ರಾಜ್ಯ

ತೆಲಂಗಾಣ ಜಲಸಂಪನ್ಮೂಲ ಅಭಿವೃದ್ಧಿ ನಿಗಮ ಅಧ್ಯಕ್ಷ  ವೀರಮಲ್ಲರಿಗೆ ರಾಷ್ಟ್ರೀಯ ಬಸವ ಕೃಷಿ ಪ್ರಶಸ್ತಿ ಪ್ರದಾನ

Srinivas Rao BV

ಬಾಗಲಕೋಟೆ: ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದಿಂದ ಕೊಡಮಾಡಲ್ಪಡುವ ರಾಷ್ಟ್ರೀಯ ಬಸವ ಕೃಷಿ ಪ್ರಶಸ್ತಿ-2020ನ್ನು ತೆಲಂಗಾಣ ರಾಜ್ಯದ ಜಲಸಂಪನ್ಮೂಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಪ್ರಕಾಶರಾವ್ ವೀರಮಲ್ಲ ಅವರಿಗೆ ಪ್ರದಾನ ಮಾಡಲಾಯಿತು.

ಕೂಡಲ ಸಂಗಮದ ಬಸವ ವೇದಿಕೆಯಲ್ಲಿ ನಡೆದ ಸಮಾರಂಭದಲ್ಲಿ 1 ಲಕ್ಷ ರು. ನಗದು, ಬಸವೇಶ್ವರ ಭಾವಚಿತ್ರದ ಪೋಟೊ ನೀಡಿ ವೀರಮಲ್ಲ ಅವರನ್ನು ಗೌರವಿಸಲಾಯಿತು.

ಪ್ರಶಸ್ತಿ ಸ್ವೀಕರಿಸಿದ ವೀರಮಲ್ಲ ಅವರು ಮಾತನಾಡಿ ಆಲಮಟ್ಟಿ ಜಲಾಶಯದ ಎತ್ತರವನ್ನು 519.60 ಮೀಟರ್‌ನಿಂದದ 524.252 ಮೀಟರ್‌ಗೆ ಹೆಚ್ಚಿಸಲು ನಮ್ಮ ರಾಜ್ಯದಿಂದ ಯಾವುದೇ ಅಡ್ಡಿಇಲ್ಲ ಎಂದರು. ಕರ್ನಾಟಕ, ಮಹಾರಾಷ್ಟ, ಆಂಧ್ರ ಮತ್ತು ತೆಲಂಗಾಣ ರಾಜ್ಯಗಳು ಒಂದೇ ಕೃಷ್ಣಾ ಕುಟುಂಬ ಇದ್ದ ಹಾಗೆ ಎಂದ ಅವರು ಕೂಡಲ ಸಂಗಮದಲ್ಲಿ ಕೃಷ್ಣ ಕುಟುಂಬ ಸಭೆ ಕರೆಯಲು ನಿರ್ಧರಿಸಲಾಗಿದೆ ಎಂದರು.

ಸಮಾರಂಭದಲ್ಲಿ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಶಾಸಕ, ಮಾಜಿ ಸಚಿವ ಶಿವಾನಂದ ಪಾಟೀಲ, ಉದ್ಯಮಿ ಸಂಗಮೇಶ ನಿರಾಣಿ, ಶಾಸಕ ಎಚ್.ಆರ್. ನಿರಾಣಿ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ, ಮೇಲ್ಮನೆ ಮಾಜಿ ಸದಸ್ಯ ಡಾ. ಎಂ.ಪಿ. ನಾಡಗೌಡ, ತೋಟಗಾರಿಕೆ ವಿಜ್ಞಾನಗಳ ವಿವಿ ಪ್ರಭಾರ ಕುಲಪತಿ ಕೆ.ಎಂ. ಇಂದಿರೇಶ್ ಇತರರು ಇದ್ದರು. 
 

SCROLL FOR NEXT