ಸಾಂದರ್ಭಿಕ ಚಿತ್ರಗಳು 
ರಾಜ್ಯ

ಸರ್ಕಾರಿ ಪ್ರೊಫೆಸರ್ ಗಳಿಗೆ ಹೆಚ್ಚುವರಿ ಕೆಲಸ, ಕಾಲೇಜು ಶಿಕ್ಷಣ ಇಲಾಖೆ ಆದೇಶದಿಂದ ಕಿರಿಕಿರಿ 

ವಾರದಲ್ಲಿ ಪ್ರಾಯೋಗಿಕ ತರಗತಿಗಳೊಂದಿಗೆ ಕಡ್ಡಾಯವಾಗಿ 20 ಗಂಟೆ ಬೋಧನೆ ಸೇರಿದಂತೆ ಹೆಚ್ಚುವರಿಯಾಗಿ ನಾಲ್ಕು ಗಂಟೆಗಳ ಕಾಲ ಪ್ರಿನ್ಸಿಪಾಲರಿಗೆ ಆಡಳಿತಾತ್ಮಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುವಂತೆ ಕಾಲೇಜು ಶಿಕ್ಷಣ ಇಲಾಖೆ ಕಳೆದ ಡಿಸೆಂಬರ್ 12ರಂದು ಆದೇಶ ಹೊರಡಿಸಿದೆ

ಬೆಂಗಳೂರು: ವಾರದಲ್ಲಿ ಪ್ರಾಯೋಗಿಕ ತರಗತಿಗಳೊಂದಿಗೆ ಕಡ್ಡಾಯವಾಗಿ 20 ಗಂಟೆ ಬೋಧನೆ ಸೇರಿದಂತೆ ಹೆಚ್ಚುವರಿಯಾಗಿ ನಾಲ್ಕು ಗಂಟೆಗಳ ಕಾಲ ಪ್ರಿನ್ಸಿಪಾಲರಿಗೆ ಆಡಳಿತಾತ್ಮಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುವಂತೆ ಕಾಲೇಜು ಶಿಕ್ಷಣ ಇಲಾಖೆ ಕಳೆದ ಡಿಸೆಂಬರ್ 12ರಂದು ಆದೇಶ ಹೊರಡಿಸಿದೆ. ಈ ಆದೇಶಕ್ಕೆ ಪ್ರಥಮ ದರ್ಜೆ ಕಾಲೇಜುಗಳ ಪ್ರೊಫೆಸರ್ ಗಳು ಅಸಮಾಧಾನಗೊಂಡಿದ್ದಾರೆ 

ಪ್ರಾಯೋಗಿಕ ತರಗತಿಗಳು ಸೇರಿದಂತೆ ಸಹಾಯಕ ಪ್ರೊಫೆಸರ್ ಗಳಿಗೆ 16 ಗಂಟೆ ಹಾಗೂ ಅಸೊಸಿಯೇಟ್ ಪ್ರೊಫೆಸರ್ಸ್ ಹಾಗೂ ಪ್ರೊಫೆಸರ್ ಗಳಿಗೆ ಪ್ರಾಯೋಗಿಕ ತರಗತಿಗಳು ಸೇರಿದಂತೆ ವಾರದಲ್ಲಿ 14 ಗಂಟೆ ಕಡ್ಡಾಯ ಮಾಡಿರುವ ಯುಜಿಸಿ ಮಾರ್ಗದರ್ಶಿ ಸೂತ್ರಗಳನ್ನು ಈ ಆದೇಶ ಉಲ್ಲಂಘಿಸಿದೆ ಎಂದು ಪ್ರೊಫೆಸರ್ ಒಬ್ಬರು ಹೇಳುತ್ತಾರೆ. ಉಳಿದ ವೇಳೆಯನ್ನು ಸಂಶೋಧನೆ, ಸಂಶೋಧನಾ ಗ್ರಂಥ ಬರವಣಿಗೆ ಹಾಗೂ ಪ್ರಬಂಧ ಮಂಡನೆ ಮತ್ತಿತರ ಉದ್ದೇಶಗಳಿಗೆ ಬಳಸಿಕೊಳ್ಳಲಾಗುತ್ತದೆ ಎಂದು ಅವರು ಹೇಳುತ್ತಾರೆ.

ಕಾಲೇಜು ಶಿಕ್ಷಣ ಇಲಾಖೆಯ ಆದೇಶದಿಂದ ಕೆಲಸದ ಒತ್ತಡ ಹೆಚ್ಚಾಗಿದೆ. ಇದರಿಂದಾಗಿ ಪ್ರಿನ್ಸಿಪಾಲ್ ಅವರೊಂದಿಗೆ ಆಡಳಿತಾತ್ಮಕ ಕಾರ್ಯಗಳಿಗೆ ಸಮಯವನ್ನು ವ್ಯರ್ಥ್ಯ ಮಾಡುವಂತಾಗಿದೆ. ಸಂಶೋಧನೆ, ಸಂಶೋಧನಾ ಗ್ರಂಥ ಬರವಣಿಗೆ, ಮತ್ತಿತರ ಕೆಲಸಗಳನ್ನು ಮಾಡಲು ಸಮಯವೇ ಇಲ್ಲದಂತಾಗಿದೆ ಎಂದು ಪ್ರೊಫೆಸರ್ ಒಬ್ಬರು ಪರಿಸ್ಥಿತಿಯನ್ನು ವಿವರಿಸಿದ್ದಾರೆ.

ನೇರ ಬೋಧನಾ ಅವಧಿಯ ಸಂಖ್ಯೆಯನ್ನು ಬದಲಾಯಿಸಲು ಸಾಧ್ಯವಿಲ್ಲ.  ಥಿಯರಿ ತರಗತಿಗಾಗಿ ವಾರದಲ್ಲಿ 16 ರಿಂದ 14 ಗಂಟೆ ಅವಧಿ ನಿಗದಿಪಡಿಸಲಾಗಿದೆ. ಉಳಿದ ಅವಧಿ ಪ್ರಾಯೋಗಿಕ ತರಗತಿಗೆ ಬಳಸಿಕೊಳ್ಳಬಹುದು. ಅಲ್ಲದೇ ವಿದ್ಯಾರ್ಥಿಗಳ ವೇತನಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ, ಪರೀಕ್ಷೆಗಾಗಿ ಆನ್ ಲೈನ್ ಅರ್ಜಿ ಹಾಕುವ ವಿದ್ಯಾರ್ಥಿಗಳಿಗೆ ನೆರವು ನೀಡುವುದು ಮತ್ತಿತರ ಆಡಳಿತಾತ್ಮಕ ಕಾರ್ಯಗಳನ್ನು ಪ್ರೊಫೆಸರ್ ಗಳು ಮಾಡಬೇಕಾಗುತ್ತದೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

ಬೆಂಗಳೂರು: ಮಾಜಿ ಪ್ರೇಯಸಿ ಕರೆದಳೆಂದು ಮನೆಗೆ ಹೋದ ಪ್ರಿಯಕರ ದುರಂತ ಸಾವು: ಅಷ್ಟಕ್ಕೂ ಆಗಿದ್ದೇನು?

ಸಿದ್ದರಾಮಯ್ಯ ರಾಜೀನಾಮೆ ಸುದ್ದಿ: ಕಣ್ಣೀರಿಟ್ಟ CM ಕಚೇರಿ ಸಿಬ್ಬಂದಿ; ಬೆಂಬಲಿಗರಿಂದ ಪ್ರತಿಭಟನೆ

SCROLL FOR NEXT