್ರವಲ್ಲದೆ ದೇಶದ ಒಟ್ಟೂ ಏಳು ರಾಜ್ಯಗಳಿಗೆ 5908.56 ಕೋಟಿ ರು. ಪರಿಹಾರದ ಹಣ ಬಿಡುಗಡೆಯಾಗಿದೆ.

ಕೇಂದ್ರದ ಮೋದಿ ಸರ್ಕಾರ ಕರ್ನಾಟಕವನ್ನು ಕಡೆಗಣಿಸುತ್ತಿದೆ, ಯಡಿಯೂರಪ್ಪ ಅವರ ಮಾತಿಗೆ ಮೋದಿ, ಶಾ ಅವರ ಬಳಿ ಗೌರವವಿಲ್ಲ ಎಂದೆಲ್ಲಾ ಪ್ರತಿಪಕ್ಷಗಳು ವಾಗ್ದಾಳಿ ನಡೆಸಿದ್ದವು. ಅಲ್ಲದೆ ಇತೇ ನಾಲ್ಕು ದಿನಗಳ ಹಿಂದೆ ತುಮಕೂರು-ಬೆಂಗಳೂರಿಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದ ವೇದಿಕೆಯಲ್ಲೇ ಯಡಿಯೂರಪ್ಪ ರಾಜ್ಯವು ಸಂಕಷ್ಟದಲ್ಲಿದ್ದು ಐವತ್ತು ಸಾವಿರ ಕೋಟಿ ನೆರವು ಬೇಕೆಂದು ಬಹಿರಂಗವಾಗಿ ಮನವಿ ಮಾಡಿದ್ದರು.

SCROLL FOR NEXT