ರಾಜ್ಯ

ಹಂಪಿ ಉತ್ಸವಕ್ಕೆ ಕ್ಷಣಗಣನೆ: ಮದುವಣಗಿತ್ತಿಯಂತೆ ಸಿಂಗಾರ ಗೊಂಡಿದೆ ವಿಶ್ವ ವಿಖ್ಯಾತ ಹಂಪಿ

Lingaraj Badiger

ಹೊಸಪೇಟೆ: ನಾಳೆ ಮತ್ತು ನಾಡಿದ್ದು ಎರಡು ದಿನಗಳ ಕಾಲ ನಡೆಯುವ ಹಂಪಿ ಉತ್ಸವಕ್ಕೆ ಮದುವಣಗಿತ್ತಿಯಂತೆ ಸಿಂಗಾರ ಗೊಂಡಿದೆ ವಿಶ್ವ ವಿಖ್ಯಾತ ಹಂಪಿ. 

ನಾಲ್ಕು ಪ್ರಮುಖ ವೇದಿಕೆಗಳಲ್ಲಿ ಸ್ಥಳೀಯ ಮತ್ತು ರಾಷ್ಟ್ರೀ ಮಟ್ಟದ ಕಲಾವಿದರನ್ನ ಒಟ್ಟು ಗೂಡಿಸಿ ಈ ಬಾಗದ ಜನ ಸಾಮಾನ್ಯರಿಗೆ ಕಲೆಯ ರಸದೌತಣ ಬಡಿಸಲು ಬಳ್ಳಾರಿ ಜಿಲ್ಲಾಡಳಿತ ಈಗಾಗಲೆ ಎಲ್ಲಾ ಸಿದ್ದತೆ ಮಾಡಿಕೊಂಡಿದ್ದು ನಾಳೆ ಸಂಜೆ ಅಧಿಕೃತವಾಗಿ ಚಾಲನೆ ಸಿಗಬೇಕಿದೆ.

ಹೌದು ನಾಳೆ ಸಂಜೆ ಹಂಪಿ ಉತ್ಸವಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಅಧಿಕೃತವಾಗಿ ಚಾಲನೆ ನೀಡಬೇಕಿದೆ, ಆದರೆ ಸಿ.ಎಂ.ಗೈರು ಹಾಜರಿಯಿಂದ ಹಂಪಿ ಉತ್ಸವ ಕೊಂಚ ಕಳೆ ಕಳೆದುಕೊಳ್ಳುತ್ತಿರುವ ಪರಿಣಾಮ ಕೊನೇಯ ಕ್ಷಣದಲ್ಲಿ ಯಡಿಯೂರಪ್ಪ ಬಾಗಿಯಾದರೂ ಆಶ್ಚರ್ಯ ಪಡಬೇಕಿಲ್ಲ.

ನಿಗದಿಯಂತೆ ಹಂಪಿಯ ಸ್ಮಾರಕಗಳ ಮದ್ಯ ನಾಲ್ಕು ವೇದಿಕೆಗಳು ಸಿದ್ದಗೊಂಡಿವೆ. ಈ ಬಾರಿ ಪ್ರಮುಖ ವೇದಿಕೆ ಎಂಬ ಪಟ್ಟವನ್ನ ಬಸವಣ್ಣ ಮಂಟಪ ಕಳೆದುಕೊಂಡಿದ್ದು, ಎರಡನೆ ವೇದಿಕೆಯಾಗಿ ಮುಂದುವರೆಯಲಿದೆ. ಅದೇ ರೀತಿಯಾಗಿ ಪ್ರಮುಖ ವೇದಿಕೆಯಾಗಿ ಗಾಯತ್ರಿ ಪೀಠ ವೇದಿಕೆ ಸಿದ್ದಗೊಂಡಿದ್ದು, ಒಂದು ವೇಳೆ ಸಿ.ಎಂ.ಯಡಿಯೂರಪ್ಪ ಕಾರ್ಯಕ್ರಮಕ್ಕೆ ಹಾಜರಾಗಿದ್ದೇ ಆದರೆ ಇದೇ ವೇದಿಕೆಯಿಂದ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. 

ಇನ್ನು ಈ ಸಂಬಂಧ ಹಂಪಿಯಲ್ಲಿ ವೇದಿಕೆಗಳು ಸೇರಿದಂತೆ ಪ್ರಮುಖ ಸ್ಮಾರಕಗಳಿಗೆ ಬಣ್ಣ ಬಣ್ಣದ ದೀಪಾಲಂಕಾರ ಮಾಡಲಾಗಿದ್ದು, ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿವೆ. ಇನ್ನು ಎರಡು ದಿನಗಳ ಕಾಲ ನಡೆಯುವ ಹಂಪಿ ಉತ್ಸವದಲ್ಲಿ ಈ ಬಾಗದ ಕಲಾ ರಸಿಕರನ್ನ ತಣಿಸಲು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹೆಸರುಮಾಡಿದ ಕಲಾವಿದರು ಇಲ್ಲಿಗೆ ಆಗಮಿಸಿ ತಮ್ಮ ಪ್ರದರ್ಶನ ನೀಡಲಿದ್ದಾರೆ.

ಮೊದಲನೆ ದಿನ ಕನ್ನಡದ ಹೆಸರಾಂತ ಸಂಗೀತ ನಿರ್ದೇಶಕ ಮನೋ ಮೂರ್ತಿ ತಂಡದವರು ಪ್ರಮುಖ ವೇದಿಕೆಯಲ್ಲಿ ಪ್ರದರ್ಶನ ನೀಡಿದರೆ. ಎರಡನೆ ದಿನ ಖ್ಯಾತ ಹಿಂದಿ ಗಾಯಕಿ ನೀತಿ ಮೋಹನ್ ತಮ್ಮ ಸಂಗೀತ ರಸದೌತಣದಿಂದ ಉತ್ಸವಕ್ಕೆ ಮೆರಗು ನೀಡಲಿದ್ದಾರೆ. ಅಲ್ಲದೆ ವಿಜಯನಗರ ಸಾಮ್ರಾಜ್ಯದ ಘತ ವೈಭವವನ್ನ ಸಾರುವಂತ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಹಂಪಿಯ ಆನೆ ಲಾಳ ಮೈದಾನದಲ್ಲಿ ನಡೆಯಲಿದ್ದು, ಅದರ ಪ್ರಯೋಗಾರ್ಥ ಪ್ರದರ್ಶನ ಇಂದು ನಡೆಯಿತು. 

ಇನ್ನು ಈ ಬಾರಿಯ ಉತ್ಸವದಲ್ಲಿ ನಾಲ್ಕು ವೇದಿಕೆಗಳು ಮಾತ್ರ ನಿರ್ಮಾಣವಾಗುತಿವೆ, ಹಾಗಂತ ಉತ್ಸವಕ್ಕೆ ಬರುವ ಸಾರ್ವಜನಿಕರ ಸಂಖೆ ಮಾತ್ರ ಕಡಿಮೆಯಾಗುವುದಿಲ್ಲ. ಹಾಗಾಗಿ ಉತ್ಸವಕ್ಕೆ ಬರುವಂತ  ಸಾರ್ವಜನಿಕರಿಗೆ ಅನುಕೂಲವಾಗುವಂತೆ ಹಂಪಿ ಮತ್ತು ಕಮಲಾಪುರ, ಕಡ್ಡಿರಾಂಪುರದ ಗ್ರಾಮದ ಬಳಿಯಲ್ಲಿ ವಾಹನ ನಿಲುಗಡೆಗೆ ಸ್ಥಳ ಗುರುತಿಸಲಾಗಿದೆ. ಒಟ್ಟಿನಲ್ಲಿ ಕಡಿಮೆ ವೇದಿಕೆಗಳಲ್ಲಿ ನಡೆಯುವ ಮೊದಲ ಹಂಪಿ ಉತ್ಸವ ಇದಾದರೂ ಅಚ್ಚುಕಟ್ಟಾಗಿ ಉತ್ಸವ ನಡೆಸುವುದಕ್ಕೆ ಏನೆಲ್ಲ ಸಿದ್ದತೆ ಬೇಕು ಅದನ್ನ ಮಾಡಿಕೊಂಡಿದೆ ಬಳ್ಳಾರಿ ಜಿಲ್ಲಾಡಳಿತ.

SCROLL FOR NEXT