ರಾಜ್ಯ

ಕಾಡುಗಳ್ಳ ವೀರಪ್ಪನ್ ಊರಲ್ಲಿ ಹೋರಿ ಬೆದರಿಸೋ ಸಡಗರ...

Lingaraj Badiger

ಚಾಮರಾಜನಗರ: ಎತ್ತುಗಳನ್ನು ರೊಚ್ಚಿಗೆಬ್ಬಿಸಿ ಅವುಗಳೊಂದಿಗೆ ಗುದ್ದಾಟ ನಡೆಸುವ ಹೋರಿ ಬೆದರಿಸೋ ಹಬ್ಬವನ್ನು ಗಡಿಭಾಗದಲ್ಲಿರುವ ಗೋಪಿನಾಥಂನಲ್ಲಿ ಶನಿವಾರ ಸಂಭ್ರಮದಿಂದ ಆಚರಿಸಲಾಯಿತು.

ಹೋರಿ ಬೆದರಿಸೋ ಹಬ್ಬ.. ಗೋಪಿನಾಥಂನ ಮಾರಿಯಮ್ಮ ದೇಗುಲ ಸಮೀಪ ಜಮಾಯಿಸಿದ ಹೊಗೆನಕಲ್, ಆಲಂಬಾಡಿ ಗ್ರಾಮಸ್ಥರು ತಮ್ಮ ಎತ್ತುಗಳಿಗೆ ಬೆದರುಬೊಂಬೆಗಳನ್ನು ತೋರಿಸಿ ಅವುಗಳನ್ನು ರೊಚ್ಚಿಗೆಬ್ಬಿಸಿ ಕಾದಾಟ ನಡೆಸಿದರು.

ಒಟ್ಟು 57 ಎತ್ತುಗಳು ಈ ಕಾದಾಟದಲ್ಲಿ ಪಾಲ್ಗೊಂಡಿದ್ದವು. ಎತ್ತುಗಳಿಗೆ ಎಳೆಯುವ ಶಕ್ತಿ ಹೆಚ್ಚಾಗಲಿ ಮತ್ತು ದುಷ್ಟಶಕ್ತಿಗಳು ಮಾಯವಾಗಲಿ ಎಂಬುದು ಎತ್ತಿನ ಕಾದಾಟ ನಡೆಸುವ ಉದ್ದೇಶವಾಗಿದೆ ಎಂದು ಗೋಪಿನಾಥಂನ ಶಕ್ತಿಮಾನ್ ಎನ್ನುವರು ತಿಳಿಸಿದರು.

ಎತ್ತಿನ ಎಡಬಲವನ್ನು ಹಗ್ಗದಿಂದ ಹಿಡಿಯುವ 10ಕ್ಕೂ ಹೆಚ್ಚು ಯುವಕರು, ಬೆದರು ಬೊಂಬೆಯನ್ನು ತೋರಿಸಿ ಅದನ್ನು ರೊಚ್ವಿಗೆಬ್ಬಿಸುತ್ತಾರೆ. 10-12 ಮಂದಿಯ ಹಿಡಿತವನ್ನೂ ಲೆಕ್ಕಿಸದ ಎತ್ತುಗಳು ಬೆದರುಬೊಂಬೆಯನ್ನು ತಿವಿದು, ಬಿಸಾಕುತ್ತವೆ. ಇದು ಜಲ್ಲಿಕಟ್ಟಿನಷ್ಟು ಅಪಾಯಕಾರಿ ಅಲ್ಲದಿದ್ದರೂ ಜಾಗೃತರಾಗಿರುವುದು ಅವಶ್ಯಕ.

ರೈತರ ಹಬ್ಬ ಸಂಕ್ರಾಂತಿಯನ್ನು ಒಂದೊಂದು ಪ್ರದೇಶದಲ್ಲಿ ಒಂದು ವಿಶೇಷತೆಯೊಂದಿಗೆ ಆಚರಿಸಲಾಗುತ್ತಿದೆ.

ವರದಿ: ನಂದೀಶ್ ಗೂಳಿಪುರ

SCROLL FOR NEXT