ರಾಜ್ಯ

ಸಮುದಾಯಕ್ಕೆ ಹಬ್ಬಿದ ಕೊರೋನಾ? ರಾಜ್ಯದ ಶೇ. 69.8 ಕೋವಿಡ್ ಪ್ರಕರಣಗಳಿಗೆ ಸಂಪರ್ಕ, ಪ್ರಯಾಣ ಇತಿಹಾಸವೇ ಇಲ್ಲ!

ರಾಜ್ಯದಲ್ಲಿ ಇಂದಿನವರೆಗಿನ ಅತಿ ಹೆಚ್ಚು ಕೊರೋನಾವೈರಸ್ ಪ್ರಕರಣಗಳು ಭಾನುವಾರ ದಾಖಲಾಗಿದ್ದು ಕರ್ನಾಟಕದಲ್ಲಿ ಒಂದೇ ದಿನ 1,925 ಕೋವಿಡ್-ಪಾಸಿಟಿವ್ ಪ್ರಕರಣ ವರದಿಯಾಗಿದೆ.

ಬೆಂಗಳುರು: ರಾಜ್ಯದಲ್ಲಿ ಇಂದಿನವರೆಗಿನ ಅತಿ ಹೆಚ್ಚು ಕೊರೋನಾವೈರಸ್ ಪ್ರಕರಣಗಳು ಭಾನುವಾರ ದಾಖಲಾಗಿದ್ದು ಕರ್ನಾಟಕದಲ್ಲಿ ಒಂದೇ ದಿನ 1,925 ಕೋವಿಡ್-ಪಾಸಿಟಿವ್ ಪ್ರಕರಣ ವರದಿಯಾಗಿದೆ. ಇದರಲ್ಲಿ  69.8% (1,345 ಪ್ರಕರಣಗಳು) ಯಾವುದೇ ಸಂಪರ್ಕ ಅಥವಾ ಪ್ರಯಾಣದ ಇತಿಹಾಸವನ್ನು ಹೊಂದಿಲ್ಲ ಎನ್ನುವುದು ಆತಂಕಕಾರಿ ವಿಚಾರ. ರಾಜ್ಯದಲ್ಲಿ ಒಟ್ಟಾರೆ ಕೋವಿಡ್ ಸೋಂಕಿತರ ಸಂಖ್ಯೆ 23,474ಕ್ಕೆ ತಲುಪಿದ್ದರೆ  ನಿನ್ನೆ ಒಂದೇ ದಿನ ರಾಜಧಾನಿ ಬೆಂಗಳೂರಿನಲ್ಲಿ 1,235 ಹೊಸ ಪ್ರಕರಣಗಳು ವರದಿಯಾಗಿತ್ತು.

ಈ ಪೈಕಿ ಕೇವಲ 19 ಮಾತ್ರ ತೀವ್ರವಾದ ಉಸಿರಾಟದ ಕಾಯಿಲೆ ಮತ್ತು ಐಎಲ್ ಐ ಗುಣಲಕ್ಷಣಗಳನ್ನು ಹೊಂದಿದೆ. ಉಳಿದ ಯಾವ ಪ್ರಕರಣಕ್ಕೂ ಪ್ರಯಾಣದ ಇತಿಹಾಸವಿಲ್ಲ. ನಿನ್ನೆ 37 ಜನರು ಕೋವಿಡ್‌ನಿಂದ ಸಾವನ್ನಪ್ಪಿದ್ದರೆ ಒಟ್ಟಾರೆ , 372 ಮಂದಿ ಕೋವಿಡ್ ಮಹಾಮಾರಿಗೆ ಬಲಿಯಾಗಿದ್ದಾರೆ. ಈ ಪೈಕಿ ಭಾನುವಾರ ಬೆಂಗಳುರಿನಲ್ಲಿ 16 ಮಂದಿ ಸಾವನ್ನಪ್ಪಿದ್ದಾರೆ. ಇದುವರೆಗೆ ಸಿಲಿಕಾನ್ ಸಿಟಿಯಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 145 ಕ್ಕೆ ಏರಿದೆ.

ಇವುಗಳಲ್ಲಿ ಕನಿಷ್ಠ 135 ಪ್ರಕರಣಗಳು ಐಎಲ್‌ಐ, 32 ಸಾರಿ, 238 ಪ್ರಾಥಮಿಕ ಸಂಪರ್ಕಗಳು, 53 ಇತರ ರಾಜ್ಯಗಳಿಂದ ಹಿಂದಿರುಗಿದವರು, 11 ಅಂತರರಾಷ್ಟ್ರೀಯ ಪ್ರಯಾಣಿಕರು, ಮತ್ತು ನಾಲ್ಕು ಪ್ರಕರಣಗಳು ಕಂಟೈನ್ಮೆಂಟ್ ವಲಯಗಳಿಂದ ಬಂದವು. ಬೆಂಗಳೂರು ಹೊರತು ದಕ್ಷಿಣ ಕನ್ನಡದಲ್ಲಿ ಅತಿ ಹೆಚ್ಚು 147 ಪ್ರಕರಣಗಳು ವರದಿಯಾಗಿದ್ದು ಬಳ್ಳಾರಿಯಲ್ಲಿ 90, ವಿಜಯಪುರ 51, ಕಲಬುರಗಿ 49 ಮತ್ತು ಉಡುಪಿ, ಧಾರವಾಡಗಳಲ್ಲಿ 45 ಪ್ರಕರಣಗಳು ದಾಖಲಾಗಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಕ್ಕಳ ಸಾವಿಗೆ ಪ್ರತೀಕಾರ: ಇಸ್ರೇಲ್-ಅಮೆರಿಕ, ಗಲ್ಫ್ ದೇಶಗಳ ಮೇಲೆ ದಾಳಿ ನಿಲ್ಲಲ್ಲ; ಇರಾನ್ ಹೊಸ ಸರ್ವೋಚ್ಛ ನಾಯಕ ವಾರ್ನಿಂಗ್!

No shortage of fuel: ಹಾರ್ಮುಜ್ ಜಲಸಂಧಿ ತಲುಪಿಸಬಹುದಾದ ತೈಲಕ್ಕಿಂತ ಹೆಚ್ಚಿನದ್ದು ಬೇರೆಡೆಯಿಂದ ಭಾರತ ತಲುಪಿದೆ; ಪೆಟ್ರೋಲಿಯಂ ಸಚಿವ

ಮಧ್ಯಪ್ರಾಚ್ಯ ಯುದ್ಧಗ್ರಸ್ತ: ತೈಲ, ಅನಿಲ ಪೂರೈಕೆ ವ್ಯತ್ಯಯ ಸಂಕಷ್ಟ; ಆದರೂ ರಹಸ್ಯ'ಭೂಗತ ಗುಹೆ'ಗಳಿಂದ ಭಾರತಕ್ಕೆ No Tension!

ನಮ್ಮ ಶಕ್ತಿ ಇರಾನ್ ನಿರ್ನಾಮಕ್ಕೆ ಮೀಸಲು, ಹಾರ್ಮುಜ್ ಜಲಸಂಧಿಯಲ್ಲಿ ಟ್ಯಾಂಕರ್ ಗಳಿಗೆ ಬೆಂಗಾವಲು ನೀಡಲ್ಲ: ಅಮೆರಿಕ

ಮಾರ್ಚ್ 16 ರಂದು ರಾಜ್ಯದ ಎರಡು ಕ್ಷೇತ್ರಗಳ ಉಪ ಚುನಾವಣೆ ಸೇರಿದಂತೆ ಐದು ರಾಜ್ಯಗಳ ಚುನಾವಣೆ ಘೋಷಣೆ ಸಾಧ್ಯತೆ

SCROLL FOR NEXT