ರಾಜ್ಯ

ಮೈಸೂರು ವಿವಿ ಪ್ರತಿಭಟನೆ 'ಫ್ರೀ ಕಾಶ್ಮೀರ್' ಫಲಕ ಹಿಡಿದ ವಿದ್ಯಾರ್ಥಿನಿಗೆ ಜಾಮೀನು

Manjula VN

ಮೈಸೂರು: ದೆಹಲಿ ಜೆಎನ್'ಯು ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸಾಚಾರವನ್ನು ಖಂಡಿಸಿ ಬುಧವಾರ ಸಂಜೆ ಮೈಸೂರು ವಿವಿ ಆವರಣದಲ್ಲಿ ನಡೆದ ಪ್ರತಿಭಟನೆ ವೇಳೆ ಫ್ರೀ ಕಾಶ್ಮೀರ್ ಫಲಕ ಪ್ರದರ್ಶಿಸಿ ವಿವಾದ ಸೃಷ್ಟಿಸಿದ್ದ ನಳಿನಿ ಬಾಲಕುಮಾರ್'ಗೆ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಶುಕ್ರವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. 

ಫ್ರೀ ಕಾಶ್ಮೀರ್ ಫಲಕ ಪ್ರದರ್ಶಿಸಿದ್ದ ಹಿನ್ನೆಲೆಯಲ್ಲಿ ಪ್ರತಿಭಟನೆಯ ಆಯೋಜಕರು ಹಾಗೂ ಇತರರ ವಿರುದ್ಧ ರಾಜದ್ರೋಹದ ಪ್ರಕರಣ ದಾಖಲಾಗಿತ್ತು. ಫಲಕ ಹಿಡಿದದ್ದು ಯಾರೆನ್ನುವ ಕುರಿತು ತನಿಖೆ ಆರಂಭವಾಗಿತ್ತು. ಈ ನಡುವೆ ವಿವಿಯ ಹಳೆ ವಿದ್ಯಾರ್ಥಿನಿಯಾದ ನಳಿನ್ ಬಾಲಕುಮಾರ್ ವಿವಾದಾತ್ಮಕ ಫಲಕ ಹಿಡಿದದ್ದು ಎನ್ನುವುದು ಖಚಿತವಾಗುತ್ತಿದ್ದಂತೆಯೇ ಈಕೆಯ ಬಂಧನಕ್ಕೆ ಆಗ್ರ ಕೇಳಿ ಬಂದಿತ್ತು. 

ಈ ಹಿನ್ನೆಲೆಯಲ್ಲಿ ನಳಿನಿಯವರಿಗೆ ಸಮನ್ಸ್ ಜಾರಿ ಮಾಡಲಾಗಿತ್ತು. ಬಳಿಕ ವಿಚಾರಣೆಗೆ ಹಾಜರಾದ ನಳಿನಿಯವರಿಗೆ ನ್ಯಾಯಾಲಯ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. 

ನಾನು ಪತ್ರಿಕೋದ್ಯಮದ ವಿದ್ಯಾರ್ಥಿಯಾಗಿದ್ದು, ದೇಶದ ಬಗ್ಗೆ ಮತ್ತು ದೇಶದ ಜನರ ಬಗ್ಗೆ ಅತ್ಯಂತ ಕಾಳಜಿ ಮತ್ತು ಗೌರವವಿದೆ. ಮೈಸೂರು ವಿವಿಯಲ್ಲಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಫಾರೀ ಕಾಶ್ಮೀರ್ ಎಂದು ನಾನೇ ಖುದ್ದಾಗಿ ಬರೆದು ಹಿಡಿದುಕೊಂಡಿದ್ದೆ. ಇತರ ರಾಜ್ಯಗಳಲ್ಲಿ ಹೇಗೆ ಜನ ನಿರ್ಭಯವಾಗಿ ಮತ್ತು ಸ್ವತಂತ್ರವಾಗಿ ಇದ್ದಾರೋ, ಅದೇ ರೀತಿ ಜಮ್ಮು ಮತ್ತು ಕಾಶ್ಮೀರದಲ್ಲೂ ಆಗಬೇಕು. ಈ ಒಂದು ಭಾವನೆಯಿಂದ ಫಲಕ ಹಿಡಿದುಕೊಂಡಿದ್ದೆ. ಸಾರ್ವಜವರಿಕರಲ್ಲಿ ಈ ಕುರಿತು ಗೊಂದಲ ಸೃಷ್ಟಿಯಾಗಿದ್ದಕ್ಕೆ ಕ್ಷಮೆಯಾಚಿಸುತ್ತೇನೆಂದು ನಳಿನಿ ಸ್ಪಷ್ಟನೆ ನೀಡಿದ್ದಾರೆ. 

SCROLL FOR NEXT