ರಾಜ್ಯ

ಮೃತಪಟ್ಟ ಬಳಿಕ ಅಂಗಾಂಗ ದಾನ: ಸಾವಿನಲ್ಲೂ ಸಾರ್ಥಕತೆ ಮೆರೆದ ಯುವಕ

Manjula VN

ಬೆಂಗಳೂರು: ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಮೃತಪಟ್ಟ ಯುವಕನೊಬ್ಬ ತನ್ನ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ. 

ಸುಜನ್ (21) ಅಂಗಾಂಗ ದಾನ ಮಾಡಿದ ವಿದ್ಯಾರ್ಥಿ. ಸಿವಿನ್ ಎಂಜಿನಿಯರಿಂಗ್ ಓದುತ್ತಿದ್ದ ಸುಜನ್ ಜ.17ರಂದು ದೊಡ್ಡಬಳ್ಳಾಪುರದ ಬಳಿ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಅಪಘಾತಕ್ಕೀಡಾಗಿದ್ದ. ಬಳಿಕ ಆತನನ್ನು ಕೊಲಂಬಿಯಾ ಏಷ್ಯಾದಲ್ಲಿ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಅಪಘಾತದಲ್ಲಿ ಸುದನ್ ಮೆದುಳಿಗೆ ತೀವ್ರವಾಗಿ ಗಾಯವಾಗಿದೆ ಎಂಬುದು ಸಿಟಿ ಸ್ಕ್ಯಾನ್ ಮೂಲಕ ತಿಳಿದುಬಂದಿತ್ತು. ಹಲವು ಚಿಕಿತ್ಸೆ ನೀಡಿದರು ಪ್ರಯೋಜನವಾಗಿರಲಿಲ್ಲ. ಸುಜನ್ ಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ಬಳಿಕ ಸುಜನ್ ಕೋಮಾಗೆ ಜಾರಿದ್ದ. ತೀವ್ರ ಚಿಕಿತ್ಸೆಯ ಬಳಿಕವೂ ಚೇತರಿಕೆ ಕಂಡುಬರದ ಹಿನ್ನಲೆಯಲ್ಲಿ ವೈದ್ಯರು ಮಿದುಳು ನಿಷ್ಕ್ರಿಯಗೊಂಡಿದೆ ಎಂದು ಘೋಷಿಸಿದ್ದರು. 

ಬಳಿಕ ಸುಜನ್ ಪೋಷಕರು ಮಗನ ಸ್ಥಿತಿಯನ್ನು ಅರ್ಥ ಮಾಡಿಕೊಂಡು ಅಂಗಾಗ ದಾನ ಮಾಡಲು ಒಪ್ಪಿಗೆ ಸೂಚಿಸಿದ್ದರು. ಇದರಂತೆ ಅಂಗಾಂಗಗಳನ್ನು ತೆಗೆದುಕೊಳ್ಳುವ ಪ್ರಕ್ರಿಯೆ ಜ22ರಂದು ಕರ್ನಾಟಕದ ಕಸಿ ಪ್ರಾಧಿಕಾರ ಜೀವನ ಸಾರ್ಥಕತೆಯ ಮೂಲಕ ಪ್ರಾರಂಭವಾಗಿದ್ದು. ದಾನ ಮಾಡಲಾದ ಅಂಗಾಂಗಗಳು ಇದೀಗ ಐವರಿಗೆ ಜೀವ ನೀಡಿದೆ. 

ಮರುಪಡೆಯಲಾಗಿದ ಅಂಗಾಂಗಗಳಲ್ಲಿ ಒಂದು ಮೂತ್ರಪಿಂಡವನ್ನು ಕೊಲಂಬಿಯಾ ಏಷ್ಯಾ ಹೆಬ್ಬಾಳ ಆಸ್ಪತ್ರೆಯಲ್ಲಿದ್ದ ರೋಗಿಗೆ ನೀಡಲಾಗಿತ್ತು. ಇತರೆ ಮೂತ್ರಪಿಂಡ ಮತ್ತು ಯಕೃತ್ತನ್ನು ಸಕ್ರಾ ವರ್ಲ್ಡ್ ಆಸ್ಪತ್ರೆಯಲ್ಲಿ ಸೂಕ್ತರಿಗೆ ನೀಡಲು ಸ್ಥಲಾಂತರಿಸಲಾಗಿದೆ. ಇನ್ನು ಎರಡು ಕಾರ್ನಿಯಾಗಳನ್ನು ಮಿಂಟೋ ಕಣ್ಣಿನ ಆಸ್ಪತ್ರೆಗೆ ಹಸ್ತಾಂತರಿಸಲಾಗಿದೆ.

SCROLL FOR NEXT