ರಾಜ್ಯ

ಕೊಪ್ಪಳ ಡಿಸಿಯನ್ನು ನಿಂದಿಸಿದ ಮಾಜಿ ಅರ್ಚಕನ ವಿರುದ್ಧ ಎಫ್ಐಆರ್

Srinivas Rao BV

ಗಂಗಾವತಿ: ತಾಲ್ಲೂಕಿನ ಅಂಜನಾದ್ರಿ ಬೆಟ್ಟದ ಆಂಜನೇಯ ದೇಗುಲದ ಪೂಜೆಯ ಹಕ್ಕಿನಂದ ತಮ್ಮನ್ನು ಬಿಡಿಸಿ ಹೊರಗಟ್ಟಿದ ಕೊಪ್ಪಳ ಜಿಲ್ಲಾಧಿಕಾರಿಯನ್ನು ಗೂಂಡಾ ಎಂದು ನಿಂದಿಸಿದ ಅರ್ಚಕರೊಬ್ಬರ ಮೇಲೆ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಗಂಗಾವತಿಯ ತಹಶೀಲ್ದಾರ್ ಎಲ್.ಡಿ. ಚಂದ್ರಕಾಂತ್ ಈ ಬಗ್ಗೆ ಗಂಗಾವತಿ ಗ್ರಾಮೀಣ ಠಾಣೆಗೆ ದೂರು ಕೊಟ್ಟಿದ್ದು, ಅಂಜನಾದ್ತಿ ಬೆಟ್ಟದ ಆಂಜನೇಯ ದೇಗುಲದ ಈ ಹಿಂದಿನ ಪ್ರಧಾನ ಅರ್ಚಕರಾಗಿದ್ದ ಮಹಾಂತ ವಿದ್ಯಾದಾಸ ಬಾಬಾ ಅವರ ಮೇಲೆ ಎಫ್ಐಆರ್ ದಾಖಲಾಗಿದೆ.
ರಾಸಲೀಲೆ ಪ್ರಕರಣದಲ್ಲಿ ಸಿಕ್ಕುಬಿದ್ದ ಬಳಿಕ ಜನ ಹಾಗೂ ಭಕ್ತರ ವಿರೋಧದಿಂದಾಗಿ ವಿದ್ಯಾದಾಸ ಬಾಬಾ ಅವರನ್ನು ಜಿಲ್ಲಾಡಳಿತ ತೆರವು ಮಾಡಿ ದೇಗುಲವನ್ನು ಮುಜುರಾಯಿ ಇಲಾಖೆಗೆ ಒಪ್ಪಿಸಿದ ಬಳಿಕ ಅರ್ಚಕ ನ್ಯಾಯಾಲಯದ ಕಟ್ಟೆ ಹತ್ತಿದ್ದರು.

ಈ ಮಧ್ಯೆ ಜ.17ರಂದು ಅನಾಗತ್ಯವಾಗಿ ಫೇಸ್ ಬುಕ್ನ ಖಾತೆಯೊಂದರಲ್ಲಿ ಪ್ರತ್ಯಕ್ಷವಾದ ವಿದ್ಯಾದಾಸ ಬಾಬಾ, ಮೂರುವರೆ ನಿಮಿಷದ ಭಾಷಣದ ವಿಡಿಯೋದಲ್ಲಿ ಕೊಪ್ಪಳ ಜಿಲ್ಲಾಧಿಕಾರಿಯನ್ನು ಜರಿದಿದ್ದನ್ನು ಗಮನಿಸಿದ ತಹಸೀಲ್ದಾರ್, ಎಫ್ಐಆರ್ ದಾಖಲಿಸಿದ್ದಾರೆ.

SCROLL FOR NEXT