ರಾಜ್ಯ

ಹುಬ್ಬಳ್ಳಿ: 50 ನಿಮಿಷದಲ್ಲಿ 80 ಕಿಮೀ ಕ್ರಮಿಸಿ ಅವಳಿ ಮಕ್ಕಳ ಜೀವ ಉಳಿಸಿದ ಆಂಬುಲೆನ್ಸ್ ಡ್ರೈವರ್!

Shilpa D

ಹುಬ್ಬಳ್ಳಿ: ಪೊಲೀಸರ ಸಹಕಾರ ಹಾಗೂ ಆಂಬುಲೆನ್ಸ್ ಚಾಲಕನ ಸಮಯ ಪ್ರಜ್ಞೆಯಿಂದಾಗಿ  ನವಜಾತ ಅವಳಿ ಶಿಶುಗಳು ಜೀವಂತವಾಗಿ ಉಳಿದಿವೆ.

ಹಾವೇರಿ ಮತ್ತು ಧಾರವಾಡ ಜಿಲ್ಲೆಗಳ ಪೊಲೀಸರ ಸಹಕಾರದಿಂದಾಗಿ ಆಂಬುಲೆನ್ಸ್ ಚಾಲಕ 80  ಕಿಮೀ ದೂರವನ್ನು ಕೇವಲ 50 ನಿಮಿಷಗಳಲ್ಲಿ ಕ್ರಮಿಸಿ ಅವಳಿ ಮಕ್ಕಳ ಜೀವವನ್ನು ಉಳಿಸಿದ್ದಾರೆ. 

ಲಕ್ಷ್ಮಿ ಎಂಬುವರು ಹಾವೇರಿಯಲ್ಲಿ  ಅವಳಿ-ಜವಳಿ ಮಕ್ಕಳಿಗೆ ಜನ್ಮ ನೀಡಿದ್ದರು, ಆದರೆ ನವಜಾತ ಶಿಶುಗಳಿಗೆ ಆರೋಗ್ಯ ಸಮಸ್ಯೆ ಉಲ್ಬಣವಾಗಿತ್ತು. ವೈದ್ಯರು ಕೂಡಲೇ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲು ಸೂಚಿಸಿದರು. 

ಶಿಗ್ಗಾನ್ ನಿಂದ ಹುಬ್ಬಳ್ಳಿಗೆ ಮಕ್ಕಳನ್ನು ಕರೆದೊಯ್ಯಬೇಕಿತ್ತು, ಹಾವೇರಿ ಮತ್ತು ಪೊಲೀಸರು ಎಸ್ಕಾರ್ಟ್ ಮಾಡಿ ಆಂಬುಲೆನ್ಸ್ ಶೀಘ್ರವಾಗಿ ಆಸ್ಪತ್ರೆ ತಲುಪುವಂತೆ ಸಹಾಯ ಮಾಡಿದ್ದಾರೆ.  ಜನಿಸಿದ ಒಂದು ಗಂಟೆಯೊಳಗೆ ಅವಳಿ ಮಕ್ಕಳನ್ನು ಹುಬ್ಬಳ್ಳಿ ಆಸ್ಪತ್ರೆಗೆ ರವಾನಿಸಿದ್ದಾರೆ. 

ಆಸ್ಪತ್ರೆ ಸಿಬ್ಬಂದಿ  ಪೊಲೀಸರಿಗೆ ಈ ವಿಷಯ ತಿಳಿಸಿದ್ದಾರೆ, ಕೂಡಲೇ ಪೊಲೀಸರು ಎಸ್ಕಾರ್ಟ್ ನಲ್ಲಿ ಆಂಬುಲೆನ್ಸ್  ಕರೆದೊಯ್ದಿದ್ದಾರೆ.  ಆಂಬುಲೆನ್ಸ್ ಚಾಲಕ ತೌಫೀಕ್ ಪಠಾಣ್  ಪೊಲೀಸರನ್ನು ಹಿಂಬಾಲಿಸಿ 50 ನಿಮಿಷದಲ್ಲೇ  ಆಸ್ಪತ್ರೆಗೆ ಕರೆದುಕೊಂಡಿದ್ದಾರೆ.

ನವಜಾತ ಶಿಶುಗಳನ್ನು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಸೇರಿಸಿದ ಕಾರಣ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಿದ ಪರಿಣಾಮ ಮಕ್ಕಳು ಆರೋಗ್ಯವಾಗಿದ್ದಾರೆ.

SCROLL FOR NEXT