ರಾಜ್ಯ

ಕೋವಿಡ್ ಹೆಚ್ಚಳ: ಕೊಡಗು ಜಿಲ್ಲೆಯಲ್ಲಿ ಪ್ರವಾಸಿ ತಾಣ, ಹೋಂ ಸ್ಟೇಗಳ ಸ್ಥಗಿತ

Srinivas Rao BV

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಶುಕ್ರವಾರ 9 ಹೊಸ ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 131ಕ್ಕೆ ತಲುಪಿದೆ. ಪರಿಣಾಮವಾಗಿ ಜಿಲ್ಲೆಯ ಪ್ರವಾಸಿ ತಾಣಗಳು, ಲಾಡ್ಜ್‌ ಮತ್ತು ಹೋಂಸ್ಟೇಗಳನ್ನು ಸ್ಥಗಿತಗೊಳಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. 

ವಿರಾಜ್‌ಪೇಟೆಯ ತಿಥಿಮತಿಯ ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕಿತರಾಗಿದ್ದ ಇಬ್ಬರಲ್ಲಿ ಸೋಂಕು ದೃಢಪಟ್ಟಿದೆ. ಇಲ್ಲಿನ 19 ರಿಂದ 65 ವರ್ಷದೊಳಗಿನ ಏಳು ವ್ಯಕ್ತಿಗಳಿಗೆ ಸೋಂಕು ತಗುಲಿದೆ ಎಂದು ಜಿಲ್ಲಾಧಿಕಾರಿ ಅನ್ನೀಸ್ ಕಣ್ಮಣಿ ಜಾಯ್ ಮಾಹಿತಿ ನೀಡಿದ್ದಾರೆ. 

ವಿರಾಜ್‌ಪೇಟೆಯ ಅಯ್ಯಪ್ಪ ಸ್ವಾಮಿ ರಸ್ತೆಯಲ್ಲಿ ಜ್ವರದಿಂದ ಬಳಲುತ್ತಿರುವ 55 ವರ್ಷದ ಮಹಿಳೆ ಮತ್ತು ಜ್ವರ ಲಕ್ಷಣಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದ 34 ವರ್ಷದ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿದೆ. ಜೊತೆಗೆ, ವಿರಾಜ್‌ಪೇಟೆಯಅಯ್ಯಪ್ಪ ಸ್ವಾಮಿ ರಸ್ತೆ, ಗೋಣಿಕೊಪ್ಪ ಮತ್ತು ಕುಟ್ಟಾದಲ್ಲಿ ಮೂರು ಸೋಂಕಿತರು ಪತ್ತೆಯಾಗಿದ್ದಾರೆ. ಜಿಲ್ಲೆಯಲ್ಲಿ 53 ಕಂಟೈನ್ಮೆಂಟ್ ವಲಯಗಳಿವೆ. ಈಗಾಗಲೇ 18 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದು, ಜಿಲ್ಲೆಯಲ್ಲಿ ಒಟ್ಟು ಸಕ್ರಿಯ 112 ಪ್ರಕರಣಗಳಿವೆ.

ಈ ಹಿಂದೆ ಜಿಲ್ಲಾಧಿಕಾರಿಗಳು ಅತ್ಯುನ್ನತ ರೆಸಾರ್ಟ್‌ಗಳಿಗೆ ಬೆಂಗಳೂರು ಮತ್ತು ನೆರೆಯ ಕೇರಳದಿಂದ ಆಗಮಿಸಿದ ವ್ಯಕ್ತಿಗಳಿಗೆ ಅಲ್ಲಿಯೆ ಉಳಿಯಲು ಅನುಮತಿ ನೀಡಿ ಆದೇಶ ಹೊರಡಿಸಿದ್ದಾರೆ. ಸಾಂಕ್ರಾಮಿಕ ರೋಗದ ಹರಡುವಿಕೆಯಿಂದ ಇತ್ತೀಚೆಗೆ ಕೆಲವು ಜಿಲ್ಲೆಗಳಲ್ಲಿ ಸ್ಥಳೀಯರು ಪ್ರವಾಸಿಗರನ್ನು ದೂರವಿಡುತ್ತಿದ್ದಾರೆ ಎಂಬ ವರದಿಗಳ ಮಧ್ಯೆ ಈ ಆದೇಶ ಹೊರಬಿದ್ದಿದೆ.

ಜಿಲ್ಲೆಯಲ್ಲಿ ಪ್ರಕರಣಗಳು ಹೆಚ್ಚಾದ ನಂತರ ಕೊಡಗಿನ ಹೋಟೆಲ್, ರೆಸ್ಟೋರೆಂಟ್ ಮತ್ತು ರೆಸಾರ್ಟ್ ಅಸೋಸಿಯೇಷನ್ ಮತ್ತು ಹೋಂಸ್ಟೇ ಅಸೋಸಿಯೇಷನ್ ಗಳು ಜೂನ್ 25ರಿಂದ 21 ದಿನಗಳ ಚಟುವಟಿಕೆಗಳನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿತ್ತು. ಆದರೆ, ಕೆಲವು ರೆಸಾರ್ಟ್‌ಗಳು ಬುಕಿಂಗ್‌ಗಳನ್ನು ಸ್ವೀಕರಿಸುವುದನ್ನು ಮತ್ತು ಅತಿಥಿಗಳನ್ನು ತೊಡಗಿಸಿಕೊಳ್ಳುವುದನ್ನು ಮುಂದುವರೆಸಿವೆ. 

ಸಾರ್ವಜನಿಕ ಆರೋಗ್ಯ ಸುರಕ್ಷತೆಯ ದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಆದೇಶ ಹೊರಡಿಸಲಾಗಿದೆ. ಮುಂದಿನ ಆದೇಶದವರೆಗೆ ಅಂತಾರಾಜ್ಯ, ಅಂತರ ಜಿಲ್ಲೆ ಮತ್ತು ಅಂತರರಾಷ್ಟ್ರೀಯ ಪ್ರಯಾಣಿಕರಿಂದ ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಹೊಸ ಬುಕಿಂಗ್‌ಗಳನ್ನು ಸ್ವೀಕರಿಸದಂತೆ ಸ್ಟೇ ಹೋಂಗಳಿಗೆ ಸೂಚಿಸಲಾಘಿದೆ. ಈಗಾಗಲೇ ಚೆಕ್-ಇನ್ ಮಾಡಿದ ಪ್ರವಾಸಿಗರನ್ನು ಖಾಲಿ ಮಾಡಲು ಒತ್ತಾಯಿಸಬಾರದು ಮತ್ತು ಅವರ ಬುಕಿಂಗ್ ಅವಧಿಯವರೆಗೆ ಉಳಿಯಲು ಅವಕಾಶ ನೀಡಬೇಕು. ಕಿಂಗ್ ಅವಧಿಯನ್ನು ವಿಸ್ತರಿಸಬಾರದು ಮತ್ತು ಕಾಯ್ದಿರಿಸಿದವರಿಗೆ ಮಾಹಿತಿ ನೀಡಿದ ನಂತರ ಮುಂಗಡ ಕಾಯ್ದಿರಿಸುವಿಕೆಯನ್ನು ರದ್ದುಗೊಳಿಸಬೇಕು ಎಂದು ಆದೇಶ ತಿಳಿಸಿದೆ. 

ಆದರೆ, ವೈದ್ಯಕೀಯ ಮತ್ತು ತುರ್ತು ಕಾರಣಗಳಿಗಾಗಿ ಜಿಲ್ಲೆಗೆ ಭೇಟಿ ನೀಡುವ ಜನರಿಗೆ ವಿನಾಯಿತಿ ನೀಡಲಾಗಿದೆ ಮತ್ತು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡುವುದರ ಜೊತೆಗೆ ಅವರ ವಿವರಗಳನ್ನು ಸಂಗ್ರಹಿಸಿದ ನಂತರ ಅವರಿಗೆ ಕೊಠಡಿಗಳನ್ನು ಹಂಚಿಕೆ ಮಾಡಬಹುದು ಎಂದು ಜಾಯ್ ತಿಳಿಸಿದ್ದಾರೆ.  ರೆಸಾರ್ಟ್‌ಗಳು ಮತ್ತು ಹೋಂಸ್ಟೇಗಳು ತನ್ನ ಆದೇಶವನ್ನು ಮೀರಿದರೆ ಸೆಕ್ಷನ್ 188 ಐಪಿಸಿ ಅಡಿಯಲ್ಲಿ ಕ್ರಮ ಕೈಗೊಳ್ಳುವುದಾಗಿ ಜಾಯ್ ಎಚ್ಚರಿಸಿದ್ದಾರೆ.

SCROLL FOR NEXT