ರಾಜ್ಯ

ಎಲ್ಲಾ ಖಾಸಗಿ, ಸಾರ್ವಜನಿಕ ಪ್ರದೇಶಗಳಲ್ಲಿರುವ ಮರಗಳ ಎಣಿಕೆ ಆರಂಭಿಸಿ: ಬಿಬಿಎಂಪಿಗೆ 'ಹೈ' ಸೂಚನೆ

Manjula VN

ಬೆಂಗಳೂರು: ನಗರದಲ್ಲಿ ಮರಗಳ ಗಣತಿ ಆರಂಭಿಸಲು ನ್ಯಾಯಾಲಯ ನೀಡಿದ್ದ ಆದೇಶ ಮತ್ತು ಕರ್ನಾಟಕ ಮರ ಸಂರಕ್ಷಣಾ ಕಾಯ್ದೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ಎಂದು ಬಿಬಿಎಂಪಿ ಮತ್ತು ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯನ್ನು ಹೈಕೋರ್ಟ್ ಸೋಮವಾರ ತರಾಟೆಗೆ ತೆಗೆದುಕೊಂಡಿತ್ತು. 

ಈ ಕುರಿತಂತೆ ದತ್ತಾತ್ರೇಯ ಟಿ.ದೇವರೆ ಮತ್ತು ಬೆಂಗಳೂರು ಎನ್ವಿರಾಯಿನ್ ಮೆಂಟ್ ಟ್ರಸ್ಟ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ, ಮರಗಳ ಗಣತಿ ಕಾರ್ಯ ನಡೆಸಲು ನ್ಯಾಯಾಲಯ ನೀಡಿದ್ದ ಗಡುವು ಮುಗಿದಿದೆ. ಬಿಬಿಎಂಪಿ ಹಾಕಿಕಕೊಂಡಿದ್ದ ಕಾಲಮಿತಿಯೂ ಮೀರಿದೆ. ಆದರೂ ಗಮತಿ ಆರಂಭವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತು. ಅಲ್ಲದೆ, ಕರ್ನಾಟಕ ರಾಜ್ಯ ಮರ ಸಂರಕ್ಷಣಾ ಕಾಯ್ದೆ-1976ರ ಸೆಕ್ಷನ್ 7 (ಬಿ) ಅನ್ವಯ ಮರಗಳ ಗಣತಿ ನಡೆಸಬೇಕು. 

ಎಲ್ಲಾ ಮರಗಳ ಎಣಿಕೆ ಆಗಬೇಕು ಎಂದು ಕಾಯ್ದೆ ಬಹಳ ಸ್ಪಷ್ಟವಾಗಿ ಹೇಳಿದೆ. ನ್ಯಾಯಾಲಯ ಸಹ ಸರಳವಾಗಿ ಈ ಬಗ್ಗೆ ಆದೇಶ ಬರೆಸಿದೆ. ಕೇವಲ ಬಿಬಿಎಂಪಿ ವ್ಯಾಪ್ತಿಯ ರಸ್ತೆ ಮತ್ತು ಬೀದಿಗಳಲ್ಲಿನ ಮರಗಳ ಗಣತಿ ನಡೆಸಲು ಬಿಬಿಎಂಪಿ ಹಾಗೂ ಮರ ವಿಜ್ಞಾನ ಸಂಸ್ಥೆ ಏಕೆ ಒಪ್ಪಂದ ಮಾಡಿಕೊಂಡಿವೆ? ನ್ಯಾಯಾಲಯದ ಆದೇಶ ಹಾಗೂ ಕಾಯ್ದೆಯ ನಿಯಮಗಳ ಸರಳವಾಗಿದ್ದರೂ, ಒಪ್ಪಂದಕ್ಕೆ ಸಹಿ ಹಾಕಿರುವ ಪಾಲಿಕೆ ಮತ್ತು ಮರ ವಿಜ್ಞಾನ ಸಂಸ್ಥೆಯ ಅಧಿಕಾರಿಗಳಿಗೆ ಏಕೆ ಅರ್ತವಾಗಲಿಲ್ಲ ನ್ಯಾಯಾಲಯದ ಆದೇಶ ಹಾಗೂ ಕಾಯ್ದೆ ಏನಿದೆ ಎಂದು ತಿಳಿದುಕೊಳ್ಳದೆ ಸಹಿ ಮಾಡಿದ್ದಾರಾ ಎಂದು ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿತು. 

ನಂತರ ಈ ಎಲ್ಲಾ ವಿಚಾರಗಳಲ್ಲಿ ಎಲೆಲ್ಲಿ ತಪ್ಪು ಆಗಿದೆ. ಅದಕ್ಕೆ ಕಾರಣವೇನು, ತಪ್ಪಿತಸ್ಥರ ವಿರುದ್ಧ ಏನು ಕ್ರಮ ಕೈಗೊಳ್ಳಲಾಗುತ್ತದೆ ಎಂಬುದರ ವಿಚಾರಣೆಯನ್ನು ನ್ಯಾಯಪೀಠ ಫೆ.11ಕ್ಕೆ ಮುಂದೂಡಿತು. ೃ

SCROLL FOR NEXT