ರಾಜ್ಯ

ನಿರ್ಭಯಾನಾನಂದ ಸ್ವಾಮೀಜಿ ಭಯಕ್ಕೆ ಕಣ್ಣೀರಿಟ್ಟ ಭಕ್ತಿಮಯಿ ಮಾತಾಶ್ರೀ

Srinivasamurthy VN

ಚಿಕ್ಕೋಡಿ: ರಾಜ್ಯದ ಪ್ರತಿಷ್ಠಿತ ಗದಗದ ರಾಮಕೃಷ್ಣ ಆಶ್ರಮದ  ನಿರ್ಭಯಾನಾನಂದ ಸ್ವಾಮೀಜಿ ಭಯಕ್ಕೆ ಶ್ರೀ ಶಾರದಾದೇವಿ ಸೇವಾಶ್ರಮದ  ಸನ್ಯಾಸಿ ಭಕ್ತಿಮಯಿ ಮಾತಾಶ್ರೀ ಕಣ್ಣೀರಿಟ್ಟ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ನಡೆದಿದೆ .

ಚಿಕ್ಕೋಡಿ ಪಟ್ಟಣದ ಭಾಗ್ಯಲಕ್ಷ್ಮಿ ನಗರದಲ್ಲಿರುವ ಶ್ರೀ ಶಾರದಾದೇವಿ  ಸೇವಾಶ್ರಮದ ಸನ್ಯಾಸಿನಿ ಭಕ್ತಿಮಯಿ ಮಾತೃಶ್ರೀ ಇಂದು ಮಾದ್ಯಮಕ್ಕೆ ಹೇಳಿಕೆ ನೀಡಿದ್ದು, ಗದಗ ರಾಮಕೃಷ್ಣ ಆಶ್ರಮದ ನಿರ್ಭಯಾನಂದ ಸ್ವಾಮೀಜಿ ಅವರು ಮನಗೂಳಿ ಶಾಲೆ ಹಾಸ್ಟೆಲ್ ನಲ್ಲಿ ಹೆಣ್ಣು ಮಕ್ಕಳನ್ನ ಸರಿಯಾಗಿ ನೋಡಿಕೊಳ್ಳುತ್ತ್ತಿಲ್ಲ. ಈ ಬಗ್ಗೆ ಅವರ ಗುಟ್ಟು ರಟ್ಟು ಆಗುತ್ತದೆ ಎಂದು ಸ್ವಾಮೀಜಿ ನನಗೆ ಭಯ ಹಾಕುತ್ತಿದ್ದಾರೆ. ಗದಗ, ವಿಜಯಪುರ ಸೇರಿದಂತೆ ಹಲವು ಕಡೆಗೆ ರಾಮಕೃಷ್ಣಾಶ್ರಮದ ಶಾಖೆಗಳಿವೆ. ನಿರ್ಭಯಾನಂದ ಸ್ವಾಮೀಜಿ ಅವರ ಕ್ಯಾರೆಕ್ಟರ್ ಸರಿ ಇಲ್ಲ ಎಂದು ನಿರ್ಭಯಾನಂದ ಸ್ವಾಮೀಜಿ ವಿರುದ್ಧ ಮಾತಾಜಿ ಆರೋಪ ಮಾಡಿದ್ದಾರೆ.

ಕೆಲವು ವರ್ಷಗಳ ಹಿಂದೆ ಅವರ ಶಿಷ್ಯೆಯಾಗಿ ರಾಮಕೃಷ್ಣಾಶ್ರಮದಲ್ಲಿ ಕಾರ್ಯನಿರ್ವಹಿಸಿದ್ದ ಮಾತಾಜಿ ಭಕ್ತಿಮಯಿ, ತಾನು 2010-12 ರ ಸಾಲಿನಲ್ಲಿ ವಿಜಯಪುರ ಜಿಲ್ಲೆಯ ಮನಗೂಳಿ ಗ್ರಾಮದಲ್ಲಿ ಆಶ್ರಮಕ್ಕೆ ಸೇರಿರೋ ಲೇಡಿಸ್ ಹಾಸ್ಟೆಲ್ ನಲ್ಲಿ ಯುವತಿಯರಿಗೆ ಅನ್ಯಾಯ ಆಗುತ್ತಿತ್ತು. ಅನಾಚಾರಗಳನ್ನೆಲ್ಲ ಮಾತಾಜಿ ಹೊರಗೆ ಹಾಕುತ್ತಾರೆ ಎಂಬ ಭಯದಿಂದ ನನಗೆ ಈಗ ತೊಂದರೆ ಕೊಡುತ್ತಿದ್ದಾರೆ ಎಂದು ಚಿಕ್ಕೋಡಿಯಲ್ಲಿ ಮಾಧ್ಯಮಗಳ ಮುಂದೆ ನಿರ್ಭಯಾನಂದ ಸ್ವಾಮೀಜಿ ವಿರುದ್ದ ಆರೋಪಿಸಿ ಕಣ್ಣಿರಿಟ್ಟಿದ್ದಾರೆ ಮಾತಾಜಿ ಭಕ್ತಿಮಯಿ .

ಆರೋಪ ಮಾಡಿದ ಮಾತಾಜಿ ಮೂಲತಃ ತುಮಕೂರು ಜಿಲ್ಲೆಯವರು. 2004 ರಲ್ಲಿ ಸನ್ಯಾಸತ್ವ ದೀಕ್ಷೆ ತಗೊಂಡು ಮನಗೂಳಿ ಶಾಲಾಗೆ ಶಿಕ್ಷಕಿಯಾಗಿ ಸೇರಿರುತ್ತಾರೆ ,2010-12 ರಲ್ಲಿ ಅಲ್ಲಿನ ವ್ಯವಸ್ಥೆ ಬಗ್ಗೆ ಧ್ವನಿ ಎತ್ತಿ ಅಲ್ಲಿಂದ ಹೊರ ನಡೆದು ಸ್ವಂತದ ಶಾರದಾದೇವಿ ಸೇವಾಶ್ರಮ ಮಾಡಿಕೊಂಡಿದ್ದಾರೆ. ಮೊದಲಿನಿಂದಲೂ ನಿರ್ಭಯಾನಂದ ಸ್ವಾಮೀಜಿ ಇವರಿಗೆ ಮಾನಸಿಕ ಕಿರುಕುಳ ಕೊಡುತ್ತಲೆ ಬಂದಿದ್ರು ಆದ್ರೆ ಇತ್ತೀಚಿಗೆ ಸ್ವಾಮೀಜಿ ಇಲ್ಲಿನ ಸ್ಥಳೀಯ ಮುಖಂಡರ ಮೂಲಕ ಶಾರದಾ ದೇವಿ ಸೇವಾಶ್ರಮ ನಡೆಸಬಾರದು ಎಂದು ಒತ್ತಡ ಹಾಕುತ್ತಿದ್ದಾರೆ ಎಂ‌ಬ ಆರೋಪ ಕೇಳಿ ಬಂದಿದೆ.

SCROLL FOR NEXT