ಹೊಸಪೇಟೆ: 'ಹಂಪಿ ಉತ್ಸವ'ದ ಪ್ರಯುಕ್ತ ಹಮ್ಮಿಕೊಂಡಿರುವ ವಿಜಯನಗರ ಕಾಲದ ವೈಭವವನ್ನು ಧ್ವನಿ ಮತ್ತು ಬೆಳಕಿನ ಮೂಲಕ ಪ್ರಸ್ತುತ ಪಡಿಸುವ ವಿಷೇಷ ಕಾರ್ಯಕ್ರಮದ ತಾಲೀಮು ಜನರ ಗಮನ ಸೆಳೆಯಿತು.
ಹಂಪಿಯ ಆನೆ ಲಾಳ ಮೈದಾನದಲ್ಲಿ ಸಿದ್ದಗೊಂಡಿರುವ ವೇದಿಕೆ ಮೇಲೆ ಸುಮಾರು ಸುಮಾರು 250ಕ್ಕೂ ಹೆಚ್ಚು ಕಲಾವಿದರಿಂದ ಪ್ರದರ್ಶನ ನೀಡಲಾಯಿತು.
ಪ್ರವಸೋಧ್ಯಮ ಸಚಿವ ಸಿ.ಟಿ.ರವಿ ಮತ್ತು ಸ್ಥಳೀಯ ಶಾಸಕ ಆನಂದ್ ಸಿಂಗ್ ಹಾಗೂ ಬಳ್ಳಾರಿ ಜಿಲ್ಲಾಧಿಕಾರಿ ನಕುಲ್ ಸೇರಿದಂತೆ ಹಲವು ಗಣ್ಯರು ಧ್ವನಿ ಮತ್ತು ಬೆಳಕಿನ ತಾಲೀಮು ವೀಕ್ಷಿಸಿದರು.
ಈ ವೇಳೆ ಮಾತನಾಡಿದ ವಿಜಯನಗರ ಶಾಸಕ ಆನಂದಸಿಂಗ್ ಮಾತನಾಡಿ, ಉತ್ಸವದಲ್ಲಿ ಅತಿಹೆಚ್ಚು ಜನ ವೀಕ್ಷಣೆ ಮಾಡುವಂತ ಕಾರ್ಯಕ್ರಮ ಇದಾಗಿದೆ. ವಿಜಯನಗರ ಧ್ವನಿ ಮತ್ತು ಬೆಳಕು ಆಕರ್ಷಣೀಯವಾಗಿ ಮೂಡಿ ಬರಲಿ. ಈ ಕಾರ್ಯಕ್ರಮ ಸರಕಾರದ ಘನತೆಯನ್ನು ಹೆಚ್ಚಿಸುತ್ತದೆ. ಹಂಪಿ ಉತ್ಸವಕ್ಕೆ ಬರುವ ಪ್ರತಿಯೊಬ್ಬರೂ ವಿಜಯಗರ ವೈಭವದ ಕಾರ್ಯಕ್ರಮ ನೋಡಬೇಕು. ಎಂದರು.