ರಾಜ್ಯ

ರೈಲ್ವೇ ಪೊಲೀಸ್ ಎಎಸ್ಐಗೂ ಅಂಟಿದ ವೈರಸ್: ನೈಋತ್ಯ ರೈಲ್ವೆಯಲ್ಲಿ ಸೋಂಕಿತರ ಸಂಖ್ಯೆ 69ಕ್ಕೆ ಏರಿಕೆ

Manjula VN

ಬೆಂಗಳೂರು:  47 ವರ್ಷದ ರೈಲ್ವೇ ಪೊಲೀಸ್ ಎಎಸ್ಐರಲ್ಲಿ ಕೊರೋನಾ ವೈರಸ್ ದೃಢಪಟ್ಟಿದ್ದು, ಇದರೊಂದಿಗೆ ನೈಋತ್ಯ ವಿಭಾಗದ ರೈಲ್ವೆಯಲ್ಲಿ ಈ ವರೆಗೂ 69 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 

ಕೆಎಸ್ಆರ್ ಬೆಂಗಳೂರು ರೈಲ್ವೇ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಎಸ್ಐನಲ್ಲಿ ಮಂಗಳವಾರ ಕೊರೋನಾ ವೈರಸ್ ದೃಢಪಟ್ಟಿದ್ದು, ಇದೀಗ ಪ್ಲಾಟ್ ಫಾರ್ಮ್ 6ನಲ್ಲಿದ್ದ ಪೊಲೀಸ್ ಠಾಣೆಯನ್ನು ಸೀಲ್"ಡೌನ್ ಮಾಡಿ ಸ್ಯಾನಿಟೈಸ್ ಮಾಡಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.
 
ಈ ನಡುವೆ ಪೊಲೀಸ್ ಅಧಿಕಾರಿಯೊಂದಿಗೆ ಸಂಪರ್ಕದಲ್ಲಿದ್ದ ಇತರೆ ಪೊಲೀಸರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ. 

ವೈರಸ್ ದೃಢಪಟ್ಟಿರುವ ಎಎಸ್ಐ ನಲ್ಲಿ ಯಾವುದೇ ಲಕ್ಷಣಗಳು ಕಂಡು ಬಂದಿರಲಿಲ್ಲ. ಶ್ರಮಿಕ್ ವಿಶೇಷ ರೈಲಿನಲ್ಲಿ ಪ್ರಯಾಣಿಕರೊಂದಿಗೆ ನಿರಂತರ ಸಂವಹನ ನಡೆಸುವುದರಿಂದ ರೈಲ್ವೇ ವಿಭಾಗ ಸುಮಾರು 200 ಮಂದಿ ಸಿಬ್ಬಂದಿಗಳು ಪರೀಕ್ಷೆಗೊಳಗಾಗುವಂತೆ ಸೂಚಿಸಲಾಗಿದೆ. ಪರೀಕ್ಷೆಗೊಳಗಾದ ಹಲವು ಮಂದಿಯ ಪೈಕಿ ಒಬ್ಬರ ವೈದ್ಯಕೀಯ ವರದಿಯಷ್ಟ ಬಂದಿದ್ದು, ಇನ್ನೂ ಹಲವು ವೈದ್ಯಕೀಯ ವರದಿಗಳು ಬರಬೇಕಿದೆ ಎಂದು ರೈಲ್ವೇ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಕಳೆದ ನಾಲ್ಕು ದಿನಗಳಲ್ಲಿ ನೈಋತ್ಯ ರೈಲ್ವೇ ವಿಭಾಗದಲ್ಲಿ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಜುಲೈ.4-7ರವರೆಗೂ 20 ಮಂದಿಯಲ್ಲಿ ವೈರಸ್ ದೃಢಪಟ್ಟಿದೆ. ಇದರೊಂದಿಗೆ ನೈಋತ್ಯ ರೈಲ್ವೇ ವಿಭಾಗದಲ್ಲಿ ಈ ವರೆಗೂ 69 ಮಂದಿಯಲ್ಲ ವೈರಸ್ ದೃಢಪಟ್ಟಿದೆ. ಈ ನಡುವೆ 69 ಮಂದಿ ಸೋಂಕಿತರ ಪೈಕಿ ಹಲವರು ಗುಣಮುಖರಾಗಿದ್ದು, ಇನ್ನೂ 33 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆಂದು ವರದಿಗಳು ತಿಳಿಸಿವೆ. 

SCROLL FOR NEXT