ರಾಜ್ಯ

ಎಂಜಿ ರಸ್ತೆಯಲ್ಲಿರುವ ಐಕಾನಿಕ್ ಸೆಂಟ್ರಲ್ ಕಾಟೇಜ್ ಎಂಪೋರಿಯಂ ಸ್ಥಳಾಂತರ!

Srinivas Rao BV

ಬೆಂಗಳೂರು: ಎಂಜಿ ರಸ್ತೆಯಲ್ಲಿರುವ ಐಕಾನಿಕ್ ಸೆಂಟ್ರಲ್ ಕಾಟೇಜ್ ಎಂಪೋರಿಯಂ ಸ್ಥಳಾಂತರಗೊಳ್ಳಲಿದೆ. 

ಕಳೆದ ಒಂದಷ್ಟು ವರ್ಷಗಳಲ್ಲಿ ಎದುರಾಗಿರುವ ನಷ್ಟ, ಕುಸಿಯುತ್ತಿರುವ ವ್ಯಾಪಾರ, ಈ ನಡುವೆ ಕೊರೋನಾದಿಂದ ಉಂಟಾಗಿರುವ ಲಾಕ್ ಡೌನ್ ಈ ಎಲ್ಲಾ ಅಂಶಗಳು  ಸೆಂಟ್ರಲ್ ಕಾಟೇಜ್ ಇಂಡಸ್ಟ್ರೀಸ್ ಎಂಪೋರಿಯಂನ್ನು ಹೆಚ್ಎಸ್ಆರ್ ಲೇಔಟ್ ನ ಸಣ್ಣ ಔಟ್ ಲೆಟ್ ಗೆ ಸ್ಥಳಾಂತರಗೊಳಿಸಲು ನಿರ್ಧರಿಸಲಾಗಿದೆ. 

ಟ್ರಿನಿಟಿ ಮೆಟ್ರೋ ಸ್ಟೇಷನ್ ಬಳಿ ಶುಭಾರಾಮ್ ಕಾಂಪ್ಲೆಕ್ಸ್ ನ ಗ್ರೌಂಡ್ ಫ್ಲೋರ್ ಹಾಗೂ ಬೇಸ್ ಮೆಂಟ್ ಗಳಲ್ಲಿ ಸುಮಾರು 11,750 ಸ್ಕ್ವೇರ್ ಫಿಟ್ ವ್ಯಾಪ್ತಿಯಲ್ಲಿ ಈಗಿರುವ ಎಂಪೋರಿಯಂ ಕಾರ್ಯನಿರ್ವಹಣೆ ಮಾಡುತ್ತಿದ್ದು ಕರಕುಶಲ ಉತ್ಪನ್ನಗಳು, ಪಾಶ್ಮಿನಾ ಶಾಲ್‌ಗಳು, ಅಪರೂಪದ ರಗ್ ಗಳು, ಲ್ಯಾಂಪ್ ಶೇಡ್, ಪೀಠೋಪಕರಣಗಳಿಗೆ ಖ್ಯಾತಿ ಪಡೆದಿದೆ. ಈ ಎಲ್ಲಾ ಉತ್ಪನ್ನಗಳನ್ನು ದೇಶದ ದೂರದ ಮೂಲೆಗಳಲ್ಲಿರುವ ಕುಶಲಕರ್ಮಿಗಳಿಂದ ತರಿಸಿಕೊಳ್ಳಲಾಗುತ್ತಿತ್ತು.

ಎಂಪೋರಿಯಂ ನ್ನು ಸ್ಥಳಾಂತರಿಸುವ ಮಾಹಿತಿಯನ್ನು ದೃಢೀಕರಿಸಿರುವ ಮುಖ್ಯ ವ್ಯವಸ್ಥಾಪಕ ಪ್ರಮೋದ್ ನಾಗ್ಪಾಲ್, ಬೆಂಗಳೂರಿನ ಮುಖ್ಯ ಶಾಖೆ ಕೆಲವು ವರ್ಷಗಳಿಂದ ನಷ್ಟ ಎದುರಿಸುತ್ತಿದೆ. ಈ ನಡುವೆ ಉಂಟಾದ ಕೊರೋನಾ ಸಹ ಉದ್ಯಮ ನಷ್ಟಕ್ಕೆ ಕಾರಣವಾಗಿದೆ. ಬಾಡಿಗೆಯೂ ಅತಿ ಹೆಚ್ಚಾಗಿದೆ. ನಮ್ಮಲ್ಲಿ ಯಾವುದೇ ಉದ್ಯೋಗಿಯೂ ಉದ್ಯೋಗ ಕಳೆದುಕೊಳ್ಳುವುದಿಲ್ಲ. ಕುಶಲಕರ್ಮಿಗಳಿಗೂ ಅವಕಾಶಗಳು ಕಡಿಮೆಯಾಗುವುದಿಲ್ಲ. ಹೆಚ್ಎಸ್ ಆರ್ ನಲ್ಲಿರುವ ಬಿಡಿಎ ಕಾಂಪ್ಲೆಕ್ಸ್ ನಲ್ಲಿರುವ 6,000 ಚದರ ಅಡಿ ಜಾಗಕ್ಕೆ ಸ್ಥಳಾಂತರಗೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ. 

SCROLL FOR NEXT