ರಾಜ್ಯ

ತಿಂಗಳಾಂತ್ಯದೊಳಗೆ ಮಂತ್ರಿಮಂಡಲ ವಿಸ್ತರಣೆ: ಯಡಿಯೂರಪ್ಪ

Srinivas Rao BV

ಹಾಸನ: ಬಹುದಿನಗಳಿಂದ ರಾಜಕೀಯ ಡೋಲಾಯಮಾನಕ್ಕೆ ಕಾರಣವಾಗಿರುವ ಮಂತ್ರಿ ಮಂಡಲವನ್ನು ಈ ಮಾಸಾಂತ್ಯದ ವೇಳೆಗೆ ವಿಸ್ತರಣೆ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ಆದರೆ ಖಚಿತ ದಿನಾಂಕ ಪ್ರಕಟಿಸಿಲ್ಲ.

ಹೊಳೆನರಸೀಪುರ ತಾಲ್ಲೂಕಿನ ಸಿಂಗನ ಕುಪ್ಪೆ ಗ್ರಾಮದ ಹೆಲಿಪ್ಯಾಡ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂತ್ರಿ ಮಂಡಲ ವಿಸ್ತರಣೆ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ಮಾಸಾಂತ್ಯದ ವೇಳೆಗೆ ಎಲ್ಲವೂ ಸುಸೂತ್ರವಾಗಿ ನರವೇರಲಿದೆ ಎಂದರು. ತಮ್ಮ ವಿದೇಶಿ ಪ್ರವಾಸ ದಾವೋಸ್ ಭೇಟಿ‌ ಅತ್ಯಂತ ಫಲಪ್ರದವಾಗಿದ್ದು, ರಾಜ್ಯದಲ್ಲಿ ಅನೇಕರು ಬಂಡವಾಳ ಹೂಡಲು ಆಸಕ್ತಿ ತೋರಿದ್ದಾರೆ. ಹಲವು ಕೈಗಾರಿಕೋದ್ಯಮಿಗಳು ನಮ್ಮ ರಾಜ್ಯಕ್ಕೆ ಬರಲು ಒಪ್ಪಿದ್ದಾರೆ ಎಂದರು.

40 ಕ್ಕೂ ಹೆಚ್ಚು ಕೈಗಾರಿಕೋದ್ಯಮಿಗಳನ್ನು ತಾವು ವೈಯಕ್ತಿಕವಾಗಿ ಭೇಟಿ ಮಾಡಿ ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಮಾಡಲು ವಿನಂತಿಸಿದ್ದೇನೆ. ಎಲ್ಲರೂ ಸಕಾರತ್ಮಕವಾಗಿ ಸ್ಪಂದಿಸಿದ್ದಾರೆ. ಎಸ್‌ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ದಾವೋಸ್ ಗೆ ತೆರಳಿದ್ದರು. ಅದಾದ 16 ವರ್ಷಗಳು ಕಳೆದ ಮೇಲೆ ತಾವು ದಾವೂಸ್ ಗೆ ಹೋಗಿದ್ದು ತುಂಬಾ ಉಪಯುಕ್ತವಾಯಿತು. ದೊಡ್ಡ ಪ್ರಮಾಣದಲ್ಲಿ ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿ ಮಾಡಲು ಭರವಸೆ ದೊರೆತಿದೆ. ಇದರಿಂದ ಕೃಷಿ, ನಿರುದ್ಯೋಗ ಸಮಸ್ಯೆಗಳನ್ನು ಬಗೆಹರಿಸಲು ಅನುಕೂಲವಾಲಿದೆ ಎಂದು ಮುಖ್ಯ ಮಂತ್ರಿ ಅವರು ತಿಳಿಸಿದರು.

SCROLL FOR NEXT