ರಾಜ್ಯ

ರಾಜ್ಯದಲ್ಲಿ ಕೊರೋನಾ ಲಕ್ಷಣ ಸಹಿತ ರೋಗಿಗಳ ಸಂಖ್ಯೆ ಗಣನೀಯ ಏರಿಕೆ: ಹೆಚ್ಚಿದ ಆತಂಕ

Manjula VN

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ಲಕ್ಷಣ ಸಹಿತ ರೋಗಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಆತಂಕ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ. 

ಜೂನ್ 29 ರಿಂದ ಜುಲೈ. 5ರವರೆಗೂ ಅಂದರೆ 7 ದಿನಗಳವರೆಗೂ ನಡೆದ ಕೊರೋನಾ ಪರೀಕ್ಷೆಯಲ್ಲಿ ಲಕ್ಷಣ ಇರುವ ರೋಗಿಗಳ ಶೇಕಡಾವಾರು 34.5ರಷ್ಟು ಏರಿಕೆ ಕಂಡಿದೆ. ಲಕ್ಷಣ ರಹಿತ ಪ್ರಕರಣಗಳು ಜೂನ್. ಮೊದಲವಾರದವರೆಗೂ ಶೇ.96ರಷ್ಟಿತ್ತು. ಇದೀಗ ಶೇ.65.5ಕ್ಕೆ ಇಳಿಕೆ ಕಂಡಿದೆ ಎಂದು ಕೋವಿಡ್ ವಾರ್ ರೂಮ್ ವರದಿಗಳು ತಿಳಿಸಿವೆ. 

ಈ ಅವಧಿಯಲ್ಲಿ, 10,824 ಪ್ರಕರಣಗಳು ವರದಿಯಾಗಿದ್ದು. ಜುಲೈ 6 ರಂತೆ ಜಿಲ್ಲಾವಾರು ರೋಗಲಕ್ಷಣ ಮತ್ತು ಲಕ್ಷಣರಹಿತ ಪ್ರಕರಣಗಳನ್ನು ಗಮನಿಸಿದರೆ ಲಕ್ಷಣರಹಿತ ರೋಗಿಗಳಿಗಿಂತ ಹೆಚ್ಚಿನ ರೋಗಲಕ್ಷಣ ಇರುವ ಸಂಖ್ಯೆ ಹೆಚ್ಚಾಗಿರುವುದು ಕಂಡು ಬಂದಿದೆ.  ಇವುಗಳಲ್ಲಿ ರಾಯಚೂರು 91.7%, ವಿಜಯಪುರ 67.3%, ಧಾರವಾಡ 60.5%, ಕೊಪ್ಪಲ್ 60% ಮತ್ತು ಮೈಸೂರು 54.7%ರಷ್ಟು ರೋಗಲಕ್ಷಣದ ಪ್ರಕರಣಗಳು ಕಂಡು ಬಂದಿದೆ. 

ಈ ಬೆಳವಣಿಗೆಯಲ್ಲಿ ಅನುಕೂಲ ಹಾಗೂ ಅನಾನುಕೂಲ ಎರಡೂ ಇವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

ಪ್ರಸಕ್ತ ತಿಂಗಳಿನಲ್ಲಿ ಸಾಕಷ್ಟು ಜನರಲ್ಲಿ ರೋಗ ಲಕ್ಷಣಗಳಾದ ತಲೆನೋವು, ಬಾಡಿ ಪೇನ್, ಗಂಟಲು ನೋವು, ರುಚಿ ತಿಳಿಯದೇ ಇರುವಂತಹ ಲಕ್ಷಣಗಳು ಕಂಡು ಬಂದಿದೆ. ಈ ಬೆಳವಣಿಗೆಗಳು ಸಾಕಷ್ಟು ಎಚ್ಚರಿಕೆಗಳನ್ನು ನೀಡುತ್ತವೆ. ಲಕ್ಷಣ ಕಂಡು ಬಂದ ಕೂಡಲೇ ಜನರು ಪರೀಕ್ಷೆಗೊಳಗಾಗುತ್ತಾರೆ. ಕೂಡಲೇ ಕ್ವಾರಂಟೈನ್ ಗೊಳಗಾಗಿ ಚಿಕಿತ್ಸೆ ಪಡೆಯಬಹುದಾಗಿದೆ. ಇದರಿಂದ ಸೋಂಕು ಹರಡುವುದು ಕಡಿಮೆಯಾಗಲಿದೆ. ಲಕ್ಷಣ ರಹಿತ ಬೆಳವಣಿಗೆಗಳು ಸೋಂಕು ಮತ್ತಷ್ಟು ಹರಡುವಂತೆ ಮಾಡುತ್ತದೆ ಎಂದು ತಜ್ಞ ವೈದ್ಯರು ತಿಳಿಸಿದ್ದಾರೆ. 

SCROLL FOR NEXT