ರಾಜ್ಯ

ಮಂಗಳೂರು ಹಿಂಸಾಚಾರ: 14 ಮಂದಿ ಸಾಕ್ಷಿಗಳು ಮ್ಯಾಜಿಸ್ಟೀರಿಯಲ್ ವಿಚಾರಣೆಗೆ ಹಾಜರು

Raghavendra Adiga

ಮಂಗಳೂರು :ಡಿಸೆಂಬರ್ 19 ರಂದು ಸಿಎಎ ವಿರೋಧಿ ಪ್ರತಿಭಟನೆ ವೇಳೆ ಪೊಲೀಸ್ ಗುಂಡಿನ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿ ಪ್ರಕರಣದ  ಮ್ಯಾಜಿಸ್ಟೀರಿಯಲ್ ವಿಚಾರಣೆಯ ಭಾಗವಾಗಿ ಇಂದು ಸಾರ್ವಜನಿಕ ವಿಚಾರಣೆ ನಡೆಸಲಾಯಿತು.

ಘಟನೆಯಲ್ಲಿ ಮೃತಪಟ್ಟ ಅಬ್ದುಲ್ ಜಲೀಲ್ ಮತ್ತು ನೌಶೀನ್ ಅವರ ಕುಟುಂಬ ಸದಸ್ಯರು ಸೇರಿದಂತೆ 14 ಮಂದಿ ಸಾಕ್ಷಿಗಳು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರ ಮುಂದೆ ಹಾಜರಾಗಿ ತಮ್ಮ ಹೇಳಿಕೆಗಳನ್ನು ನೀಡಿದರು

ಮಂಗಳೂರು ಸಹಾಯಕ ಆಯುಕ್ತರ ನ್ಯಾಯಾಲಯದಲ್ಲಿ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1.30 ರವರೆಗೆ ಸಾರ್ವಜನಿಕ ವಿಚಾರಣೆ ನಡೆಯಿತು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಗದೀಶ್ "ಸಾಕ್ಷಿಗಳಿಂದ ಲಿಖಿತ ಹೇಳಿಕೆಗಳನ್ನು ಸ್ವೀಕರಿಸಲಾಗಿದೆ. ಯಾರಿಗೆ ಇಂದು  ತಮ್ಮ ಹೇಳಿಕೆಗಳನ್ನು ಸಲ್ಲಿಸಲು ಸಾಧ್ಯವಾಗಿಲ್ಲವೋ ಅವರಿಗೆ ಮತ್ತೊಂದು ಅವಕಾಶವನ್ನು ನೀಡಲಾಗುವುದು ಮತ್ತು ದಿನಾಂಕಗಳನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಆದರೆ ಯಾವುದೇ ಸಾಕ್ಷಿಗಳು ತಮ್ಮ ಹೇಳಿಕೆಗಳನ್ನು ಸಾರ್ವಜನಿಕ ವಿಚಾರಣೆಯಲ್ಲಿ ಮತ್ತು ವೈಯಕ್ತಿಕವಾಗಿ ನೀಡಬಹುದು, ಬದಲಿಗೆ  ಪೋಸ್ಟ್ ಅಥವಾ ಇಮೇಲ್ ಮೂಲಕ ವಕೀಲರಿಗೆ ತಿಳಿಸುವಂತಿಲ್ಲ" ಎಂದಿದ್ದಾರೆ.

ವಿಚಾರಣೆಯ ಮುಂದಿನ ಹಂತದಲ್ಲಿ,ಮೃತಪಟ್ಟವರ ಕುಟುಂಬ ಬ ಸದಸ್ಯರಿಗೆ ಮತ್ತು ಮಂಗಳೂರು ನಗರ ಪೊಲೀಸರಿಗೆ ಅದರ ಮುಂದೆ ಹಾಜರಾಗಿ ಹೇಳಿಕೆ ನೀಡುವಂತೆ ನೋಟಿಸ್ ನೀಡಲಾಗುವುದು ಎಂದು ಹೇಳಿದರು. ಪೋಲೀಸ್ ಎಫ್‌ಐಆರ್‌ಗಳು, ಸ್ಟೇಷನ್ ದಿನಚರಿಗಳು, , ಮರಣೋತ್ತರ ವರದಿಗಳು, ಎಫ್‌ಎಸ್‌ಎಲ್ ವರದಿಗಳು ಮತ್ತು ಅಗತ್ಯವಿದ್ದರೆ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸೇರಿದಂತೆ ದಾಖಲೆಗಳನ್ನು ಸಲ್ಲಿಸಲು ಕೇಳಲಾಗಿದೆ.

 ಅಬ್ದುಲ್ ಜಲೀಲ್ ಮತ್ತು ನೌಶೀನ್ ಸಾವಿಗೆ ಕಾರಣಗಳು ಮತ್ತು ಪೊಲೀಸರು ಗುಂಡಿನ ದಾಳಿಗೆ ಕಾರಣವಾದ ಸಂದರ್ಭಗಳ ಬಗ್ಗೆ ತನಿಖೆಯು ಮ್ಯಾಜಿಸ್ಟೀರಿಯಲ್ ವಿಚಾರಣೆಯಲ್ಲಿ ನಡೆಯಲಿದೆಸುಪ್ರೀಂ ಕೋರ್ಟ್ ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ನಿಗದಿಪಡಿಸಿದ ಮಾನದಂಡಗಳ ಪ್ರಕಾರ ವಿಚಾರಣೆ ನಡೆಯಲಿದೆ. ಮ್ಯಾಜಿಸ್ಟೀರಿಯಲ್ ವಿಚಾರಣಾ ವರದಿಯನ್ನು ಸರ್ಕಾರ ಮತ್ತು ಎನ್‌ಎಚ್‌ಆರ್‌ಸಿಗೆ ಮಾರ್ಚ್ 23, 2020 ರೊಳಗೆ ಸಲ್ಲಿಸಲಾಗುವುದು ಎಂದು ಅವರು ವಿವರಿಸಿದ್ದಾರೆ.

SCROLL FOR NEXT