ರಾಜ್ಯ

ಕೇತುಗಾನ ಹಳ್ಳಿಯಲ್ಲೇ ನನ್ನ ಅಂತಿಮ ಬದುಕು: ಎಚ್.ಡಿ. ಕುಮಾರಸ್ವಾಮಿ

Shilpa D

ರಾಮನಗರ: ನಾನು ಹುಟ್ಟಿದ್ದು ಹಾಸನ ಜಿಲ್ಲೆ. ನನ್ನ‌ ಕರ್ಮ ಭೂಮಿ ಕೇತುಗಾನಹಳ್ಳಿ. ನನ್ನ ಬದುಕಿನ ಅಂತಿಮ ಇಲ್ಲಿಯೇ ಆಗಲಿದೆ ಎಂದು‌ ಮಾಜಿ‌ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ‌ ಹೇಳಿದ್ದಾರೆ.

ರಾಮನಗರ ತಾಲ್ಲೂಕು‌ ಕೇತುಗನ ಹಳ್ಳಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ನಾನು ಮುಖ್ಯಮಂತ್ರಿಯಾಗಿದ್ದಾಗ ಸಮಗ್ರ ಅವೃದ್ಧಿಗೆ ಯೋಜನೆ ರೂಪಿಸಿದ್ದೆ. ಆದರೆ ಅವುಗಳನ್ನು‌ ಪೂರ್ಣಗೊಳಿಸಲು ನನಗೆ ಅವಕಾಶ ಸಿಗಲಿಲ್ಲ ಎಂದು ವಿಷಾದಿಸಿದರು.

ನನ್ನ ಅವಧಿಯಲ್ಲಿ‌ ರೈತರ ಸಾಲ ಮನ್ನಾ ಮಾಡಿದ್ದರಿಂದ ರಾಜ್ಯದ ಅಭಿವೃದ್ಧಿ ಕುಂಠಿತ ಗೊಂಡಿತು‌ ಎಂದು ಕೆಲವು ಬಿಜೆಪಿ ಮುಖಂಡರು ಹೇಳಿಕೆ ನೀಡಿದ್ದರು. ಆದರೆ ರೈತರ ಸಾಲ ಮನ್ನಾಗೆ ಬೇಕಿದ್ದ 14 ಸಾವಿರ ಕೋಟಿ ಹಣವನ್ನು‌ ವಿವಿಧ ಮೂಲಗಳಿಂದ ಸಂಗ್ರಹಿಸಿದ್ದೆ. ಇದರಿಂದ ರಾಜ್ಯದ ಅಭಿವೃದ್ಧಿಗೆ ಯಾವುದೆ ರೀತಿಯ ತೊಂದರೆ ಆಗಿಲ್ಲ ಎಂದರು.

ಎಸ್ ಡಿಪಿಐ ಸಂಘಟನೆ ಬ್ಯಾನ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, "ನಾನು ವಿಷಯಗಳನ್ನು ಸಂಪೂರ್ಣವಾಗಿ ತಿಳಿದ ಮೇಲೆ ಮಾತನಾಡುವುದು. ಯಾವುದನ್ನೂ ಗಡಿಬಿಡಿಯಾಗಿ ಮಾತನಾಡೋದಿಲ್ಲ. ಬಿಜೆಪಿಯವರು ಕಲ್ಲು ಹೊಡೆದ ವಿಷಯ ಈವಾಗ ಹೇಳ್ತಾರೆ. ಆಗ ಯಾಕೆ ಹೇಳಲಿಲ್ಲ, ಅಲ್ಲಿ ಸಭೆ ನಡೆದಾಗ ಕಲ್ಲು ಬಿತ್ತು ಅಂತ ಯಾಕೆ ಹೇಳಿಲ್ಲ. ವಿಷಯವನ್ನು ತಿರುಚಲು ಮುಂದಾಗಿದ್ದಾರೆ" ಎಂದು ಆರೋಪಿಸಿದರು.

SCROLL FOR NEXT