ರಾಜ್ಯ

50 ಕೋಟಿ ರೂ. ವಂಚನೆ ಪ್ರಕರಣ: ಮಂಗಳೂರಿನಲ್ಲಿ ಐವರ ಬಂಧನ

Manjula VN

ಮಂಗಳೂರು: ಹೆಚ್ಚಿನ ಬಡ್ಡಿ ನೀಡುವುದಾಗಿ ನಂಬಿಸಿ ಜನರಿಗೆ 50 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆನ್ನಲಾದ ನಗರ ಪೊಲೀಸರು ಐವರನ್ನು ಬಂಧಿಸಿದ್ದಾರೆ.

ದೆರೆಬೈಲ್ ನಿವಾಸಿಗಳಾದ ಮಂಜುನಾಥ್ ನಾಯಕ್, ಅಶೋಕ್ ನಾಯಕ್, ಕೊಂಚಾಡಿ ನಿವಾಸಿ ಡೆಂಜಿಲ್ ಮಾಸ್‍ಕರೆನ್ಹಾಸ್, ಬೆಂಗಳೂರು ವಾಸಿಗಳಾದ ವಿಕಾಸ್ ನಾಯಕ್ ಹಾಗೂ ವಿಶ್ವನಾಥ್ ನಾಯಕ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಕುಂದಾಪುರದ ಎಂ.ಕೆ.ಧನುಶ್ ಎಂಬುವರು ಆರಂಭಿಸಿದ ‘ಸ್ಪೀಕ್ ಅಂಡ್ ಗ್ರೂಪ್’ ಎಂಬ ಸಂಸ್ಥೆಯಲ್ಲಿ ಬಂಧಿತರು ಕೆಲಸ ಮಾಡುತ್ತಿದ್ದರು. ಈ ಸಂಸ್ಥೆ ಅನಿವಾಸಿ ಭಾರತೀಯರು ಸೇರಿದಂತೆ ಸಾವಿರಾರು ಜನರಿಗೆ ಹೆಚ್ಚಿನ ಬಡ್ಡಿ ನೀಡುವುದಾಗಿ ಠೇವಣಿ ಸಂಗ್ರಹಿಸುತ್ತಿತ್ತು. ಹೆಚ್ಚಿನ ಬಡ್ಡಿಯ ಕೆಲ ಹೊಸ ವಿಮೆ ಯೋಜನೆಗಳನ್ನು ಜನರಿಗೆ ತೋರಿಸಿ ಜನರನ್ನು ಈ ಸಂಸ್ಥೆ ನಂಬಿಸುತ್ತಿತ್ತು.

SCROLL FOR NEXT