ರಾಜ್ಯ

ಉಡುಪಿ ಬಿಷಪ್ ಇಸಾಲ್ ಲೋಬೋ ವಿರುದ್ಧ ಅವಹೇಳನಕಾರಿ ಪೋಸ್ಟ್:ಎಫ್ಐಆರ್ ದಾಖಲು

Raghavendra Adiga


ಮಂಗಳೂರು: ಉಡುಪಿ ಬಿಷಪ್ ಜೆರಾಲ್ಡ್ ಇಸಾಕ್ ಲೋಬೊ ವಿರುದ್ಧ ಸಾಮಾಜಿಕ ತಣಗಳಲ್ಲಿ ಅವಹೇಳನಕಾರಿ ಹೇಳಿಕೆಗಳನ್ನು ಪ್ರಕಟಿಸಿದ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೋರಿ ಉಡುಪಿ ಕ್ಯಾಥೊಲಿಕ್ ಸಭಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದೆ.

ಜನವರಿ 19 ರಂದು ಸಂತೆಕಟ್ಟೆ  ಮೌಂಟ್ ರೋಸರಿ ಚರ್ಚ್ ಆವರಣದಲ್ಲಿ ನಡೆದ ಕ್ಯಾಥೊಲಿಕರ ಡಯಾಸಿಸ್ ಮಟ್ಟದ ಸಮ್ಮೇಳನದಲ್ಲಿ ಬಿಷಪ್ ಮಾಡಿದ್ದ ಭಾಷಣದ ಬಗೆಗೆ ಮೋಹನ್ ಸಾಲಿಯಾನ್ ಅವಹೇಳನಕಾರಿಯಾದ ಪ್ರತಿಕ್ರಿಯೆ ಕೊಟ್ಟಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

"ಬಿಷಪ್ ಲೋಬೊ ಉಡುಪಿಯಲ್ಲಿನ ಕ್ಯಾಥೊಲಿಕ್ ಸಮುದಾಯದ ಸರ್ವೋಚ್ಚ ಮುಖ್ಯಸ್ಥರಾಗಿದ್ದಾರೆ ಮತ್ತು ಅವರಿಗೆ ಯಾವುದೇ ಅವಮಾನವಾದರೆ ಅದು  ಇಡೀ ಕ್ಯಾಥೊಲಿಕ್ ಸಮುದಾಯವನ್ನು ಅವಮಾನಿಸಿದಂತೆ ಸಾಲಿಯಾನ್ ಅವರ ಫೆಸ್ ಬುಕ್ ಪೋಸ್ಟ್ ವೈರಲ್ ಆಗುತ್ತಿದೆ ಮತ್ತು ಕೋಮು ಸೌಹಾರ್ದತೆಯನ್ನು ಹಾಳು ಮಾಡುತ್ತದೆ ಎಂದು  ದೂರಿನಲ್ಲಿ ತಿಳಿಸಲಾಗಿದೆ.

ಉಡುಪಿಯ ಕ್ಯಾಥೊಲಿಕ್ ಸಮುದಾಯವು ಎಂದಿಗೂ ಶಾಂತಿಯನ್ನು ಬಯಸುತ್ತದೆ.ಆದರೆ ಕೆಲವು ಕಾರಣಗಳಿಂದ ಸಮುದಾಯಗಳ ನಡುವಿನ ಸಾಮರಸ್ಯವನ್ನು ಹಾಳುಮಾಡಲು ಪ್ರಯತ್ನಿಸುತ್ತಿರುವುದು ದುರದೃಷ್ಟಕರ ಎಂದು ಕ್ಯಾಥೊಲಿಕ್ ಸಭಾ ಅಭಿಪ್ರಾಯಪಟ್ಟಿದೆ. ಸಾಮಾಜಿಕ ತಾಣದಲ್ಲಿ ಬಿಷಪ್ ಅವರನ್ನು ಅವಮಾನಿಸಿದ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪೋಲೀಸರಿಗೆ ಮನವಿ ಮಾಡಲಾಗಿದೆ ಮೋಹನ್ ಸಾಲಿಯಾನ್ ವಿರುದ್ಧ  ಪ್ರಕರಣಗದಾಖಲಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

SCROLL FOR NEXT