ರಾಜ್ಯ

ನಿಷೇಧವಿದ್ದರೂ ಆಷಾಢ ಶುಕ್ರವಾರ ಹಿನ್ನೆಲೆ ಸಾಲಿನಲ್ಲಿ ನಿಂತು ಚಾಮುಂಡಿ ದರ್ಶನ ಪಡೆದ ವಿಐಪಿಗಳು!

Manjula VN

ಮೈಸೂರು: ಆಷಾಢ ಶುಕ್ರವಾರ ಹಿನ್ನೆಲೆಯಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಿದ್ದರೂ, ವಿಐಪಿಗಳೂ ಮಾತ್ರ ಸಾಲಿನಲ್ಲಿ ನಿಂತು ತಾಯಿ ಚಾಮುಂಡೇಶ್ವರಿ ದರ್ಶನ ಪಡೆದಿದ್ದಾರೆ. 

ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾ ಆಡಳಿತ ಮಂಡಳಿಯು ಚಾಮುಂಡೇಶ್ವರಿ ದೇವಾಲಯಕ್ಕೆ ನಾಲ್ಕು ಆಷಾಢ ಶುಕ್ರವಾರದಂದು ಸಾರ್ವಜನಿಕರಿಗೆ ನಿಷೇಧ ಹೇರಿತ್ತು. ಆದರೆ, ಈ ನಿಯಮ ನಟರು, ಜನಪ್ರತಿನಿಧಿಗಲು ಹಾಗೂ ರಾಜಕೀಯ ನಾಯಕರಿಗೆ ಹೊರತಾಗಿದ್ದ ಹಿನ್ನೆಲೆಯಲ್ಲಿ ನಿನ್ನೆ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಪ್ರತಾಪ್ ಸಿಂಹ, ಶಾಸಕ ನಾಗೇಂದ್ರ ಹಾಗೂ ಅವರು ಕುಟುಂಬ, ಅನುಯಾಯಿಗಳು. ನಟ ದರ್ಶನ್ ಅವರು ದೇವಾಲಯಕ್ಕೆ ಭೇಟಿ ನೀಡಿ ಚಾಮುಂಡೇಶ್ವರಿ ದರ್ಶನ ಪಡೆದರು. 

ದರ್ಶನ್ ಅವರೊಂದಿಗೆ ಉಪ ಮೇಯರ್ ಶ್ರೀಧರ್ ಕೂಡ ದೇವಾಲಯಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯಕ್ಕೆ ವಿಐಪಿಗಳು ಭೇಟಿ ನೀಡಿದ ಸಂದರ್ಭದಲ್ಲಿ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಎಂಬ ನಿಯಮಗಳ ಉಲ್ಲಂಘನೆಯಾಗಿರುವುದು ಕಂಡು ಬಂದಿತ್ತು. 

ಕೊರೋನಾ ಲಾಕ್'ಡೌನ್ ನಿಯಮ ಉಲ್ಲಂಘನೆ ಮಾಡಿದ್ದಾರೆಂದು ಸಾಮಾನ್ಯ ಜನರ ಮೇಲೆ ಪ್ರಕರಣ ದಾಖಲಿಸಲಾಗುತ್ತದೆ. ಆದರೆ, ಜನಪ್ರತಿನಿಧಿಗಳ ಮೇಲೇಕೆ ಪ್ರಕರಣಗಳು ದಾಖಲಾಗುವುದಿಲ್ಲ ಎಂದು ಇದೀಗ ಹಲವರು ಪ್ರಶ್ನೆ ಮಾಡುತ್ತಿದ್ದಾರೆ. 

SCROLL FOR NEXT