ರಾಜ್ಯ

ಸಿಎಂ ಲೆಕ್ಕ ಕೊಡಿ ಅಭಿಯಾನ: ಯಡಿಯೂರಪ್ಪ ಮುಂದೆ ಸಾಲು ಸಾಲು ಪ್ರಶ್ನೆಯಿಟ್ಟ ಸಿದ್ದರಾಮಯ್ಯ

Manjula VN

ಬೆಂಗಳೂರು: ಕೊರೋನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರದ ಖರ್ಚುವೆಚ್ಚಗಳ ಕುರಿತು ಟ್ವಿಟರ್ ನಲ್ಲಿ ಸಿಎಂ ಲೆಕ್ಕಕೊಡಿ ಎಂಬ ಹ್ಯಾಶ್'ಟ್ಯಾಗ್ ಮೂಲಕ ಅಭಿಯಾನ ಆರಂಭಿಸಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಂಗಳವಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಾಲು ಸಾಲು ಪ್ರಶ್ನೆ ಕೇಳಿದ್ದಾರೆ. 

ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು, ಸರ್ಕಾರಕ್ಕೆ ಕೊರೋನಾ ಕುರಿತಾದ ವಿವರಗಳನ್ನು ಕೇಳಿ ಯಡಿಯೂರಪ್ಪ ಅವರಿಗೆ ಬರೆದಿರುವ ಪತ್ರಗಳನ್ನು ಪ್ರಕಟಿಸಿದ್ದಾರೆ. 

ಕೆಎಸ್‌ಆರ್‌ಟಿಸಿ ನೌಕರರಿಗೆ ವೇತನವಿಲ್ಲದೆ ಕಡ್ಡಾಯ ರಜೆ ವಿಧಿಸುವ ಸಿಎಂ ಪ್ರಸ್ತಾಪವು ಕಾರ್ಮಿಕ ವಿರೋಧಿ ಮತ್ತು ಅಮಾನವೀಯವಾಗಿದೆ. ಇತರೆ ಕಂಪನಿಗಳು ಹಾಗೂ ಖಾಸಗಿ ಕಂಪನಿಗಳೂ ಕೂಡ ಇದೇ ರೀತಿಯ ನಿರ್ಧಾರಗಳನ್ನು ಕೈಗೊಂಡರೆ ಲಕ್ಷಾಂತರ ನೌಕರರ ಪರಿಸ್ಥಿತಿ ಏನಾಬಹುದು ಎಂಬುದನ್ನು ಕಲ್ಪಿಸಿಕೊಂಡು ನೋಡಿ...ಸರ್ಕಾರ ದಿವಾಳಿಯಾಗಿದೆಯೇ? 

ಕ್ಷೀರಭಾಗ್ಯ ಯೋಜನೆಯಡಿ ಹಾಲಿನ ಖರೀದಿ ಬೆಲೆಯನ್ನು ಕಡಿಮೆ ಮಾಡುವ ಸರ್ಕಾರದ ನಿರ್ಧಾರವು ಕೋವಿಡ್ 19 ರ ಈ ಸಂಕಷ್ಟ ಕಾಲದಲ್ಲಿ ರೈತರ ಹಿತಾಸಕ್ತಿಗೆ ವಿರುದ್ಧವಾಗಿದೆ. ಖರೀದಿ ದರವನ್ನು ಪ್ರತಿ ಲೀಟರ್‌ಗೆ 35 ರೂ.ಗೆ ನಿಗದಿಪಡಿಸಬೇಕು ಮತ್ತು ಎಲ್ಲಾ ಬಾಕಿಯಿರುವ ಹಣವನ್ನು ರೈತರಿಗೆ ನೀಡಬೇಗು ಎಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು

SCROLL FOR NEXT