ರಾಜ್ಯ

ಕಾರವಾರದ 'ಸಾಗರ್ ಮಾಲಾ' ಯೋಜನೆಗೆ ಹೈಕೋರ್ಟ್ ತಡೆ

Sumana Upadhyaya

ಬೆಂಗಳೂರು: ತೀವ್ರ ವಿರೋಧ ವ್ಯಕ್ತವಾದ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಬಂದರಿನ ಎರಡನೇ ಹಂತದ ಅಭಿವೃದ್ಧಿ ಯೋಜನೆಯಾದ ಸಾಗರ್ ಮಾಲಾ ಯೋಜನೆಗೆ ಹೈಕೋರ್ಟ್ ತಡೆಯೊಡ್ಡಿದೆ. 


ಬೈತ್ಕೋಲ್ ಬಂದರು ನಿರಾಶ್ರಿತ ಯಾಂತ್ರೀಕೃತ ದೋಣಿ ಮೀನುಗಾರರ ಸಹಕಾರ ಸಂಘ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಒಕಾ ಮತ್ತು ನ್ಯಾಯಮೂರ್ತಿ ಹೇಮಂತ್ ಚಂದಗೌಡರ್ ಅವರನ್ನೊಳಗೊಂಡ ವಿಭಾಗೀಯ ಪೀಠ ಯೋಜನೆಗೆ ತಡೆ ತರುವಂತೆ ಮಧ್ಯಂತರ ಆದೇಶ ನೀಡಿದೆ.


ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮೋದನೆ ಪಡೆಯುವ ಮುನ್ನವೇ ಬಂದರು ಸುತ್ತಮುತ್ತ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳಲಾಗಿದ್ದು ಸಮುದ್ರವನ್ನು ಮೂಲ ಪರಿಸ್ಥಿತಿಗೆ ತರಬೇಕು ಎಂದು ವಿಭಾಗೀಯ ಪೀಠ ಬಂದರು ನಿರ್ದೇಶಕರು, ಒಳನಾಡಿನ ಜಲ ಸಾರಿಗೆಗೆ ಹೇಳಿದೆ.

SCROLL FOR NEXT