ಕಲಬುರಗಿ: ಛಪಾಕ್ ಚಿತ್ರದ ಎಲ್ಲಾ ಟಿಕೆಟ್‌ಗಳನ್ನು ಬುಕ್ ಮಾಡಿದ ಕಾಂಗ್ರೆಸ್ ಕಾರ್ಯಕರ್ತರು 
ರಾಜ್ಯ

ಕಲಬುರಗಿ: ಛಪಾಕ್ ಚಿತ್ರದ ಎಲ್ಲಾ ಟಿಕೆಟ್‌ಗಳನ್ನು ಬುಕ್ ಮಾಡಿದ ಕಾಂಗ್ರೆಸ್ ಕಾರ್ಯಕರ್ತರು

ಬಾಲಿವುಡ್ ಡಿಂಪಲ್‌ ಬೆಡಗಿ ದೀಪಿಕಾ ಪಡುಕೋಣೆ ಅಭಿನಯದ  ಛಪಾಕ್​​ ಚಿತ್ರದ ಶನಿವಾರ ಮಧ್ಯಾಹ್ನ ಪ್ರದರ್ಶನದ ಎಲ್ಲಾ ಟಿಕೆಟ್​​ಗಳನ್ನು ಕಲಬುರಗಿ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಬುಕ್ ಮಾಡುವ ಮೂಲಕ ದೀಪಿಕಾಗೆ ಬೆಂಬಲ ನೀಡಿದ್ದಾರೆ. 

ಕಲಬುರಗಿ: ಬಾಲಿವುಡ್ ಡಿಂಪಲ್‌ ಬೆಡಗಿ ದೀಪಿಕಾ ಪಡುಕೋಣೆ ಅಭಿನಯದ ಛಪಾಕ್​​ ಚಿತ್ರದ ಶನಿವಾರ ಮಧ್ಯಾಹ್ನ ಪ್ರದರ್ಶನದ ಎಲ್ಲಾ ಟಿಕೆಟ್​​ಗಳನ್ನು ಕಲಬುರಗಿ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಬುಕ್ ಮಾಡುವ ಮೂಲಕ ದೀಪಿಕಾಗೆ ಬೆಂಬಲ ನೀಡಿದ್ದಾರೆ. 

ಆ್ಯಸಿಡ್ ದಾಳಿ ಸಂತ್ರಸ್ತೆ ಪಾತ್ರದಲ್ಲಿ ದೀಪಿಕಾ ಪಡುಕೋಣೆ ನಟಿಸಿರುವ ಛಪಾಕ್ ಚಿತ್ರ ಶುಕ್ರವಾರ ತೆರೆಕಂಡಿತ್ತು. ಇತ್ತೀಚೆಗೆ ದೀಪಿಕಾ, ಜೆಎನ್​​ಯುನಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಹೀಗಾಗಿ ಚಪಾಕ್ ಚಿತ್ರ ಬಹಿಷ್ಕರಿಸುವಂತೆ ಟ್ವಿಟರ್​ನಲ್ಲಿ ಬಿಜೆಪಿಯವರು ಅಭಿಯಾನ ನಡೆಸಿದ್ದರು. 

ಇದಕ್ಕೂ ಪ್ರತ್ಯುತ್ತರವಾಗಿ ಯೂತ್​ ಕಾಂಗ್ರೆಸ್,​ ನಗರದ ಮೀರಜ್ ಚಿತ್ರಮಂದಿರದಲ್ಲಿ ಛಪಾಕ್ ಸಿನಿಮಾದ ಮ್ಯಾಟ್ನಿ ಶೋನ ಎಲ್ಲಾ ಟಿಕೆಟ್​​​ಗಳನ್ನು ಬುಕ್ ಮಾಡಿ ಚಿತ್ರಕ್ಕೆ ಬೆಂಬಲ ನೀಡಿದೆ. ಈ ಕುರಿತು ಶುಕ್ರವಾರ ಟ್ವೀಟ್ ಮಾಡಿರುವ ಶಾಸಕ ಪ್ರಿಯಾಂಕ್ ಖರ್ಗೆ, ಏಕಕಾಲಕ್ಕೆ ಸಿನಿಮಾ ನೋಡುವ ಮೂಲಕ ಆ್ಯಸಿಡ್ ದಾಳಿ ಸಂತ್ರಸ್ತರ ಜೊತೆಗೆ ನಾವಿದ್ದೇವೆ ಎನ್ನುವ ಸಂದೇಶ ಸಾರುವುದು ನಮ್ಮ ಉದ್ದೇಶ. ಜೊತೆಗೆ ಪ್ರಜಾಪ್ರಭುತ್ವದಲ್ಲಿ ಏನು ಬೇಕಾದರೂ ಆದೇಶ ಮಾಡಬಹುದು ಎಂದು ತಿಳಿದಿರುವ ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧದ ಹೋರಾಟ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

5 ರಾಜ್ಯಗಳಿಗೆ ರಾಜ್ಯಪಾಲರ ನೇಮಕ; ಇವರೇ ಕರ್ನಾಟಕದ ನೂತನ ರಾಜ್ಯಪಾಲರು...

CM ಡಿಕೆಶಿ​​ ಕುರ್ತಾ ಹಿಡಿದು ಹಿಂದೆ ತಳ್ಳಿದ ರಾಹುಲ್ ಗಾಂಧಿ: ವಿಡಿಯೋ ವೈರಲ್; ಬಂಡೆಗೆ ಸಿಕ್ಕ ಮರ್ಯಾದೆ! ಫುಲ್‌ ಅನ್‌ ರೆಸ್ಪೆಕ್ಟು!

ಸಮರ್ಥರಲ್ಲದಿದ್ದರೆ ಮೊದಲು ನೀವು ರಾಜಿನಾಮೆ ಕೊಡಿ: CJI ಸೂರ್ಯಕಾಂತ್ ರಾಜೀನಾಮೆಗೆ Congress ಒತ್ತಾಯ!

SIR ಅಕ್ರಮಗಳ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ರಾಹುಲ್ ಗಾಂಧಿ; TMC, RJD, ಮಿತ್ರಪಕ್ಷಗಳಿಂದಲೂ ಅರ್ಜಿ

ಸ್ಮಿತ್ ಮಚ್ಚರ್ ಬಗ್ಗೆ ಮೌನವೇಕೆ: ನನ್ನ ಆದರ್ಶ ಧ್ರುವ ರಾಠಿ ಅಲ್ಲ: ಶಿವಸೇನೆ UBT ತೊರೆದ ರಾಷ್ಟ್ರೀಯ ವಕ್ತಾರ ಆನಂದ್ ದುಬೆ!