ರಾಜ್ಯ

ಬೆಂಗಳೂರು: ವೃತ್ತಿಜೀವನದ ಬಗ್ಗೆ ಜಿಗುಪ್ಸೆಗೊಂಡ ಟೆಕ್ಕಿ ಆತ್ಮಹತ್ಯೆಗೆ ಶರಣು

Raghavendra Adiga

ಬೆಂಗಳೂರು: ತನ್ನ ವೃತ್ತಿಜೀವನದಲ್ಲಿ ಯಶಸ್ವಿಯಾಗದೆ ಖಿನ್ನತೆಗೆ  ಒಅಳಗಾಗಿದ್ದ 28 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಜೆಪಿ ನಗರದಲ್ಲಿ ನಡೆದಿದೆ.ಜೆಪಿ ನಗರ ಸಮೀಪದ ಕೊಣನಕುಂಟೆಯಲ್ಲಿನ ಅಪಾರ್ಟ್ಮೆಂಟ್ ಸಂಕೀರ್ಣದ ಮೂರನೇ ಮಹಡಿಯಿಂದ ಶುಕ್ರವಾರ ರಾತ್ರಿ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದರೆ ಸಾಯುವ ಮುನ್ನ ಆತ ಯಾವುದೇ ಡೆತ್ ನೋಟ್ ಬರೆದಿಟ್ಟಿಲ್ಲ ಎಂದು ಪೋಲೀಸರು ತಿಳಿಸಿದ್ದಾರೆ.

ಆತ್ಮಹತ್ಯೆಗೆ ಶರಣಾಗಿರುವ ಯುವಕನನ್ನು ಪಂಚವಟಿ ಬಿಡಿಎ ಅಪಾರ್ಟ್ಮೆಂಟ್ ನಿವಾಸಿ ಗಿರೀಶ್ ಕೆ ಜೆ ಎಂದು ಗುರುತಿಸಲಾಗಿದೆ. ಆತ ನಗರದ ಖಾಸಗಿ ಕಾಲೇಜಿನಿಂದ ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್ಸ್ ಕೋರ್ಸ್ ಅನ್ನು ಪೂರ್ಣಗೊಳಿಸಿದ್ದರು.

ರಾತ್ರಿ 7.30 ರ ಸುಮಾರಿಗೆ ಗಿರೀಶ್ ತನ್ನ ರೂಮ್‌ಮೇಟ್‌ಗಳೊಂದಿಗೆ ಅಪಾರ್ಟ್‌ಮೆಂಟ್‌ನಲ್ಲಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದ್ದಕ್ಕಿದ್ದಂತೆ, ಅವರು ಬಾಲ್ಕನಿಗೆ ತೆರಳಿದ್ದು ಅಲ್ಲಿಂದ ಕೆಳಗೆ ಹಾರಿದ್ದಾನೆ. ಅವನ ರೂಮ್‌ಮೇಟ್‌ಗಳು ಅಪಾರ್ಟ್ಮೆಂಟಿನ ನಿವಾಸಿಗಳು ಕೆಳಗೆ ಕಿರುಚಾಟ ನಡೆಸುತ್ತಿರುವುದು ಕೇಳಿದಾಗ  ಅವರು ಹೊರಬಂದು ಸ್ನೇಹಿತನ ಮೃತದೇಹ ನೋಡೊದ್ದಾರೆ.ಅದೇ ಸಂಕೀರ್ಣದಲ್ಲಿ ಉಳಿದುಕೊಂಡಿದ್ದ ದಾದಿಯೊಬ್ಬರು ಪ್ರಥಮ ಚಿಕಿತ್ಸೆ ನೀಡಿ ಬಳಿಕ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅನು ಸತ್ತಿದ್ದಾನೆ ಎಂದು ಘೋಷಿಸಲಾಗಿದೆ. 

ಮುಳಬಾಗಿಲು ಮೂಲದ ಗಿರೀಶ್ ತನ್ನ ಇಬ್ಬರು ಸ್ನೇಹಿತರೊಂದಿಗೆ ವಾಸವಿದ್ದನು, ಆತ ತನ್ನದೇ ಸ್ವಂತ ಸಾಫ್ಟ್‌ವೇರ್ ಸಂಸ್ಥೆಯನ್ನು ತೆರೆಯಲು ಬಯಸಿದ್ದ. ಗಿರೀಶ್ ತಂದೆ ನಿವೃತ್ತ ಸರ್ಕಾರಿ ನೌಕರರಿದ್ದಾರೆ.

ಸಹಾಯವಾಣಿ

ನೀವಾಗಲಿ, ಇನ್ನಾರಾದರಾಗಲಿ ಆತ್ಮಹತ್ಯಾ ಆಲೋಚನೆಗಳನ್ನು ಹೊಂದಿದ್ದರೆ ಅಥವಾ ಭಾವನಾತ್ಮಕ ತೊಂದರೆಯಲ್ಲಿದ್ದರೆ. ಸಹಾಯ ಲಭ್ಯವಿದೆ. ನೀವು SAHAI ಸಹಾಯವಾಣಿಯೊಂದಿಗೆ 080-25497777 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ. ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 10 ರಿಂದ ರಾತ್ರಿ 10 ರವರೆಗೆ ಈ ಸೇವೆ ಲಭ್ಯವಿದೆ. ಇದಲ್ಲದೆ 104 ಆರೋಗ್ಯ ಸಹಾಯವಾಣಿಯು 24/7 ಲಭ್ಯವಿದೆ.

SCROLL FOR NEXT