ರಾಜ್ಯ

ಬೆಂಗಳೂರು ಲಾಕ್'ಡೌನ್: ರೈಲು, ವಿಮಾನಗಳ ಸಂಚಾರ ಎಂದಿನಂತೆ ಮುಂದುವರಿಕೆ

Manjula VN

ಬೆಂಗಳೂರು: ಕೊರೋನಾವೈರಸ್ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ಮತ್ತೆ ಲಾಕ್'ಡೌನ್ ಮಾಡಲಾಗುತ್ತಿದ್ದು, ಲಾಕ್'ಡೌನ್ ನಡುವಲ್ಲೂ ರೈಲು ಹಾಗೂ ವಿಮಾನಗಳ ಸಂಚಾರ ಎಂದಿನಂತೆ ಮುಂದುವರೆಯಲಿದೆ ಎಂದು ಹೇಳಲಾಗುತ್ತಿದೆ. 

ಲಾಕ್'ಡೌನ್ ಮಾಡಲು ಸರ್ಕಾರ ಘೋಷಣೆ ಮಾಡಿದ್ದು, ಈ ಕುರಿತು ಇನ್ನು ವಿವರವಾದ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿಲ್ಲ. ಹೀಗಾಗಿ ರೈಲು ಪ್ರಯಾಣಿಕರು ಹಾಗೂ ವಿಮಾನ ಪ್ರಯಾಣಿಕರು ಗೊಂದಲಕ್ಕೆ ಸಿಲುಕಿಕೊಂಡಿದ್ದಾರೆ. 

ಈಗಾಗಲೇ ವಿಮಾನಗಳಲ್ಲಿ ಸಂಚರಿಸಲು ಹಲವು ಜನರು ಟಿಕೆಟ್ ಗಳನ್ನು ಕಾಯ್ದಿರಿಸಿದ್ದು, ಅಂತಹವರು ಸಂಚಾರ ಮಾಡಲು ಯಾವುದೇ ಸಮಸ್ಯೆಗಳಿಲ್ಲ ಎಂದು ಮೂಲಗಳು ಮಾಹಿತಿ ನೀಡಿದೆ. 

ನಿನ್ನೆಯಷ್ಟೇ ಕೆಲ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದ್ದ ಸರ್ಕಾರ ವಿಮಾನ ಹಾಗೂ ರೈಲುಗಳ ಸಂಚಾರಗಳು ಎಂದಿನಂತೆ ಮುಂದುವರೆಯಲಿವೆ ಎಂದು ತಿಳಿಸಿತ್ತು. ಆದರೆ, ರೈಲು ಹಾಗೂ ವಿಮಾನ ನಿಲ್ದಾಣಗಳಿಗೆ ತೆರಳು ಸಾರ್ವಜನಿಕರು ಸ್ವತಃ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕಾಗಿದೆ. ಪ್ರಯಾಣಿಕರು ಕ್ಯಾಬ್ ನಿಂದ ತೆರಳಲು ಮುಂದಾದರೆ, ಅವರಿಗೆ ಕ್ಯಾಬ್ ಚಾಲಕರ ಬಳಿಯಿರುೋವ ಇ ಪಾಸ್ ಗಳ ಮೂಲಕ ಅವರ ಸಂಚಾರಕ್ಕೆ ಅನುಮತಿ ನೀಡಲಾಗುತ್ತಿದೆ ಎಂದು ತಿಳಿಸಿವೆ. 

ಬೆಂಗಳೂರಿನಲ್ಲಿ ಜು.14ರಿಂದ ಲಾಕ್'ಡೌನ್ ಘೋಷಣೆ ಮಾಡಲಾಗಿದೆ. ಲಾಕ್ಡೌನ್ ಇದ್ದರೂ ವಿಮಾನ ಸಂಚಾರ ಮುಂದುವರೆಯಲಿವೆಯೇ? ಬೆಂಗಳೂರಿನಿಂದ ದೆಹಲಿಗೆ ತೆರಳಲು ನಾನು ಜುಲೈ.15ಕ್ಕೆ ವಿಮಾನ ಟಿಕೆಟ್ ಬುಕ್ ಮಾಡಿದ್ದೇನೆಂದು ಪವನ್ ಬಾಲಿ ಎಂಬ ವ್ಯಕ್ತಿ ವಿಮಾನ ನಿಲ್ದಾಣಕ್ಕೆ ಟ್ವೀಟ್ ಮಾಡುವ ಮೂಲಕ ಪ್ರಶ್ನಿಸಿದ್ದಾರೆ. 

ಚೆನ್ನೈನಿಂದ ಬೆಂಗಳೂರಿಗೆ ತೆರಳಲು ಜು.15 ರಂದು ಟಿಕೆಟ್ ಬುಕ್ ಮಾಡಿದ್ದಾರೆ. ಲಾಕ್ಡೌನ್ ವೇಳೆ ಬೆಂಗಳೂರಿನಲ್ಲಿ ವಿಮಾನ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದ್ದೆಯೇ? ದಯವಿಟ್ಟು ಸ್ಪಷ್ಟಪಡಿಸಿ ಎಂದು ಮತ್ತೊಬ್ಬ ವ್ಯಕ್ತಿ ಇಂಡಿಗೋಗೆ ಪ್ರಶ್ನಿಸಿದ್ದಾರೆ. 

ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಎ.ಎನ್.ಕೃಷ್ಣ ರೆಡ್ಡಿಯವರು ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಸರ್ಕಾರ ಬಿಡುಗಡೆ ಮಾಡುವ ಮಾರ್ಗಸೂಚಿಗಳಿಗಾಗಿ ಕಾಯುತ್ತಿದ್ದೇವೆ. ಅಂತರ್ ರಾಜ್ಯ ರೈಲುಗಳಿಗೆ ಉತ್ತಮ ಪ್ರತಿಕ್ರಿಯೆಗಳಉ ಬರುತ್ತಿವೆ. ಬೆಂಗಳೂರಿನ ಇತರೆ ರಾಜ್ಯಗಳಿಗೆ 5 ವಿಶೇಷ ರೈಲುಗಳು ಸಂಚಾರ ನಡೆಸುತ್ತಿವೆ. ಯಶವಂತಪುರ-ಹೌರಾ (ವಾರದಲ್ಲಿ 5 ದಿನಗಳು), ಕೆಂಪೇಗೌಡ ರೈಲ್ವೇ ನಿಲ್ದಾಣದಿಂದ ಬಿಹಾರದ ದಾನಾಪುರ (ವಾರದ 7 ದಿನಗಳು), ಯಶವಂತಪುರ-ಹಜ್ರತ್ ನಿಜಾಮುದ್ದೀನ್ (ವಾರದಲ್ಲಿ 2 ದಿನ), ರಾಜಧಾನಿ ವಿಶೇಷ ರೈಲು ಕೆಂಪೇಗೌಡ ರೈಲ್ವೇ ನಿಲ್ದಾಣದಿಂದ ನವದೆಹಲಿ (7 ದಿನಗಳುಃ, ಉದ್ಯಾನ್ ಎಕ್ಸ್'ಪ್ರೆಸ್-ಮುಂಬೈ, ರಾಜ್ಯ ಬಾಹ್ಯ ವಿಶೇಷ ರೇಲುಗಳಲ್ಲಿ ಕೆಂಪೇಗೌಡ ರೈಲ್ವೇ ನಿಲ್ದಾಣದಿಂದ ಮೈಸೂರು-ಬೆಳಗಾವಿ, ಜನ್ ಶತಾಬ್ದಿ ರೈಲು-ಹುಬ್ಬಳ್ಳಿ ರೈಲುಗಳು ಸಂಚಾರ ನಡೆಸುತ್ತಿವೆ ಎಂದು ಮಾಹಿತಿ ನೀಡಿದ್ದಾರೆ. 

SCROLL FOR NEXT