ರಾಜ್ಯ

'ದೇವರ ಕೃಪೆ ನಮ್ಮ ಮೇಲಿರಬೇಕೆಂದು' ಸಾಮಾನ್ಯ ಅರ್ಥದಲ್ಲಿ ಹೇಳಿದ್ದೇನೆ; ನಮ್ಮ ಕೈ ಮೀರಿಲ್ಲ: ಸಚಿವ ಶ್ರೀರಾಮುಲು ಸ್ಪಷ್ಟನೆ

Srinivasamurthy VN

ಚಿತ್ರದುರ್ಗ: ಮುಖ್ಯಮಂತ್ರಿ ಅವರ ಜತೆ ನಾವೆಲ್ಲರೂ ಹಗಲಿರುಳೂ ಕೆಲಸ ಮಾಡುತ್ತಿದ್ದೇವೆ. 'ದೇವರ ಕೃಪೆಯೂ ನಮ್ಮೆಲ್ಲರ ಮೇಲಿರಬೇಕು' ಎಂಬ ಮಾತನ್ನು ಸಾಮಾನ್ಯ ಅರ್ಥದಲ್ಲಿ ಹೇಳಿದ್ದೇನೆಯೇ ಹೊರತು, ಹತಾಶೆಯಿಂದಲ್ಲ ಎಂದು ಆರೋಗ್ಯ ಸಚಿವ ಶ್ರೀರಾಮುಲು ಸ್ಪಷ್ಟೀಕರಣ ನೀಡಿದ್ದಾರೆ.

ಇಂದು ಬೆಳಗ್ಗೆ ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಕೊರೋನಾ ಸೋಂಕು ತೀವ್ರವಾಗಿ ವ್ಯಾಪಿಸುತ್ತಿದೆ.ನಿಯಂತ್ರಣ ಮಾಡಲು ನಮ್ಮಿಂದ ಸಾಧ್ಯವಿಲ್ಲ.ರಾಜ್ಯವನ್ನು ದೇವರೇ ಕಾಪಡಬೇಕೆಂದು ಹೇಳಿಕೆ ನೀಡಿದ್ದರು.ಕೋವಿಡ್ ಸೋಂಕಿತರನ್ನು ರಕ್ಷಿಸಲು,ಚಿಕಿತ್ಸೆ ನೀಡಲು ಸರ್ಕಾರ ದಿಂದ ಸಾಧ್ಯವಿಲ್ಲ.ಎಲ್ಲವೂ ನಮ್ಮ ಕೈಮೀರಿ ಹೋಗಿದೆ ಎಂಬರ್ಥದಲ್ಲಿ ಸಚಿವ ಶ್ರೀರಾಮುಲು ಹೇಳಿಕೆ ನೀಡಿದ್ದರು.ಈ ಬಗ್ಗೆ ಮತ್ತೆ ಸಂಜೆ ಸ್ಪಷ್ಟೀಕರಣ ನೀಡಿರುವ ಆರೋಗ್ಯ ಸಚಿವರು ನಾನು ಈ ಅರ್ಥದಲ್ಲಿ ಹೇಳಿಕೆ ನೀಡಿಲ್ಲವೆಂದು ಸ್ಪಷ್ಟೀಕರಣ ನೀಡಿದ್ದಾರೆ.

ದೇವರು ದೊಡ್ಡವನು, ನಮ್ಮೆಲ್ಲ ಪ್ರಯತ್ನಗಳಿಗೆ ಅವನ ಕೃಪೆಯೂ ಇರಬೇಕು' ಎಂಬ ಮಾತಿಗೆ ನಾನು ಈಗಲೂ ಬದ್ಧನಾಗಿದ್ದೇನೆ.ಮುಖ್ಯಮಂತ್ರಿ ಯಡಿ ಯೂರಪ್ಪ ಅವರ ನೇತೃತ್ವದ ಸರ್ಕಾರ ಕೋವಿಡ್ ಸೋಂಕು ಹರಡುವುದನ್ನು ನಿಯಂತ್ರಿಸಲು ಮತ್ತು ಸೋಂಕಿತರ ಚಿಕಿತ್ಸೆಗೆ ಎಲ್ಲ ಅತ್ಯಗತ್ಯ ಕ್ರಮಗಳನ್ನು ಕೈಗೊಂಡಿದೆ.ಇಡೀ ಸರ್ಕಾರ ಸಮಸ್ತ ಜನರ ಪರವಾಗಿ ಕೆಲಸ ಮಾಡುತ್ತಿದೆ. ಯಾರಿಗೂ ಆತಂಕ ಬೇಡ.ನಿಯಮಗಳ ನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಸೋಂಕು ನಿಯಂತ್ರಿಸುವಲ್ಲಿ ಎಲ್ಲರೂ ಸಹಕರಿಸಬೇಕೆಂದು ಕೋರು ತ್ತೇನೆಂದು ಮತ್ತೊಮ್ಮೆ ಮನವಿ ಮಾಡಿಕೊಂಡಿದ್ದಾರೆ. 

SCROLL FOR NEXT