ರಾಜ್ಯ

ನಕಲಿ ಪ್ರಮಾಣಪತ್ರ ಸಲ್ಲಿಕೆ ಪ್ರಕರಣ: ಪ್ರಜ್ವಲ್ ರೇವಣ್ಣಗೆ ಬಿಗ್ ರಿಲೀಫ್

Raghavendra Adiga

ಬೆಂಗಳೂರು: ಲೋಕಸಭೆ ಚುನಾವಣೆಯ ಸಮಯದಲ್ಲಿ ಸುಳ್ಳು ಪ್ರಮಾಣಪತ್ರ ಸಲ್ಲಿಕೆ ಮಾಡಿದ್ದರೆಂಬ 
ಆರೋಪದ ಕುರಿತು ಹಾಸನದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಹೈಕೋರ್ಟ್ ದೊಡ್ಡ ರಿಲೀಫ್ ನೀಡಿದೆ. ಸಂಸದರ ಸದಸ್ಯತ್ವ ಅಸಿಂಧುಗೊಳಿಸುವಂತೆ ಕೋರಿ ಮಾಜಿ ಸಚಿವ  ಎ.ಮಂಜು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಶುಕ್ರವಾರ ವಜಾ ಮಾಡಿದೆ.

ತಕರಾರು ಅರ್ಜಿಯ ಜತೆ ಅಫಿಡೆವಿಟ್ ಸಲ್ಲಿಸದೆ ಇದ್ದ ಕಾರಣ  ಎ.ಮಂಜು ಅವರ ಅರ್ಜಿಯನ್ನು ನ್ಯಾಯಮೂರ್ತಿ ಮೈಕಲ್ ಡಿ.ಕುನ್ಹಾ ಅವರಿದ್ದ ಏಕಸದಸ್ಯ ಪೀಠ ವಜಾಗೊಳಿಸಿದೆ.

ಇನ್ನು ಇದೇ ಪ್ರಕರಣದಲ್ಲಿ  ವಕೀಲ ದೇವರಾಜ್ ಗೌಡ ಎಂಬುವರು ಸಲ್ಲಿಸಿರುವ ಇನ್ನೊಂದು ಅರ್ಜಿಯು ಬಾಕಿ ದ್ದು ಅದರ ವಿಚಾರಣೆ  ಜ.23ಕ್ಕೆನಿಗದಿಯಾಗಿದೆ.

ಪ್ರಕರಣದ ವಿವರ

ಕಳೆದ ವರ್ಷ ನಡೆದ ಲೋಕಸಭೆ ಚುನಾವಣೆ ನಾಮಪತ್ರ ಸಲ್ಲಿಕೆ ಮಾಡುವ ವೇಳೆ ಸುಳ್ಳು ಮಾಹಿತಿ ನೀಡಿದ್ದಾರೆಂದು ಆರೋಪಿಸಿ ಪರಾಜಿತ ಅಭ್ಯರ್ಥಿಯಾಗಿರುವ ಎ. ಮಂಜು ತ್ತು ವಕೀಲ ದೇವರಾಜೇಗೌಡ ಅವರು ಹೈ ಕೋರ್ಟ್​ನಲ್ಲಿ  ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಪ್ರಕರಣ ಹೂಡಿದ್ದರು.ಹೈಕೋರ್ಟ್ ಪ್ರಜ್ವಲ್ ರೇವಣ್ಣ ಅವರಿಗೆ ನೋಟೀಸ್ ಜಾರಿಗೊಳಿಸಿದ್ದು ಮೂರು ಬಾರಿ ನೋಟೀಸ್ ಜಾರಿಗೊಳಿಸಿದರೂ ರೇವಣ್ನಗೆ ನೋಟೀಸ್ ತಲುಪಿರಲಿಲ್ಲ. 

SCROLL FOR NEXT